Advertisement

ರೆಡ್ಡಿ ಸಮಾಜದ ಬಡವರಿಗೆ ನೆರವು ನೀಡಿ: ದರ್ಶನಾಪುರ

11:26 AM Jan 21, 2022 | Team Udayavani |

ಸೇಡಂ: ರೆಡ್ಡಿ ಸಮಾಜದಲ್ಲೂ ಬಡವರಿದ್ದಾರೆ. ಅವರ ನೆರವಿಗೆ ಬರುವ ಅವಶ್ಯಕತೆ ಇದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.

Advertisement

ತಾಲೂಕಿನ ಹೂಡಾ ಜವಾಹರನಗರ ಬಳಿ ನಿರ್ಮಿಸಲಾಗುತ್ತಿರುವ ಮಹಾಸ್ವಾ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ದೇವಾಲಯಕ್ಕೆ ಭೇಟಿ ನೀಡಿ, ನಂತರ ವೇಮನ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಕಲಬುರಗಿ ಜಿಲ್ಲೆಯ ವಿವಿದೆಢೆಯಲ್ಲಿ ಹೇಮರೆಡ್ಡಿ ಮಲ್ಲಮ್ಮ ದೇವಾಲಯಗಳ ನಿರ್ಮಾಣ ಕಾರ್ಯ ನಡೆದಿದೆ. ವೇಮನ ವೈರಾಗ್ಯಶೀಲರಾಗಿ, ಕಾಯಕನಿಷ್ಠರಾಗಿ ಜೀವಿಸಿ ತತ್ವಪದ್ಯಗಳನ್ನು ಭೋಧಿ ಸುವ ಮೂಲಕ ಸಮಾಜದಲ್ಲಿ ತತ್ವ ಜ್ಞಾನಿಯಾದರು. ಅವರ ತತ್ವದಿಂದ ಅದರ್ಶವ್ಯಕ್ತಿಗಳಾಗಿ ಬದುಕಲು ಕಲಿಯೋಣ ಎಂದರಲ್ಲದೇ ದೇವಾಲಯ ನಿರ್ಮಾಣಕ್ಕೆ 5 ಲಕ್ಷ ರೂ. ವೈಯಕ್ತಿಕ ನೆರವು ನೀಡುವುದಾಗಿ ತಿಳಿಸಿದರು.

ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಚನ್ನಾರೆಡ್ಡಿ ಪಾಟೀಲ ಮಾತನಾಡಿ, ಶಿಕ್ಷಣದ ಮೂಲಕ ಸಮಾಜವನ್ನು ಸಂಘಟಿಸುವ ಅವಶ್ಯಕತೆ ಇದೆ. ಇದರಿಂದ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸಾಧ್ಯ ಎಂದರು.

ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ರೆಡ್ಡಿ ಸಮಾಜದ ಅಧ್ಯಕ್ಷ ನಾಗಭೂಷಣರೆಡ್ಡಿ ಪಾಟೀಲ, ಹೇಮ ವೇಮ ಟ್ರಸ್ಟ್‌ ಅಧ್ಯಕ್ಷ ಶರಣರೆಡ್ಡಿ ಜಿಲ್ಲೇಡಪಲ್ಲಿ, ಭೂದಾನಿ ಮಾಣಿಕರೆಡ್ಡಿ ಹಾಶನಪಲ್ಲಿ, ರೆಡ್ಡಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ಬಿ.ಆರ್‌. ಪಾಟೀಲ, ಶಾಂತರೆಡ್ಡಿ, ನಾಗರೆಡ್ಡಿ ಪಾಟೀಲ ಕರದಾಳ, ರೆಡ್ಡಿ ಸಮಾಜದ ಯುವ ಘಟಕ ಅಧ್ಯಕ್ಷ ಶಿವಲಿಂಗರೆಡ್ಡಿ ಪಾಟೀಲ ಬೆನಕನಹಳ್ಳಿ, ಲಕ್ಷ್ಮೀ ಪಲ್ಲಾರೆಡ್ಡಿ, ರಾಮರೆಡ್ಡಿ ಪಾಟೀಲ ನಾಲವಾರ, ಶರಣಭೂಪಾಲರೆಡ್ಡಿ ಹಾಬಾಳ, ಅನಂತರೆಡ್ಡಿ ಪಾಟೀಲ ಹಾಶನಪಲ್ಲಿ, ಸತೀಶರೆಡ್ಡಿ ಪಾಟೀಲ ರಂಜೋಳ, ಬಿಜೆಪಿ ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ ನಾಮವಾರ, ವೀರಾರೆಡ್ಡಿ ಹೂವಿನಬಾವಿ ಇತರರು ವೇದಿಕೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next