Advertisement

ನೆರೆ ಸಂತ್ರಸ್ತರಿಗೆ ಮಿಡಿದ ಕೋಲಾರದ ಜನತೆ

08:42 AM Aug 12, 2019 | Team Udayavani |

ಕೋಲಾರ: ನಗರದ ಜನರು ರಾಜ್ಯದ ನೆರೆ ಪೀಡಿತ ಜಿಲ್ಲೆಗಳ ಜನತೆಗೆ ಆಹಾರ ಒದಗಿಸಲು ಮುಂದಾಗಿದ್ದಾರೆ.

Advertisement

ನಗರದ ಶಾರದಾಂಭ ಛತ್ರದಲ್ಲಿ ಭಾನುವಾರ ಬೆಳಿಗ್ಗೆಯಿಂದಲೂ ಚಪಾತಿ ಮತ್ತು ರೊಟ್ಟಿ ತಯಾರಿಸುವ ಕಾರ್ಯ ಭರದಿಂದ ಸಾಗಿದೆ.

ನೆರೆ ಸಂತ್ರಸ್ತರಿಗಾಗಿ ಸುಮಾರು 10000 ಚಪಾತಿ ಮತ್ತು ರೊಟ್ಟಿಗಳನ್ನು ತಯಾರಿಸುವ ಗುರಿ ಹೊಂದಲಾಗಿದೆ.

ಭಾನುವಾರ ಬೆಳಿಗ್ಗೆಯಿಂದಲೇ ಮಹಿಳೆಯರು ಮತ್ತು ಯುವಕರು ಸ್ವಯಂಸೇವಕರಾಗಿ ಛತ್ರಕ್ಕೆ ಆಗಮಿಸಿ ಚಪಾತಿ ಮತ್ತು ರೊಟ್ಟಿ ತಯಾರಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.


ಮಹಿಳೆಯರು ಚಪಾತಿಯನ್ನು ಲಟ್ಟಿಸಿ ತಯಾರಿಸುತ್ತಿದ್ದರೆ ಯುವಕರು ಅವುಗಳನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡುತ್ತಿದ್ದಾರೆ.

Advertisement

ಸೋಮವಾರದವರೆಗೂ ಚಪಾತಿ ತಯಾರಿಕೆ ಮುಂದುವರಿಯಲಿದ್ದು ನಂತರ ಅವುಗಳನ್ನು ನೆರೆಪೀಡಿತ ಜಿಲ್ಲೆಗಳಿಗೆ ಕಳುಹಿಸಿ ಕೊಡಲಾಗುವುದೆಂದು ಮಹೇಶ್ ರಾವ್ ಕದಮ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next