Advertisement

2022ರ ಹೊರಳು ನೋಟ; ಡಾ|ಹೇಮಾವತಿ ವೀರೇಂದ್ರ ಹೆಗ್ಗಡೆಯವರಿಗೆ‌ ಪೌರ ಸಮ್ಮಾನ

12:02 AM Dec 29, 2022 | Team Udayavani |

ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೆಟ್‌ ಪಡೆದ ಹಿನ್ನೆಲೆಯಲ್ಲಿ ಧರ್ಮಸ್ಥಳದ ಡಾ| ಹೇಮಾವತಿ ವೀ.ಹೆಗ್ಗಡೆಯವರಿಗೆ ಮಂಗಳೂರಿನ ಪೌರ ಸಮ್ಮಾನ ಸಮಿತಿಯಿಂದ ಜು.9ರಂದು ಧರ್ಮಸ್ಥಳ ಬೀಡಿನಲ್ಲಿ ಗೌರವ ಸಮ್ಮಾನ ನಡೆಯಿತು.

Advertisement

ಧರ್ಮಸ್ಥಳದಲ್ಲಿ ಕುಂಚ-ಗಾನ-ನೃತ್ಯ ವೈಭವ
ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಆಶ್ರಯದಲ್ಲಿ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಜುಲೈ 4 ರಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಯವರು ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ 19ನೇ ವರ್ಷದ ಅಂಚೆ- ಕುಂಚ ಸ್ಪರ್ಧೆ ವಿಜೇತರ ಪುರಸ್ಕಾರ ಸಮಾರಂಭ ನಡೆಯಿತು. ನನ್ನಮ್ಮ ಸೂಪರ್‌ ಸ್ಟಾರ್‌ ಖ್ಯಾತಿಯ, ಮಾ|ಆನಂದ್‌ ಅವರ ಪುತ್ರಿ ವಂಶಿಕ ಅಂಜನೀ ಕಶ್ಯಪ್‌ರೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಸಂವಾದ ನಡೆಸಿದ್ದರು.

ಬಲ್ಲರಾಯನದುರ್ಗ: ಸ್ಫೋಟದ ಸದ್ದು
ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಬಲ್ಲರಾಯನದುರ್ಗ ಕೆಳಭಾಗ ದಲ್ಲಿ ಜುಲೈ 15ರಂದು ರಾತ್ರಿ ಸ್ಫೋಟದ ಸದ್ದು ಕೇಳಿಬಂದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

ರಸ್ತೆ ಗುಂಡಿಯಿಂದ
ಪ್ರಾಣ ಕಳೆದುಕೊಂಡ ಸವಾರ
ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಸ್ಕೂಟರ್‌ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದು ಸ್ಕೂಟರ್‌ ಸವಾರ ಕೊಂಚಾಡಿ ನಿವಾಸಿ ಆತೀಶ್‌ (20) ಮೃತಪಟ್ಟ ಘಟನೆ ಆ.6ರಂದು ಮಂಗಳೂರಿನ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್‌ ಬಳಿ ರಾ. ಹೆದ್ದಾರಿ 73ರಲ್ಲಿ ಸಂಭವಿಸಿತ್ತು. ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು.

ಎಸ್‌ಡಿಪಿಐ ಕಾರ್ಯದರ್ಶಿ
ಮನೆಗೆ ಎನ್‌ಐಎ ದಾಳಿ
ರಾಷ್ಟ್ರೀಯ ತನಿಖಾ ದಳದ ತಂಡವು ಆ. 8ರಂದು ಮುಂಜಾನೆ ಬಿ.ಸಿ.ರೋಡ್‌ ಬಳಿಯ ಪರ್ಲಿಯಾದಲ್ಲಿ ರುವ ಎಸ್‌ಡಿಪಿಐ ರಾ. ಕಾರ್ಯದರ್ಶಿ ರಿಯಾಜ್‌ ಫರಂಗಿಪೇಟೆ ಅವರ ಮನೆಗೆ ದಾಳಿ ನಡೆಸಿತ್ತು. ಬಿಹಾರದಲ್ಲಿ ಪ್ರಧಾನಿ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತರಾಗಿರುವ ಆರೋ ಪಿಗಳ ಜತೆ ಸಂಪರ್ಕ ಹೊಂದಿದ್ದರು ಎನ್ನಲಾಗಿತ್ತು.

