Advertisement

ಅಪಘಾತದಲ್ಲಿ ಮೃತಪಟ ಮಾದಿಗ ಕುಟುಂಬಕ್ಟೆ ನೆರವು

01:59 PM Dec 30, 2017 | |

ಬಸವನಬಾಗೇವಾಡಿ: ಹುಬ್ಬಳ್ಳಿಯ ಮಾದಿಗ ಸಮಾವೇಶಕ್ಕೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಪಟ್ಟಣದ ಮಾದಿಗ ಸಮಾಜದವರ ಕುಟುಂಬಗಳಿಗೆ ರಾಜ್ಯಸರಕಾರ ಎಲ್ಲ ರೀತಿ ಸಹಾಯ, ಸಹಕಾರ ನೀಡಲು ಬದ್ಧವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಹೇಳಿದರು. ಶುಕ್ರವಾರ ಪಟ್ಟಣದ ಚನ್ನಬಸವೇಶ್ವರ ನಗರಕ್ಕೆ ಭೇಟಿ ನೀಡಿ ಮೃತ ಕುಟುಂಬದವರ, ಪೌರ ಕಾರ್ಮಿಕರ, ಅಂಗವಿಕಲರ ಹಾಗೂ ವಿವಿಧ ಸಂಘಟನೆಗಳ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

Advertisement

ಕಳೆದ ವರ್ಷ ಡಿ. 11, 2016ರಂದು ಹುಬ್ಬಳ್ಳಿಗೆ ತೆರಳುತ್ತಿದ್ದ ವೇಳೆ ಮಾದಿಗ ಸಮಾಜದ 6 ಜನ ಹಾಗೂ ಲಿಂಗಾಯತ ಸಮಾಜದ ವ್ಯಕ್ತಿಯೊಬ್ಬ ಅಪಘಾತದಲ್ಲಿ ಮೃತಪಟ್ಟು 7 ಜನರು ಗಂಭೀರ ಗಾಯಗೊಂಡದ್ದರು. 

ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರಕಾರದಿಂದ ತಲಾ ಎರಡು ಎಕರೆ ಜಮೀನು ಹಾಗೂ ಸರಕಾರದ ವಿವಿಧ ಸಾಲ ಸೌಲಭ್ಯಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ. ಪಾಟೀಲ, ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಮಾದಿಗ ಮಹಾಸಭಾ ಸೇರಿದಂತೆ ಅನೇಕ ಜನರು ಸಹಾಯಹಸ್ತ ಚಾಚಿದ್ದಾರೆ ಎಂದರು.

ರಾಜ್ಯ ಸರಕಾರದಿಂದ ಮೃತರ ಕುಟುಂಬದವರಿಗೆ ತಲಾ ಎರಡು ಎಕರೆ ಜಮೀನು ನೀಡಲು ಭರವಸೆ ನೀಡಲಾಗಿತ್ತು. ಆದರೆ ಬಸವನಬಾಗೇವಾಡಿ ಪಟ್ಟಣ ಹಾಗೂ ತಾಲೂಕಿನಲ್ಲಿ ಈಗಾಗಲೇ ಜಮೀನನ್ನು ಗುರುತಿಸಲಾಗಿದೆ. ಆದರೆ ಖಾಸಗಿ ಜಮೀನಿನ ಮಾಲೀಕರು ಹೆಚ್ಚಿನ ಬೆಲೆ ಬೇಡಿಕೆ ಇಟ್ಟಿದ್ದರಿಂದ ವಿಳಂಬವಾಗಿರುವುದಕ್ಕೆ ವಿಷಾಧಿ ಸುತ್ತೇನೆ. ಶೀಘ್ರದಲ್ಲೇ ಮೃತರ ಕುಟುಂಬದವರಿಗೆ ಜಮೀನು ನೀಡುವ ಭರವಸೆ ನೀಡಿದರು.

ಮೃತ ಹಾಗೂ ಗಾಯಗೊಂಡ ಕುಟುಂಬದ ಸದಸ್ಯರಲ್ಲಿ ಯಾರಿಗಾದರು ಉದ್ಯೋಗ ಕೊಡುವ ನಿಟ್ಟಿನಲ್ಲಿ ಈಗಾಗಲೇ ಡಾ| ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಅಧಿ ಕಾರಿಗಳ ಜೊತೆ ಮಾತನಾಡಿದ್ದೇನೆ. ಅವರು ಕೂಡಾ ಸಹಾಯ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಸಾಲ ಸೌಲಭ್ಯ ಸೇರಿದಂತೆ ರಾಜ್ಯ ಸರಕಾರದ ಅನೇಕ ಸೌಲತ್ತು ಒದಗಿಸಲು ನಾನು ಮತ್ತು ಶಾಸಕ ಶಿವಾನಂದ ಪಾಟೀಲ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು. 

