Advertisement

ನೊಂದವರಿಗೆ ನೆರವಾಗಿ: ಮೌಲಾನಾ ಅಬ್ದುಲ್‌

01:06 PM Aug 23, 2018 | |

ವಾಡಿ: ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್‌ ಹಬ್ಬವನ್ನು ಮುಸ್ಲಿಂರು ತಾಲೂಕಿನ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ನಮಾಜ್‌ ಮಾಡುವ ಮೂಲಕ ಆಚರಿಸಿದರು. ಪಟ್ಟಣದ ಹೊರ ವಲಯದ ಈದ್ಗಾ ಮೈದಾನದಲ್ಲಿ ಬೆಳಗ್ಗೆ 8:15ಕ್ಕೆ ಬಕ್ರೀದ್‌ ಹಬ್ಬದ ನಮಾಜ್‌ ಆರಂಭಿಸಿದ ಜಾಮೀಯಾ ಮಸೀದಿಯ ಮೌಲಾನಾ ಅಬ್ದುಲ್‌ ಖಾಲೀದ್‌, ಈದ್‌ ವಿಶೇಷತೆ ಹಾಗೂ ಧರ್ಮ ಸಂದೇಶಗಳ ಕುರಿತು ಮಾತನಾಡಿದರು.

Advertisement

ಜೀವನದಲ್ಲಿ ತ್ಯಾಗ ಮಾಡಬೇಕಾದ ಹಲವು ಸಂದರ್ಭಗಳನ್ನು ಸಮರ್ಪಕವಾಗಿ ಬಳಸಿಕೊಂಡು ನೊಂದವರಿಗೆ ನೆರವಾಗಬೇಕು. ಅಲ್ಲಾಹನ ಸ್ಮರಣೆಯೇ ನಿಜವಾದ ಪ್ರಾರ್ಥನೆಯಾಗಿದ್ದು, ಜೀವನದಲ್ಲಿ ಎದುರಾಗುವ ಸುಖ -ದುಃಖವನ್ನು ಸಮನಾಂತರದಲ್ಲಿ ಸ್ವೀಕರಿಸುವ ಗುಣ ಹೊಂದಬೇಕು ಎಂದರು. 

ಜಾಮೀಯಾ ಮಸೀದಿ ಸಮಿತಿ ಅಧ್ಯಕ್ಷ ಮಕುಲ್‌ ಜಾನಿ ಸೇರಿದಂತೆ ಸಾವಿರಾರು ಜನ ಮುಸ್ಲಿಂರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ನಮಾಜ್‌ ನಂತರ ಈದ್ಗಾದಲ್ಲಿನ ತಮ್ಮ ಕುಟುಂಬ ಸಂಬಂಧಿಕರ ಸಮಾಧಿಗಳಿಗೆ ಹೂಗಳನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ರಾವೂರ, ಹಳಕರ್ಟಿ, ಕುಂದನೂರ, ಇಂಗಳಗಿ, ಸನ್ನತಿ, ನಾಲವಾರ, ಕೊಲ್ಲೂರ ಗ್ರಾಮಗಳಲ್ಲಿ ಬಕ್ರೀದ್‌ ಹಬ್ಬದ ಸಾಮೂಹಿಕ ನಮಾಜ್‌ ನಡೆದವು

Advertisement

Udayavani is now on Telegram. Click here to join our channel and stay updated with the latest news.

Next