Advertisement
ಕಾಸರಗೋಡು: ರಸ್ತೆ ಸುರಕ್ಷೆ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಜಂಟಿ ವತಿಯಿಂದ ಆ.5ರಿಂದ 31 ವರೆಗೆ ಕಡ್ಡಾಯ ವಾಹನ ತಪಾಸಣೆ ಮತ್ತು ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
Related Articles
Advertisement
ಹಾದಿ ಬದಿ ವ್ಯಾಪಾರಿಗಳ ತೆರವುರಸ್ತೆ ಬದಿ ಅಕ್ರಮವಾಗಿ ವ್ಯಾಪಾರ ನಡೆಸುತ್ತಿರುವ ಮಂದಿ ಆ.16ರ ಮುಂಚಿತವಾಗಿ ತೆರವುಗೊಳ್ಳಬೇಕು ಎಂದು ಶುಕ್ರವಾರ ನಡೆದ ರಸ್ತೆ ಸುರಕ್ಷೆ ಸಭೆ ಮುನ್ಸೂಚನೆ ನೀಡಿದೆ. ರಾಷ್ಟ್ರೀಯ ಹೆದ್ದಾರಿ, ಬದಿ ಕಾನೂನು ಉಲ್ಲಂಘಿಸಿ ವ್ಯಾಪಾರ ನಡೆಸುವವರು ಸ್ವಪ್ರೇರಣೆಯಿಂದ ಈ ಅವಧಿಯಲ್ಲಿ ತೆರವುಗೊಳ್ಳಬೇಕು. ೆ. ಕಾಲ್ನಡಿಗೆ ಹಾದಿಯಲ್ಲಿ ವ್ಯಾಪಾರ ನಡೆಸುವವರ ವಿರುದ್ಧ ಕೈಗೊಳ್ಳುವ ಕ್ರಮದ ಅಂಗವಾಗಿಯೇ ಈ ಕುರಿತೂ ಕ್ರಮ ನಡೆಸಲಾಗುವುದು ಎಂದು ಸಭೆ ಹೇಳಿದೆ. ಹೆಚ್ಚುವರಿ ಅಪಘಾತ ನಡೆಯುವ 15 ಪ್ರದೇಶಗಳನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸಲಾಗಿದೆ. ಇಲ್ಲಿ ಅಗತ್ಯದ ಸಂಜ್ಞಾ ಫಲಕ (ಸೈನ್ ಬೋರ್ಡ್) ಗಳನ್ನು ಸ್ಥಾಪಿಸಲಾಗುವುದು ಮತ್ತು ರಸ್ತೆ ಸುರಕ್ಷೆ ಮಾನದಂಡಗಳನ್ನು ಸ್ವೀಕರಿಸಲಾಗುವುದು. ಈಗಾಗಲೇ ಸ್ಥಾಪಿಸಿರುವ ಫಲಕಗಳಿಗೆ ಅಡ್ಡವಾಗಿ ಬೆಳೆದ ಮರದ ಗೆಲ್ಲುಗಳು ಇತ್ಯಾದಿಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಪರೀಕ್ಷಾರ್ಥ ಟ್ರಾಫಿಕ್ ಪರಿಷ್ಕರಣೆ ಕೆ.ಎಸ್.ಟಿ.ಪಿ. ರಸ್ತೆಯಲ್ಲಿ ಪರೀಕ್ಷಾರ್ಥ ಲೈನ್ ಟ್ರಾಫಿಕ್ ಪರಿಷ್ಕರಣೆ ಆ.14ರಿಂದ 16 ವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದರ ಅಂಗವಾಗಿ ದೊಡ್ಡ ವಾಹನಗಳಿಗೆ ಸಣ್ಣವಾಹನಗಳಿಗೆ ಪ್ರತ್ಯೇಕ ಬದಿ ನಿಗದಿ ಪಡಿಸಿ ಸಂಚಾರ ನಿಯಂತ್ರಿಸಲಾಗುವುದು. ಇದು ಯಶಸ್ವಿಯಾದಲ್ಲಿ ಜಿಲ್ಲೆಯ ಇತರ ಕಡೆಗಳಲ್ಲೂ ಇದೇ ರೀತಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದವರು ಹೇಳಿದರು. ಆರ್.ಟಿ.ಒ. ಎಸ್.ಮನೋಜ್, ಅಡೀಶನಲ್ ಎಸ್.ಪಿ.ಪ್ರಷೋಬ್, ಮೋಟಾರು ವಾಹನ ಇನ್ಸ್ ಪೆಕ್ಟರ್(ಎನ್‌ಫೋರ್ಸ್ ಮೆಂಟ್) ಉಪಸ್ಥಿತರಿದ್ದರು.