ಹಾಸನ: ನಗರಸಭೆ ವ್ಯಾಪ್ತಿಗೆ ಇತ್ತೀಚೆಗೆ ಸೇರ್ಪಡೆಯಾಗಿರುವ 25 ಗ್ರಾಮಗಳಿಗೆ ಅಮೃತ್ ಯೋಜನೆಯಡಿ ಹೇಮಾವತಿ ನದಿ ನೀರನ್ನು ಇನ್ನು ಕೆಲವೇ ದಿನಗಳಲ್ಲಿ ಪೂರೈಕೆ ಮಾಡಲಾಗುವುದು ಎಂದು ಶಾಸಕ ಪ್ರೀತಂ ಜೆ.ಗೌಡ ಅವರು ಹೇಳಿದರು.
ನಗರದ ಅರಸೀಕೆರೆ ರಸ್ತೆ, ಆರ್‌ಟಿಒ ಕಚೇರಿ ಬಳಿ ಇರುವ ಕೆಂಪೇ ಗೌಡ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮುಖ್ಯದ್ವಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಹಾಸನ ನಗರದ ಸುತ್ತಮುತ್ತಲಿನ ನಾಲ್ಕು ಗ್ರಾಪಂಗಳ ವ್ಯಾಪ್ತಿಯ 25 ಗ್ರಾಮಗಳು ಈಗ ಹಾಸನ ನಗರ ಸಭೆ ವ್ಯಾಪ್ತಿಗೆ ಸೇರಿವೆ. ಈ ಗ್ರಾಮಗಳಿಗೆ ಬೋರ್‌ವೆಲ್‌ಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನಿವಾಸಿಗಳು ಹೇಮಾವತಿ ನದಿ ನೀರು ಪೂರೈಕೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ನಾಲ್ಕು ಗ್ರಾ ಪಂ ಪಿಡಿಒ, ವಾಟರ್‌ವೆುನ್ ಜೊತೆ ಚರ್ಚೆ ಮಾಡಲಾಗಿದೆ. ಈ ಮಾಸಂ ತ್ಯಕ್ಕೆ ಬೋರ್ ವೆಲ್‌ಗಳ ನೀರು ಪೂರೈಕೆಯಾಗುತ್ತಿರುವ ಪೈಪ್ ಲೈನ್‌ಗಳಲ್ಲೇ ಹೇಮೆ ನದಿ ನೀರನ್ನು ಪೂರೈಕೆ ಮಾಡಲಾಗುವುದು ಎಂದರು.
ಮೂಲ ಸೌಕರ್ಯ ಕಲ್ಪಿಸಿ: ಕೆಂಪೇಗೌಡ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುಧೀರ್ ಅವರು ಮಾತನಾಡಿ, ಕೆಂಪೇಗೌಡ ನಗರಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಬೇಕಾ ಗಿದೆ. ಸಮರ್ಪಕವಾದ ಕಸ ವಿಲೇವಾರಿ, ವಿದ್ಯುತ್ ಟ್ರಾನ್ಸ್‌ಫಾರಂ, ಮಕ್ಕಳ ಆಟದ ಮೈದಾನ, ಸಾರ್ವಜನಿಕ ಉದ್ಯಾನವನ, ಸಿಟಿ ಬಸ್ ವ್ಯವಸ್ಥೆ, ದೇವಸ್ಥಾನದ ನಿರ್ಮಾಣ ಹಾಗೂ ರಿಂಗ್ ರಸ್ತೆಯಿಂದ ಸತ್ಯವಂಗಲ ಲೇ ಔಟ್ ಮೂಲಕ ಅರಸೀಕೆರೆ ರಸ್ತೆಗೆ ಸಂಪರ್ಕ ಕಲ್ಪಿಸುವ 60 ಅಡಿ ರಸ್ತೆ ನಿರ್ಮಾಣ ಆಗಬೇಕು ಎಂದು ಮನವಿ ಮಾಡಿದರು.
ಹುಡಾ ಮಾಜಿ ನಿರ್ದೇಶಕ ಮೋಹನ್ ಕುಮಾರ್, ಕೆಂಪೇಗೌಡ ನಗರ ಕ್ಷೇಮಾಭಿವೃದ್ಧಿ ಸಂಘದ ತಾಪಂ ಮಾಜಿ ಸದಸ್ಯ ಪ್ರದೀಪ್, ಕಾಟೀಹಳ್ಳಿ ಗ್ರಾಪಂ ಸದಸ್ಯರಾದ ರಂಗನಾಥ್, ಕಾಂತರಾಜು, ಮಾಜಿ ಸದಸ್ಯ ಮಂಜು, ಪಿಡಿಓ ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಯಡಿಯೂರಪ್ಪ ಸಹಕಾರ ಸ್ಮರಣೆ : ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾದ ಗ್ರಾಮಗಳಲ್ಲಿ ಒಳ ಚರಂಡಿ, ಕುಡಿಯುವ ನೀರು ಪೂರೈಕೆ ಮತ್ತು ರಸ್ತೆ ನಿರ್ಮಾಣ ಮಾಡುವ ಮೂಲಕ ಯೋಜನಾ ಬದ್ಧ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಈ ಗ್ರಾಮಗಳು ನಗರಸಭೆ ವ್ಯಾಪ್ತಿಗೆ ಸೇರಿದ್ದರಿಂದ ಇದೆಲ್ಲ ಸಾಧ್ಯವಾಯಿತು. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಗ್ರಾಮಗಳನ್ನು ನಗರ ಸಭೆ ವ್ಯಾಪ್ತಿಗೆ ಸೇರಿಸಲು ಸಹಕಾರ ನೀಡಿದರು ಎಂದು ಸ್ಮರಿಸಿದರು.