Advertisement

Uppinangady ಹೆಲ್ಮೆಟ್‌ ಕಳವು: ಕಳ್ಳನ ಬಂಧನ

12:41 AM Jan 31, 2024 | Team Udayavani |

ಉಪ್ಪಿನಂಗಡಿ: ಬ್ಯಾಂಕ್‌ ಶೆಡ್‌ನ‌ಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ತೂಗು ಹಾಕಿದ್ದ ಹೆಲ್ಮೆಟ್‌ ಅನ್ನು ಕಳವು ಮಾಡಿರುವ ಬಗ್ಗೆ ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘದ ಸಿಬಂದಿ ದೇವರಾಜ್‌ ಎಚ್‌. ಯು. ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಜ.26ರಂದು ಬೆಳಗ್ಗೆ 9.30ಕ್ಕೆ ಸಂಘದ ಶೆಡ್‌ನ‌ಲ್ಲಿ ತನ್ನ ಬೈಕ್‌ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದು, ಸಂಜೆ ಬಂದಾಗ ಹೆಲ್ಮೆಟ್‌ ಕಳವಾಗಿರುವುದು ಕಂಡುಬಂದಿದೆ. ಆ ಬಳಿಕ ಸಂಸ್ಥೆಯ ಸಿಸಿಕೆಮರಾ ಪರಿಶೀಲಿಸಿದಾಗ ವ್ಯಕ್ತಿಯೊಬ್ಬರು ಹೆಲ್ಮೆಟ್‌ ಕಳವುಗೈದಿರುವುದು ತಿಳಿದು ದೂರು ನೀಡಿದ್ದಾರೆ.

ಜ. 29ರಂದು ಅದೇ ವ್ಯಕ್ತಿ ಮತ್ತೆ ಬ್ಯಾಂಕ್‌ ವಠಾರಕ್ಕೆ ಬಂದ ವೇಳೆ ಆತನನ್ನು ಬ್ಯಾಂಕ್‌ ಸಿಬಂದಿ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಮೊದಲು ಕಳ್ಳತನ ಮಾಡಿಲ್ಲ ಎಂದು ವಾದಿಸಿದ್ದರೂ ಆಬಳಿಕ ಒಪ್ಪಿ 9 ಹೆಲ್ಮೆಟ್‌ಗಳನ್ನು ಪೊಲೀಸರಿಗೆ ಒಪ್ಪಿಸಿರುವುದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next