Advertisement

ಸವಿತಾ ಸಮಾಜದ ಬಡ ಮಕ್ಕಳಿಗೆ ನೆರವಾಗಿ

01:27 PM Jun 01, 2019 | Suhan S |

ಗದಗ: ಸವಿತಾ ಸಮಾಜದ ಬಡವರ ಆರೋಗ್ಯ, ಆರ್ಥಿಕ ಸಮಸ್ಯೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಸ್ಥಿತಿವಂತರು ಸಹಾಯ ಮಾಡಬೇಕು ಎಂದು ಸ್ಪಿನ್‌ ಸಂಸ್ಥೆ ಸಂಸ್ಥಾಪಕ ನಾಮದೇವ ನಾಗರಾಜ ಕರೆ ನೀಡಿದರು.

Advertisement

ಜಿಲ್ಲಾ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟ ಹಾಗೂ ಬೆಂಗಳೂರಿನ ಸ್ಪಿನ್‌ ಸಂಸ್ಥೆ ಸಹಯೋಗದಲ್ಲಿ ನಗರದಲ್ಲಿ ನಡೆದ ಸಮಾಜದ 26 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಸ್ಪಿನ್‌ ಸಂಸ್ಥೆ ನೆರವಿನಡಿ ನಿರ್ಮಾಣಗೊಂಡ ಗಿರಿರಾಜ ಕೋಟೆಕಲ್ಲ ಅವರ ಕ್ಷೌರ ಕುಟೀರ ಉದ್ಘಾಟಿಸಿ ಅವರು ಮಾತನಾಡಿದರು.

ಸವಿತಾ ಸಮಾಜದ ಬಹುತೇಕರು ಸಾಂಪ್ರದಾಯಿಕ ವೃತ್ತಿಯನ್ನೇ ಅವಲಂಬಿಸಿದ್ದಾರೆ. ಇಂದಿನ ದುಬಾರಿ ದಿನಗಳಲ್ಲಿ ಕುಲ ವೃತ್ತಿಯಿಂದ ಬರುವ ಆದಾಯ ಜೀವನ ನಿರ್ವಹಣೆಗೆ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಸವಿತಾ ಸಮಾಜದ ಆರ್ಥಿಕ ಸ್ಥಿತಿವಂತರು ಸಂಕಷ್ಟದಲ್ಲಿರುವವರ ಕೈಹಿಡಿಯಬೇಕು ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಕೊಂಚೂರಿನ ಸವಿತಾ ಪೀಠದ ಶ್ರೀಧರಾನಂದ ಸ್ವಾಮೀಜಿ ಮಾತನಾಡಿ, ಗದಗ-ಬೆಟಗೇರಿ ಸೇರಿದಂತೆ ಅನೇಕ ಕಡೆ ರಸ್ತೆ ಅಗಲೀಕರಣದಲ್ಲಿ ಸವಿತಾ ಬಂಧುಗಳ ಗೂಡಂಗಡಿಗಳು ತೆರವು ಮಾಡಲಾಗಿದ್ದು, ಅವರು ದುಡಿಮೆಯನ್ನೇ ಕಳೆದುಕೊಂಡಿದ್ದಾರೆ. ಅವರ ಉಪಜೀವನಕ್ಕೆ ಅನುಕೂಲವಾಗುವಂತೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು. ಸರಕಾರದ ವಾಣಿಜ್ಯ ಮಳಿಗೆಗಳ ಹಂಚಿಕೆಯಲ್ಲಿ ಕನಿಷ್ಠ ಒಂದು ಮಳಿಗೆಯನ್ನು ಸವಿತಾ ಸಮುದಾಯದವರಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಕಲ್ಬುರ್ಗಿ ಮಹಾನಗರ ಪಾಲಿಕೆ ಸದಸ್ಯ ಪರಶುರಾಮ ನಸಲ್ವಾಯಿ ಮಾತನಾಡಿದರು. ಇದೇ ವೇಳೆ ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು.

Advertisement

ಜಿಲ್ಲಾ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ಅಧ್ಯಕ್ಷ ಕೃಷ್ಣಾ ಎಚ್. ಹಡಪದ, ಹಿರಿಯರಾದ ಹನುಮಂತಪ್ಪ ರಾಂಪೂರ, ಬಾಲಕೃಷ್ಣ ಬಾರಬಾರ, ಕ್ಷೌರಿಕ ಬ್ರಿಗೇಡ್‌ ರಾಜ್ಯಾಧ್ಯಕ್ಷ ಮುರಳಿಧರ ರಾಜನಕುಂಟೆ, ಕ್ಷೌರಿಕ ವೃತ್ತಿ ತರಬೇತಿದಾರರಾದ ಬಾಣಸವಾಡಿ ಮಂಜುನಾಥ, ಸವಿತಾ ಸಮಾಜದ ಕಲ್ಬುರ್ಗಿ ಜಿಲ್ಲಾಧ್ಯಕ್ಷ ನರಸಿಂಗ್‌ ಮೊಟಕಪಲ್ಲಿ, ಬಳ್ಳಾರಿ ಜಿಲ್ಲಾಧ್ಯಕ್ಷ ಶರಣಪ್ಪ ಬಳ್ಳಾರಿ, ಬಿಜಾಪುರ ಲಿಂಗರಾಜ, ಕಡೂರ ರವಿಕುಮಾರ, ತುಮಕೂರ ರಂಗನಾಥ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next