ಮಂಗಳೂರು: ತಾಪಮಾನದ ವೈಪರೀತ್ಯದಿಂದ ವಾತಾವರಣದ ತಾಪಮಾನದಲ್ಲಿ ವಿಪರೀತ ಏರಿಕೆ ಯಾಗುತ್ತಿದ್ದು, ಉಷ್ಣತೆ 32 ಡಿಗ್ರಿ ಸೆ.ಗಳಿಂದ 40.7 ಡಿಗ್ರಿ ಸೆ. ವರೆಗೆ ಅನುಭವಕ್ಕೆ ಬರುತ್ತಿದೆ. ಹಾಗಾಗಿ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಮಂಗಳೂರು ವಲಯದ ಉಪ ಅರಣ್ಯ ಸಂರಕ್ಷಣಾಧಿ ಕಾರಿ ವಿನಂತಿಸಿದ್ದಾರೆ.
ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗುವ ವಿದ್ಯುತ್ ಸರಬರಾಜು ಪರಿವರ್ತಕ, ತಂತಿಗಳ ಮೂಲಕ ಕಿಡಿ ಹಾರಿ, ಸಾರ್ವಜನಿಕರು ಅರಣ್ಯ ಪ್ರದೇಶದ ಬಳಿ ವಿನಾಕಾರಣ ತ್ಯಾಜ್ಯಗಳಿಗೆ ಬೆಂಕಿ ಹಾಕುವುದರಿಂದ ಕಾಳ್ಗಿಚ್ಚು ಉಂಟಾಗುತ್ತದೆ. ಬೇಸಗೆಯ ದಿನಗಳಲ್ಲಿ ಎಲ್ಲೆಂದರಲ್ಲಿ ಬೆಂಕಿ ಹಚ್ಚುವುದು, ಅನಗತ್ಯ ಪಟಾಕಿ ಸಿಡಿಸುವುದು, ರಸ್ತೆ ಪಕ್ಕದಲ್ಲಿ ಧೂಮಪಾನ ಮಾಡುವುದು ಚಿಕ್ಕ- ಪುಟ್ಟ ಅಂಗಡಿಯವರು ತ್ಯಾಜ್ಯ ಕೂಡಿಸಿ ಬೆಂಕಿ ಹಚ್ಚುವುದು ಅಪರಾಧ ಎಂದು ಪರಿಗಣಿಸಲಾಗಿದೆ. ಬೆಂಕಿ ಅವಘಡ, ಕಾಳ್ಗಿಚ್ಚು, ಬೆಂಕಿ ಜ್ವಾಲೆ ಕಂಡುಬಂದರೆ ಸಾರ್ವಜನಿಕರು ಮಾಹಿತಿ ನೀಡುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಯಾರನ್ನು ಸಂಪರ್ಕಿಸಬೇಕು?