Advertisement

ಮಾನ್ಯತೆಗಾಗಿ ತುಳುವರ ಪರ ನಿಲ್ಲುವೆ: ಡಾ|ಹೇಮಾವತಿ ಹೆಗ್ಗಡೆ

01:17 AM Feb 06, 2023 | Team Udayavani |

ಬೆಳ್ತಂಗಡಿ : ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿಸುವ ಕುರಿತು ಸರಕಾರವು ಡಾ| ಮೋಹನ್‌ ಆಳ್ವರ ನೇತೃತ್ವದಲ್ಲಿ ರಚಿಸಿರುವ ಸಮಿತಿಯನ್ನು ತುಳುವರಾದ ನಾವೆಲ್ಲರೂ ಸ್ವಾಗತಿಸಬೇಕಿದ್ದು, ತುಳುವಿಗೆ ಮಾನ್ಯತೆ ಸಿಗುವವರೆಗೆ ತುಳುವರ ಪರ ನಿಂತು ಧ್ವನಿಯಾಗುವೆ ಎಂದು ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಡಾ| ಹೇಮಾವತಿ ವೀ.ಹೆಗ್ಗಡೆ ತಮ್ಮ ನಿರ್ಧಾರ ಪ್ರಕಟಿಸಿದರು.

Advertisement

ಉಜಿರೆ ಶ್ರೀಕೃಷ್ಣಾನುಗ್ರಹ ಸಭಾ ಭವನದ ಸಾರಾ ಅಬೂಬಕ್ಕರ್‌ ವೇದಿಕೆಯಲ್ಲಿ ರವಿವಾರ ಜರಗಿದ 25ನೇ ರಜತ ಸಂಭ್ರಮದ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು ತುಳುವಿಗೆ ಮಾನ್ಯತೆ ದೊರೆ ತಾಗ ತುಳು ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿ ವೇಗ ಹೆಚ್ಚಲಿದೆ. ಸರಕಾರ ಘೋಷಣೆಗೆ ತುಳುವರಾದ ನಾವೆಲ್ಲ ಹಕ್ಕೊತ್ತಾಯ ಮಾಡಬೇಕಿದೆ ಎಂದರು.

ಮನಸ್ಸುಗಳು ಒಗ್ಗೂಡುವ ಸಾಹಿತ್ಯ ಬೇಕು: ಡಾ| ಹೆಗ್ಗಡೆ
ಎಲ್ಲರ ಮನಸ್ಸು ಭಾಷಾ ಸಂಸ್ಕೃತಿಗೆ ಒಗ್ಗೂಡುವ ಸಾಹಿತ್ಯ ಬೇಕು. ಸಾಹಿತ್ಯಕ್ಕೆ ಸಾಹಿತ್ಯಾಭಿಮಾನಿಗಳು ಮುಖ್ಯ. ಪ್ರೇಕ್ಷಕರಿಂದ ಆಕರ್ಷಣೆಗೊಳಗಾಗುವ ಸಾರವಿರುವ ಕಥೆ, ಸಿನೆಮಾ, ಪುಸ್ತಕಗಳು ಬೇಕು. ಹಾಗಾದಲ್ಲಿ ಮೌಲ್ಯ ತನ್ನಿಂದ ತಾನೆ ಬರುತ್ತದೆ ಎಂದು ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು.

ಮುಂಬಯಿ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ| ತಾಳ್ತಜೆ ವಸಂತ ಕುಮಾರ್‌ ಸಮಾರೋಪ ಭಾಷಣ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ| ಎಂ ಪಿ. ಶ್ರೀನಾಥ್‌ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನ ಗೌರವಾಧ್ಯಕ್ಷ ಡಿ. ಹಷೇìಂದ್ರ ಕುಮಾರ್‌, ಕರ್ಣಾಟಕ ಬ್ಯಾಂಕ್‌ ಆಡಳಿತ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ. ಎಸ್‌., ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಂಯೋಜನ ಸಮಿತಿ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ, ಡಾ| ಮಾಧವ ಎಂ.ಕೆ., ರಾಜೇಶ್ವರಿ ಎಂ., ಪುಷ್ಪಾವತಿ ಆರ್‌.ಶೆಟ್ಟಿ ಉಪಸ್ಥಿತರಿದ್ದರು.
ಡಿ.ಯದುಪತಿ ಗೌಡ ಸ್ವಾಗತಿಸಿ ದರು. ರಾಮಕೃಷ್ಣ ಭಟ್‌ ವಂದಿಸಿದರು. ದೇವುದಾಸ್‌ ನಾಯಕ್‌ ಹಾಗೂ ಅಜಿತ್‌ ಕೊಕ್ರಾಡಿ ನಿರೂಪಿಸಿದರು.

