Advertisement

ವಿಜೃಂಭಣೆಯಿಂದ ನಡೆದ ಹೇಮಗಿರಿ ಶ್ರೀ ವರದರಾಜಸ್ವಾಮಿ ರಥೋತ್ಸವ

10:53 PM Jan 16, 2023 | Team Udayavani |

ಕುಣಿಗಲ್ : ತಾಲೂಕಿನ ಹುಲಿಯೂರುದುರ್ಗ ಐತಿಹಾಸಿಕ ಹಿನ್ನಲೆ ಉಳ್ಳ ಹೇಮಗಿರಿ ಶ್ರೀ ವರದರಾಜಸ್ವಾಮಿ ಜಾತ್ರಾ ಮಹೋತ್ಸಹ ಹಾಗೂ ರಥೋತ್ಸವವು ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಸೋಮವಾರ ಸಾಯಂಕಾಲ ವಿಜೃಂಭಣೆಯಿಂದ ನಡೆಯಿತು.

Advertisement

ಶ್ರೀ ಕ್ಷೇತ್ರದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಹೇಮಗಿರಿ ಶ್ರೀ ವರದರಾಜು ಸ್ವಾಮಿ ಜಾತ್ರಾ ಮಹೋತ್ಸವುದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು, ಸೋಮವಾರ ಸಂಜೆ 5 ಗಂಟೆಗೆ ನಡೆದ ರಥೋತ್ಸವಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು, ಕುಣಿಗಲ್ ತಾಲೂಕು ಒಳಗೊಂಡತೆ ಮಂಡ್ಯ, ರಾಮನಗರ, ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಬಾಳೆಹಣ್ಣು ಧವನ ಎಸೆದು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.

ಈ ದೇವಾಲಯದಲ್ಲಿ ಇರುವ ವಡೆಭೈರವೇಶ್ವರ ಸ್ವಾಮೀಗೆ ಸಾವಿರಾರು ಮಂದಿ ಪುರುಷರು ಹೊಸ ಮರದಲ್ಲಿ ವಡೆ, ಕಜ್ಜಾಯ ಸೇರಿದಂತೆ ಮೊದಲಾದ ಪದಾರ್ಥಗಳನ್ನು ಇಟ್ಟುಕೊಂಡು ರಥದೊಂದಿಗೆ ದಾಪುಗಾಲು ಹಾಕಿದರು, ರಥೋತ್ಸವಕ್ಕೆ ದೇವರ ಕುಣಿತ, ವಾದ್ಯಗೋಷ್ಠಿ ಹಾಗೂ ವಿವಿಧ ಕಲಾತಂಡಗಳು ಮೆರಗು ನೀಡಿದವು, ಇಂದು ರಾತ್ರಿ ಮುತ್ತಿನ ಪಲ್ಲಕಿ, ಪೌರಾಣಿಕ ನಾಟಕ, ಅನ್ನ ಸಂರ್ತಪಣೆ ಕಾರ್ಯಕ್ರಮವಿದ್ದು ನಾಳೆ ಮಂಗಳವಾರ ದೇವರ ಮೆರವಣಿಗೆ ಕಾರ್ಯಕ್ರಮ ಇರುತ್ತದೆ.

ರಥಕ್ಕೆ ಚಾಲನೆ ನೀಡಿದ ಮಾತನಾಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಸ್ವಾಮೀಜಿ ಧಾರ್ಮಿಕ ಪರಂಪರೆ ನಮ್ಮ ಪೂರ್ವಿಕರಿಂದ ಬಂದತಹ ಬಳುವಳಿಯಾಗಿದೆ, ಸನಾತನ ಧರ್ಮದಲ್ಲಿ ವಿಶ್ವದಲ್ಲೇ ಭಾರತ ಮಾದರಿಯಾಗಿದೆ, ಇಲ್ಲಿನ ಸಂಸ್ಕೃತಿ, ಧಾರ್ಮಿಕತೆ ಸಾವಿರಾರು ವರ್ಷಗಳ ಅತ್ಯಂತ ಪೂರತನವಾಗಿದೆ, ಕಷ್ಟಗಳ ನಿರ್ವಹಣೆಗೆ ಹಾಗೂ ನೆಮ್ಮದಿಯ ಬದುಕಿಗಾಗಿ ಗ್ರಾಮಗಳ ಎಲ್ಲಾ ಸಮುದಾಯಗಳ ಜನರು ಊರಿನಲ್ಲಿ ಶ್ರೀರಾಮ, ಈಶ್ವರ, ಭೈರವೇಶ್ವರ, ಆಂಜನೇಯ, ಲಕ್ಷ್ಮಿ , ಮಾರಮ್ಮ ಸೇರಿದಂತೆ ಮೊದಲಾದ ದೇವಾಲಯಗಳನ್ನು ನಿರ್ಮಿಸಿ ಆರಾಧಿಸುತ್ತಿದ್ದರು, ಮಳೆ, ಬೆಳೆ ಹಾಗೂ ಊರಿನ ಒಳತಿಗಾಗಿ ದೇವರಲ್ಲಿ ಪಾರ್ಥಿಸುತ್ತಿದ್ದರು, ಧನಗಳ ಜಾತ್ರೆಗಳು ನಡೆಯುತ್ತಿದ್ದವು, ಅರವಂಟಿಕೆ ಏರ್ಪಡಿಸಿ ಹಸಿದು ಬಂದತ್ತಹ ಜನರಿಗೆ ಪ್ರೀತಿಯಿಂದ ಕರೆದು ಉಣ ಬಡಿಸುವ ಮೂಲಕ ಹಸಿವು ನೀಗಿಸಲಾಗುತ್ತಿತು, ಇದು ನಮ್ಮ ಗ್ರಾಮೀಣ ಪ್ರದೇಶದ ಸಂಸ್ಕೃತಿಯಾಗಿದೆ, ಹಾಗಾಗಿ ಕಾಲ ಕಾಲಕ್ಕೆ ಮಳೆ ಬೆಳೆಯಾಗಿ ಜನರು ಸಂತೋಷದಿಂದ ಇರುತ್ತಿದ್ದರು, ಹೇಮಗಿರಿ ಶ್ರೀ ವರದರಾಜಸ್ವಾಮಿ ರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿರುವುದು ಸಂತಸ ತಂದಿಗೆ ಇದು ಹೀಗೆ ಮುಂದುವರೆಯಬೇಕು ಜನರು ಸತ್ಯ, ಧರ್ಮದಲ್ಲಿ ನಡೆದು ಕಾಯಕದಲ್ಲಿ ಪ್ರಾಮಾಣಿಕತೆ ಮರೆದಾಗ ಮಾತ್ರ ಆತನ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಬಿಗಿಬಂದೋಬಸ್ತ್
ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ತಹಶೀಲ್ದಾರ್ ಮಹಬಲೇಶ್ವರ, ಡಿವೈಎಸ್‌ಪಿ ಲಕ್ಷ್ಮಿಕಾಂತ್, ಸಿಪಿಐ ಅರುಣ್‌ಸಾಲಂಕಿ, ಪಿಎಸ್‌ಐ ವೆಂಕಟೇಶ್, ರಾಮಚಂದ್ರಯ್ಯ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next