ಮಂಡ್ಯ: ಕೊರೊನಾ ಎರಡನೇ ಅಲೆ ತೀವ್ರವಾಗಿವ್ಯಾಪಿಸುತ್ತ ಜನ ಸಮುದಾಯದೊಳಗೆ ಮರಣಮೃದಂಗ ಬಾರಿಸುತ್ತಿರುವ ಹೊತ್ತಿನಲ್ಲಿ ಜನರನೆರವಿಗೆ ನಿಲ್ಲುವುದು ನನ್ನ ಆದ್ಯತೆಯಾಗಿದ್ದು,ಅದರಂತೆ ಜನರ ಸೇವೆಗೆ ಆಂಬ್ಯುಲೆನ್ಸ್, ಆರೋಗ್ಯಕಿಟ್ ವಿತರಿಸಲಾಗುತ್ತಿದೆ ಎಂದು ಸಮಾಜ ಸೇವಕಬಿ.ರೇವಣ್ಣ ಹೇಳಿದರು.
ಮಂಡ್ಯ ತಾಲೂಕಿನ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಯ ಜನರಹಿತದೃಷ್ಟಿಯಿಂದ ಶಿವಳ್ಳಿ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಒಂದು ಆ್ಯಂಬುಲೆನ್ಸ್ ಹಸ್ತಾಂತರ ಮಾಡಿಮಾತನಾಡಿದರು.
ಕ್ಷೇತ್ರದ ಜನರಿಗೆ ಅನುಕೂಲವಾಗುವಂತೆ ಸಮಾಜ ಸೇವಕ ಬಿ.ರೇವಣ್ಣಅಭಿಮಾನಿಗಳಿಂದ ಶಿವಳ್ಳಿ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ1ಆ್ಯಂಬುಲೆನ್ಸ್ , ಸಾವಿರ ಔಷಧ ಕಿಟ್,ಮನ್‌ಮುಲ್‌ನ ವಿವಿಧ ಮಾದರಿಯ ಕಷಾಯಕಿಟ್‌ಗಳನ್ನು ವಿತರಿಸಿ ಮಾತನಾಡಿದರು.ಖಾಸಗಿ ಆ್ಯಂಬುಲೆನ್ಸ್‌ಗಳು ಸೋಂಕಿತರನ್ನುಆಸ್ಪತ್ರೆಗೆ ಕರೆತರುವುದಕ್ಕೆ 10 ಸಾವಿರದಿಂದ 15ಸಾವಿರ ರೂ. ವಸೂಲಿ ಮಾಡುತ್ತಿವೆ. ಈಹಣವನ್ನು ಭರಿಸುವುದಕ್ಕೆ ಜನರಿಗೆ ಶಕ್ತಿ ಇಲ್ಲ.ಆದ ಕಾರಣ ಅವರನ್ನು ಕರೆತರುವುದಕ್ಕೆಆ್ಯಂಬುಲೆನ್ಸ್ ಸಂಚಾರಕ್ಕೆ ಬಿಡಲಾಗಿದೆ.
ಇದರಸಂಪೂರ್ಣ ನಿರ್ವಹಣೆಯನ್ನು ನಾವೇವಹಿಸಿಕೊಂಡಿದ್ದು,ಯಾರೂಸಹಹಣಕೊಡುವಅಗತ್ಯ ಇಲ್ಲ ಎಂದರು.ಪಾಂಡವಪುರ ತಾಲೂಕು ಆಸ್ಪತ್ರೆಗೆಈಗಾಗಲೇ 3 ಆ್ಯಂಬುಲೆನ್ಸ್, 5 ಅಕ್ಸಿಜನ್‌ಕಾನ್ಸಂಟ್ರೇಟರ್, 2 ಬಿಸಿನೀರು ಯಂತ್ರ, 2,500ಪೌಷ್ಟಿಕಾಂಶವಿರುವ ಜ್ಯೂಸ್ ಪಾಕೆಟ್ ಮತ್ತುಔಷಧ ಕಿಟ್‌ಗಳನ್ನು ನೀಡಲಾಗಿದೆ. ಕ್ಷೇತ್ರದಜನರಿಗೆ ಕೊರೊನಾ ಸಂಕಷ್ಟ ವೇಳೆ ನನ್ನ ಕೈಲಾದಅಳಿಲು ಸೇವೆ ಸಲ್ಲಿಸುತ್ತಿದ್ದೇನೆ ಎಂದುಹೇಳಿದರು.
ಮಂಡ್ಯ ತಹಸೀಲ್ದಾರ್‌ಚಂದ್ರಶೇಖರ ಶಂ.ಗಾಳಿ, ಮಾಜಿ ಶಾಸಕ ಎಚ್.ಬಿ.ರಾಮು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಸಿ.ಡಿ.ಗಂಗಾಧರ್,ಮಿಮ್ಸ… ನಿರ್ದೇಶಕಡಾ.ಎಂ.ಆರ್.ಹರೀಶ್, ತಾಲೂಕು ಆರೋಗ್ಯಾಧಿಕಾರಿಡಾ.ಜವರೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷಚಂದಗಾಲು ಸಿ.ಕೆ.ನಾಗರಾಜು,ಬ್ಲಾಕ್ ಕಾಂಗ್ರೆಸ್‌ಮಾಜಿ ಅಧ್ಯಕ್ಷ ಎಸ್.ಸಿ.ಪ್ರಕಾಶ್, ಸಿ.ರಾಮು,ಸಿದ್ದರಾಮೇಗೌಡ, ಅಭಿಮಾನಿ ಬಳಗದ ಅಧ್ಯಕ್ಷಬಿ.ಟಿ.ಮಂಜುನಾಥ, ಮಹದೇವು, ಶ್ರಿಕಂಠ,ಜಗದೀಶ್, ಬಾಲು, ಭರತ್ ಇದ್ದರು.