Advertisement

ಪೌರ ಕಾರ್ಮಿಕರ ನೌಕರಿಯನ್ನು ಕಾಯಂ ಮಾಡಿ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಿದ್ದರಿಂದ ನೆಮ್ಮದಿಯ ಜೀವನ ನಡೆಸುವಂತಾಗಿದೆ. ಮಹಿಳಾ ಸ್ವಸಹಾಯ ಗುಂಪುಗಳು ಸೇರಿದಂತೆ ಇತರರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಆರ್ಥಿಕವಾಗಿ ಮುಂದೆ ಬರಲು ಸರಕಾರ ಕ್ರಮ ಕೈಗೊಂಡಿದೆ ಎಂದರು. 

ಪುರಸಭೆ ಉಪಾಧ್ಯಕ್ಷ ಸಂಜೀವ ಕಲ್ಯಾಣಿ ಮಾತನಾಡಿ, ಮೃತ ಹಾಗೂ ಗಾಯಾಳು ಕೆಲ ಕುಟುಂಬಗಳಿಗೆ ಸಚಿವ ಎಂ.ಬಿ. ಪಾಟೀಲ, ಶಾಸಕ ಶಿವಾನಂದ ಪಾಟೀಲ ತಲಾ 50 ಸಾವಿರ ನೀಡಿದ್ದಾರೆ. ಈ ಎಲ್ಲ ಕುಟುಂಬಗಳಿಗೆ ಪುರಸಭೆ ವತಿಯಿಂದ ಮನೆ ಕಟ್ಟಡಕ್ಕಾಗಿ 1.80 ಹಣ ಮಂಜೂರಾಗಿದೆ ಎಂದು ಹೇಳಿದರು. 

ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ, ಶೇಖರ ಗೊಳಸಂಗಿ, ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ರವಿ ರಾಠೊಡ, ಪುರಸಭೆ ಸದಸ್ಯ ಕಮಲಸಾಬ ಕೊರಬು, ಮುದುಕು ಬಸರಕೊಡ, ಸಂಗನಬಸು ಪೂಜಾರಿ, ಮುತ್ತಣ್ಣ ಬೆಣ್ಣೂರ, ಸುರೇಶ ಮಣ್ಣೂರ, ಅಶೋಕ ಚಲವಾದಿ, ತಮ್ಮಣ್ಣ ಕಾನಾಗಡ್ಡಿ, ಅರವಿಂದ ಸಾಲವಾಡಗಿ, ವೈ.ಎಸ್‌. ಮ್ಯಾಗೇರಿ, ರಮೇಶ
ಮ್ಯಾಗೇರಿ, ಆರ್‌.ಕೆ. ಬಾಗೇವಾಡಿ, ಸಂಗಪ್ಪ ಕಲ್ಯಾಣಿ, ಬಸಗೊಂಡ ಹಾದಿಮನಿ, ಮಲ್ಲಪ್ಪ ಪೂಜಾರಿ, ಅಶೋಕ
ಕರೆಕಲ್ಲ, ಕನಕೇಶ ಬಾಗೇವಾಡಿ, ರಾಜು ಫಿರಂಗಿ, ಮಲ್ಲು ದೇವರಮನಿ, ಪುರಸಭೆ, ಸಮಾಜಕಲ್ಯಾಣ, ಡಾ| ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿಗಳು ಇದ್ದರು.

ಇದೇ ಸಂದರ್ಭದಲ್ಲಿ ಪಟ್ಟಣದ ವಿಜಯಪುರ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಬಸವ ಭವನಕ್ಕೆ ಈಗಾಗಲೇ 6 ಕೋಟಿ ಹಣ ಬಿಡುಗಡೆಯಾಗಿ ಕಾಮಗಾರಿ ಪ್ರಾರಂಭವಾಗಿದೆ. ಇನ್ನು ಹೆಚ್ಚವರಿ 2 ಕೋಟಿ ಹಣ ನೀಡುವಂತೆ ಶಾಸಕ ಶಿವಾನಂದ ಪಾಟೀಲ ಅವರ ಸೂಚನೆಯಂತೆ ಸ್ಥಳೀಯ ಮುಖಂಡರು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ
ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸಚಿವರು ಹಣ ಬಿಡುಗಡೆಗೊಳಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next