Advertisement

ರೋಟರಿಯಿಂದ ನಿರ್ಗತಿಕರಿಗೆ ಸಹಾಯಹಸ್ತ

04:56 PM Nov 26, 2021 | Team Udayavani |

ತಿಪಟೂರು: ನಿರ್ಗತಿಕರಿಗೆ, ಅಶಕ್ತರಿಗೆ ನಮ್ಮ ರೋಟರಿ ಸಂಸ್ಥೆ ಕೈಲಾದ ಸಹಾಯ, ಸಹಕಾರ ನೀಡುವ ಮೂಲಕ ಸಮಾಜದಲ್ಲಿ ಇತರರಂತೆ ಬದುಕಲು ಅವಕಾಶ ಕಲ್ಪಿಸಿ ಕೊಡುವ ಕೆಲಸ ಮಾಡುತ್ತಿದೆ ಎಂದು ಬೆಂಗಳೂರು ಸದಾಶಿವ ನಗರದ ರೋಟರಿ ಸಂಸ್ಥೆಯ ನಾಗರಾಜು ತಿಳಿಸಿದರು.

Advertisement

ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಆಡಿಟೋರಿಯಂನಲ್ಲಿ ರೋಟರಿ ಸಂಸ್ಥೆ ಸದಾಶಿವ ನಗರ ಬೆಂಗಳೂರು ಹಾಗೂ ರೋಟರಿ ಸಂಸ್ಥೆ ತಿಪಟೂರು, ಮಾಲ್ಗುಡಿ ಹಾಗೂ ಎಸ್‌ಬಿಐ ಮ್ಯೂಚ್ಯುಯಲ್‌ ಫ‌ಂಡ್‌ ಸಹಯೋಗದೊಂದಿಗೆ ಆಯೋಜಿಸಿದ್ದ ದಿವ್ಯಾಂಗರಿಗೆ ಉಚಿತ ವ್ಹೀಲ್‌ಚೇರ್‌ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಿವ್ಯಾಂಗರಿಗೆ ಅನುಕಂಪಕ್ಕಿಂತ ಸಹಾಯ ಮತ್ತು ಪ್ರೋತ್ಸಾಹದ ಅವಶ್ಯಕತೆ ಇದೆ.

ಇದನ್ನೂ ಓದಿ:- ಬೆಂಗಳೂರಿನಲ್ಲಿ ಭೂಕಂಪನ ಅನುಭವ: ಯಾರೂ ಭಯಪಡಬೇಡಿ ಎಂದ ಸಚಿವ ಆರ್.ಅಶೋಕ್

ಇತರರಂತೆ ಜೀವಿಸಲು ಅವರಿಗೆ ಅವಶ್ಯಕವಾದ ಸಾಧನ ಸಲಕರಣೆಗಳನ್ನು ಉಚಿತವಾಗಿ ನಮ್ಮ ರೋಟರಿ ಕ್ಲಬ್‌ ಮಾಡುತ್ತಾ ಬಂದಿದ್ದು, ಅದರಂತೆ ತಿಪಟೂರು ನಗರದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿ ದಿವ್ಯಾಂಗರನ್ನು ಗುರುತಿಸಿ ಉಚಿತವಾಗಿ ವ್ಹೀಲ್‌ಚೇರ್‌ ವಿತರಣೆ ಮಾಡುತ್ತಿದ್ದೇವೆ ಎಂದರು.

ಕೈಲಾದ ಸೇವೆ ಮಾಡಿ: ಸಮಾಜದಲ್ಲಿ ಪ್ರತಿಯೊಬ್ಬರೂ ಸಹೋದರತೆ, ಸಹಕಾರ ಮನೋಭಾವನ್ನು ಬೆಳಸಿಕೊಂಡು ಸಮಾಜದಲ್ಲಿನ ಅಶಕ್ತರು, ನಿರ್ಗತಿಕರಿಗೆ ಕೈಲಾದ ಸೇವೆ ಮಾಡಬೇಕು. ನಮ್ಮ ಸಂಸ್ಥೆಯೂ ಸಹ ಹಲವು ವರ್ಷಗಳಿಂದಲೂ ಇಂತಹ ಸಾಮಾಜಿಕ ಕಳಕಳಿಯಂತ ಕಾರ್ಯ ಮಾಡುತ್ತಿದ್ದು, ಇದಕ್ಕೆ ಪ್ರೋತ್ಸಾಹ ನೀಡುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದರು.

Advertisement

ಭಗವಾನ್‌ ಮಹಾವೀರ್‌ ವಿಕಲಾಂಗ ಸಹಾಯತ ಸಮಿತಿ ಅಧ್ಯಕ್ಷ ಮೋಂಟು ಬೈ ಮಾತನಾಡಿ, ದಿವ್ಯಾಂಗತೆ ಶಾಪ ಅಲ್ಲ. ಕೆಲವರು ಹುಟ್ಟುತ್ತಲೇ ದಿವ್ಯಾಂಗರಾದರೆ ಇನ್ನು ಕೆಲವರು ಕಾರಣಾಂತರಗಳಿಂದ ತಮ್ಮ ಅಂಗಾಂಗಗಳನ್ನು ಕಳೆದುಕೊಳ್ಳುತ್ತಾರೆ. ಇಂತಹವರ ಸೇವೆಗಾಗಿಯೇ ನಮ್ಮ ಸಮಿತಿ ಸದಾ ಕೆಲಸ ಮಾಡಲಿದ್ದು, ನಮ್ಮ ಸಮಿತಿಯಿಂದ 20 ಲಕ್ಷಕ್ಕೂ ಹೆಚ್ಚು ದಿವ್ಯಾಂಗರಿಗೆ ಕೃತಕ ಕಾಲು, ಕೈ ಹಾಗೂ ವ್ಹೀಲ್‌ಚೇರ್‌ ವಿತರಣೆ ಮಾಡಲಾಗಿದೆ ಎಂದರು.

ವ್ಹೀಲ್‌ಚೇರ್‌ ವಿತರಣೆ: 160 ದಿವ್ಯಾಂಗರಿಗೆ ವ್ಹೀಲ್‌ ಚೇರ್‌ ವಿತರಣೆ ಮಾಡಲಾಯಿತು. ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು, ಕಾರ್ಯದರ್ಶಿ ಎಂ.ಆರ್‌.ಸಂಗಮೇಶ್‌, ಬಾಗೇಪಲ್ಲಿ ನಟರಾಜು, ಭಗವಾನ್‌ ಮಹಾವೀರ್‌ ವಿಕಲಾಂಗ ಸಹಾಯತ ಸಮಿತಿಯ ಕಮಲ್‌ ಮೆಹ್ತಾ, ಮಹದೇವ್‌ ಜೈನ್‌, ಲಲಿತ್‌ ಜೈನ್‌, ರೋಟರಿ ಸುರೇಶ್‌, ಮಹದೇವ್‌ ಪ್ರಸಾದ್‌, ತಿಪಟೂರು ರೋಟರಿ ಸಂಸ್ಥೆ ಅಧ್ಯಕ್ಷ ಅಶೋಕ್‌ಕುಮಾರ್‌, ಮಾಜಿ ಅಧ್ಯಕ್ಷರಾದ ವಿಜಯಕುಮಾರಿ, ಅರುಣ್‌ಕುಮಾರ್‌, ತೋಂಟದಾರ್ಯ, ಅಪ್ಪೇಗೌಡಸ್ವಾಮಿ ಹಾಗೂ ಮತ್ತಿತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next