Advertisement

ಗುಡ್ಡ ಕುಸಿದು
ಮೂವರು ಕಾರ್ಮಿಕರ ಸಾವು
ಪಂಜಿಕಲ್ಲು ಗ್ರಾಮದ ಮುಕ್ಕುಡ ದಲ್ಲಿ ಜು. 6ರಂದು ಗುಡ್ಡ ಕುಸಿದು ಮನೆಯೊಂದಕ್ಕೆ ಬಿದ್ದ ಪರಿಣಾಮ ಮಣ್ಣಿನಡಿ ಸಿಲುಕಿ ಮೂರು ಮಂದಿ ಕೇರಳ ಮೂಲದ ರಬ್ಬರ್‌ ಟ್ಯಾಪಿಂಗ್‌ ಕಾರ್ಮಿಕರಾದ ಕೇರಳ ಮೂಲದ ಬಿಜು ಪಾಲಕ್ಕಾಡ್‌(45), ಸಂತೋಷ್‌ ಅಲಪುರ(46), ಬಾಬು ಕೊಟ್ಟಾಯಂ(46) ಮೃತಪಟ್ಟಿದ್ದರು. ಉಳಿದವರು ಪಾರಾಗಿದ್ದರು.

ವಿವಿಧ ಯೋಜನೆಗಳಿಗೆ ಮೋದಿ ಚಾಲನೆ
ಪ್ರಧಾನಿ ನರೇಂದ್ರ ಮೋದಿಯವರು ಸೆ. 2ರಂದು ಮಂಗಳೂರಿನಲ್ಲಿ ಕೇಂದ್ರ ಬಂದರು, ನೌಕಾಯಾನ ಸಚಿವಾಲಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ 3,800 ಕೋಟಿ ರೂ. ಮೊತ್ತದ 8 ಯೋಜನೆಗಳ ಲೋಕಾ ರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದ್ದರು.

ಈಜಲು ಹೋಗಿ ನೀರುಪಾಲಾದ ಯುವಕ
ಸಜೀಪಪಡು ಗ್ರಾಮದ ತಲೆ ಮೊಗರುನಲ್ಲಿ ನೇತ್ರಾವತಿ ನದಿಯಲ್ಲಿ ಈಜಲು ಹೋದ ಐವರು ಸ್ನೇಹಿತ ಯುವಕರ ತಂಡದಲ್ಲಿದ್ದ ಓರ್ವ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಜು. 3ರಂದು ನಡೆದಿತ್ತು. ತಲೆ ಮೊಗರು ನಿವಾಸಿ ರುಕ್ಮಯ ಅವರ ಪುತ್ರ ಅಶ್ವಿ‌ಥ್‌(19) ನೀರುಪಾಲಾಗಿದ್ದರು. ಮೂವರನ್ನು ರಕ್ಷಿಸಲಾಗಿತ್ತು. ಕೆಲವು ದಿನಗಳ ಬಳಿಕ ಅಶ್ವಿ‌ಥ್‌ನ ಮೃತದೇಹ ಪತ್ತೆಯಾಗಿತ್ತು.

ಶಾಸಕ ಪೂಂಜಾ ಕಾರನ್ನು ಹಿಂಬಾಲಿಸಿ ಬೆದರಿಕೆ
ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರು ಮಂಗಳೂರಿನಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಸಂದರ್ಭ ಸ್ಕಾರ್ಪಿಯೋ ವಾಹನದಲ್ಲಿ ಬಂದ ದುಷ್ಕರ್ಮಿಯೋರ್ವ ಪಡೀಲಿನಿಂದ ಕಾರನ್ನು ಹಿಂಬಾಲಿಸಿಕೊಂಡು ಬಂದು ಫರಂಗಿಪೇಟೆಯಲ್ಲಿ ಕಾರನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಮಾರಕಾಯುಧ ತೋರಿಸಿ ಬೆದರಿಕೆಯೊಡ್ಡಿ ಪರಾರಿಯಾದ ಘಟನೆ ಅ. 13ರಂದು ತಡರಾತ್ರಿ ನಡೆದಿತ್ತು. ಘಟನೆ ನಡೆದ ತತ್‌ಕ್ಷಣ ಶಾಸಕ ಹರೀಶ್‌ ಪೂಂಜ ಅವರು ಬಂಟ್ವಾಳ ಡಿವೈಎಸ್‌ಪಿ ಅವರಿಗೆ ಮಾಹಿತಿ ನೀಡಿದ್ದು, ಪೊಲೀಸ್‌ ಇಲಾಖೆ ಆರೋಪಿಯ ಪತ್ತೆಗೆ ತೀವ್ರ ತನಿಖೆ ನಡೆಸಿ ಮರುದಿನ ಆರೋಪಿಯನ್ನು ಬಂಧಿಸಿತ್ತು. ಬಳಿಕ ರಾಜ್ಯ ಸರಕಾರ ಪ್ರಕರಣವನ್ನು ಸಿಐಡಿಗೆ ನೀಡಿತ್ತು.