ಸಾಧಕರಿಗೆ ಸಮ್ಮಾನ
ಡಾ| ಚಿದಾನಂದ ಕೆ.ವಿ. (ವೈದ್ಯಕೀಯ), ಎಡ್ವರ್ಡ್‌ ಡಿ’ ಸೋಜಾ (ನಿವೃತ್ತ ಯೋಧ), ಡಾ| ಶ್ರೀಪತಿ ರಾವ್‌(ವೈದ್ಯಕೀಯ), ನಾಭಿರಾಜ ಪೂವಣಿ (ಪತ್ರಕರ್ತ), ಅಬೂಬಕ್ಕರ್‌ ಕೈರಂಗಳ (ಸಾಹಿತ್ಯ), ಮಧೂರು ಮೋಹನ ಕಲ್ಲೂರಾಯ (ಗಮಕ), ಕಮಲಾ ಭಟ್‌ (ಭರತ ನಾಟ್ಯ), ತನಿಯಪ್ಪ ನಲ್ಕೆ ಕುಕ್ಕೆ ಜಾಲು (ದೈವಾರಾಧನೆ), ಚೈತನ್ಯ ಕಲ್ಯಾಣ ತ್ತಾಯ (ಜೋತಿಷ), ಮಾ| ಅದ್ವೈತ್‌ ಕನ್ಯಾನ (ಚಂಡೆ ವಾದನ), ಗುರುವಪ್ಪ ಬಾಳೆಪುಣಿ (ಪತ್ರಿಕೋದ್ಯಮ), ಸುಳ್ಯದ ರಂಗಮನೆ (ಸಂಸ್ಥೆ) ಪರವಾಗಿ ಜೀವನ್‌ ರಾಂ ಅವರನ್ನು ಸಮ್ಮಾನಿಸಲಾಯಿತು.

Advertisement

ಸಾಹಿತ್ಯವನ್ನು ಶಿರದಲಿ ಧರಿಸೋಣ: ಡಾ| ಹೆಗ್ಡಡೆ
ಗ್ರಾಮೀಣ ಪ್ರದೇಶದಲ್ಲಿ ಸಮ್ಮೇಳನ ಆಯೋಹಿಸಿದರೆ ಓದುಗರ, ಕೇಳುಗರ, ವಿದ್ಯಾರ್ಥಿಗಳ ಬದುಕಿಗೆ ತಟ್ಟುತ್ತದೆ. ಸಾಹಿತ್ಯದ ಚಪಲ ರೂಡಿಸುತ್ತ ಸಾಹಿತ್ಯವನ್ನು ಶಿರದಲ್ಲಿ ಧರಿಸೋಣ ಎಂದು ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಕನ್ನಡ ಸಾರ್ವಭೌಮ ಭಾಷೆಯಾಗಲಿ
ಮಾತೃಭಾಷೆಗೆ ಪ್ರಾಧಾನ್ಯತೆ ನೀಡುವ ಮೂಲಕ ಮುಂದಿನ ಜನಾಂಗವನ್ನು ಭೌತಿಕವಾಗಿ ಸಶಕ್ತ ಗೊಳಿಸುವ ಮೂಲಕ ಕನ್ನಡ ಸಾರ್ವಭೌಮ ಭಾಷೆಯಾಗಬೇಕು ಎಂದು ಸಮ್ಮೇಳನಾಧ್ಯಕ್ಷೆ ಡಾ| ಹೇಮಾವತಿ ವೀ.ಹೆಗ್ಗಡೆ ಆಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next