ನವದೆಹಲಿ: ಸಂಸತ್ ಭವನ, ರಾಷ್ಟ್ರಪತಿ ಭವನವನ್ನು ಹೊಸತಾಗಿ ನಿರ್ಮಿಸುತ್ತಿರುವ “ಸೆಂಟ್ರಲ್ ವಿಸ್ತಾ’ ಯೋಜನೆಯಲ್ಲಿ ಸಾವಿರಾರು ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಕೆಲ ಕಾರ್ಮಿಕರಿಗೆ ಪ್ರಧಾನಿ ಮೋದಿ ಸನಿಹದಲ್ಲಿ ಕುಳಿತು ದೆಹಲಿಯ ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವ ವೀಕ್ಷಿಸುವ ಅದೃಷ್ಟ ಒಲಿದಿತ್ತು.
ಮಧ್ಯಪ್ರದೇಶದ ಸುಖನಂದನ್ ಇಂತಹವರಲ್ಲೊಬ್ಬರು. ಬೇಸರದ ಸಂಗತಿಯೆಂದರೆ ಈ ವ್ಯಕ್ತಿ ಹಿಂದೆ ಆಂಧ್ರಭವನದಲ್ಲಿ 44 ದಿನ ಕೆಲಸ ಮಾಡಿದ್ದರು. ಅವರಿಗೆ ಅಷ್ಟು ದಿನಗಳ ವೇತನವನ್ನು ಗುತ್ತಿಗೆದಾರ ನೀಡಿಲ್ಲ!
ಒಂದು ವೇಳೆ ನಿಮಗೆ ಪ್ರಧಾನಿ ಜೊತೆಗೆ ಮಾತನಾಡುವ ಅವಕಾಶ ಸಿಕ್ಕರೆ ಏನು ಕೇಳುತ್ತೀರಿ ಎಂದು ಪ್ರಶ್ನಿಸಿದಾಗ; ನನಗೆ 44 ದಿನಗಳ ವೇತನವನ್ನು (21,000ರೂ.) ಕೊಡಿಸಿ ಎಂದು ಕೇಳುತ್ತೇನೆ ಎಂದು ಸುಖನಂದನ್ ಹೇಳಿದ್ದಾರೆ!
ವೇತನ ಪಾವತಿ ಮಾಡಿಲ್ಲ, ಇದರಲ್ಲಿ ಹಲವು ತಕರಾರುಗಳಿವೆಯೆಂದು ಗುತ್ತಿಗೆದಾರ ಜಿತೇನ್ ಉಪಾಧ್ಯಾಯ ಕೂಡ ಒಪ್ಪಿಕೊಂಡಿದ್ದಾರೆ.