ದ.ಕ.ಜಿಲ್ಲೆಯಲ್ಲಿ ಬಿರುಸುಗೊಂಡ ಮಳೆ
ವರುಣಾರ್ಭಟ ಮತ್ತೆ ಬಿರುಸುಗೊಂಡ ಹಿನ್ನೆಲೆ ಘಟ್ಟ ಪ್ರದೇಶ ಸಹಿತ ಎಲ್ಲೆಡೆ ನಿರಂತರ ಮಳೆಯಾದ ಪರಿಣಾಮ ಬೆಳ್ತಂಗಡಿ ತಾಲೂಕಿನಲ್ಲಿ ಹರಿಯುವ ಬಹುತೇಕ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿತ್ತು. ತಾಲೂಕಿನ ಹಲವೆಡೆ ರಸ್ತೆ, ಸೇತುವೆಗಳು ಜಲಾವೃತವಾಗಿ ವಾಹನ ಸಂಚಾರಕ್ಕೆ ವ್ಯತ್ಯಯವಾಯಿತು. ಉಳ್ಳಾಲ, ಸೋಮೇಶ್ವರ, ಕೋಟೆ ಕಾರು ಸಹಿತ ತಾಲೂಕಿನ ವಿವಿಧ ಗ್ರಾಮಗಳಲ್ಲಿ 60ಕ್ಕೂ ಹೆಚ್ಚು ಮನೆ ಗಳು ಜಲಾವೃತವಾಗಿದ್ದವು. ಉಳ್ಳಾಲದ ಅಕ್ಕರೆಕೆರೆ, ಉಳ್ಳಾಲಬೈಲು, ಕಲ್ಲಾಪು, ತಲಪಾಡಿ ದೇವಿನಗರ, ಕಡೆಮುಗೇರು, ಕಿನ್ಯ, ಕನಕಮುಗೇರು, ಕುತುಬಿನಗರ, ಕೋಟೆಕಾರು ಪಟ್ಟಣ ಪಂಚಾ ಯತ್‌ ವ್ಯಾಪ್ತಿಯಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿದ್ದವು.

 ಕಡಲ್ಕೊರೆತ ಪ್ರದೇಶಕ್ಕೆ ಸಿಎಂ ಭೇಟಿ
ಕಡಲ್ಕೊರೆತ ಪ್ರದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು. ಉಳ್ಳಾಲಕ್ಕೆ “ಸೀ ವೇವ್‌ ಬ್ರೇಕರ್‌’ ಎಂಬ ಹೊಸ ತಂತ್ರಜ್ಞಾನದ ಮೂಲಕ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಬಟ್ಟಪಾಡಿಯಲ್ಲಿ ಹಿಂದೆ 800 ಮೀ. ಪ್ರದೇಶ ಮತ್ತು ಈಗ 600 ಮೀ.ಗಳಷ್ಟು ಪ್ರದೇಶ ಕೊರೆತಕ್ಕೆ ಒಳಗಾಗಿತ್ತು.

ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ
ಬೆಳ್ಳಾರೆಯ ಮಾಸ್ತಿಕಟ್ಟೆ ಬಳಿ ಜು.26 ರಂದು ಬಿಜೆಪಿ ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು (33) ಅವರನ್ನು ಹತ್ಯೆಗೈಯ್ಯಲಾಗಿತ್ತು. ಈ ಘಟನೆ ದೇಶದೆಲ್ಲೆಡೆ ಸಂಚಲನ ಮೂಡಿಸಿತ್ತು. ಜು. 27ರಂದು ಪಾರ್ಥಿವ ಶರೀರದ ಮೆರವಣಿಗೆಯು ಪ್ರಾರಂಭಗೊಂಡು ದರ್ಬೆ -ಸವಣೂರು-ಕಾಣಿಯೂರು-ನಿಂತಿಕಲ್ಲು ಮಾರ್ಗವಾಗಿ ಬೆಳ್ಳಾರೆ-ನೆಟ್ಟಾರಿಗೆ ತಲುಪಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮೃತರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ರಾಷ್ಟ್ರದ ಅನೇಕ ನಾಯಕರು ಭೇಟಿ ನೀಡಿ ಪ್ರವೀಣ್‌ ಕುಟುಂಬಿಕರಿಗೆ ಸಾಂತ್ವನ ಹೇಳಿದ್ದರಲ್ಲದೆ ನೆರವಿನ ಭರವಸೆ ನೀಡಿದ್ದರು.

ಸುರತ್ಕಲ್‌: ಫಾಝಿಲ್‌ಹತ್ಯೆ
ಸುರತ್ಕಲ್‌ ಸಮೀಪದ ತಾತ್ಕಾಲಿಕ ಮಾರುಕಟ್ಟೆ ಬಳಿ ರಾತ್ರಿ ಮಂಗಳ ಪೇಟೆ ಬಳಿಯ ನಿವಾಸಿ ಫಾಝಿಲ್‌ (23)ನನ್ನು ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಯನ್ನು ಜಾರಿಗೊಳಿಸಲಾಗಿತ್ತು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next