Advertisement

ಜೂ.1ರಿಂದ ಹಿಂಬದಿ ಸವಾರರಿಗೆ ಹೆಲ್ಮೆಟ್‌ ಕಡ್ಡಾಯ

07:50 AM Mar 13, 2019 | Team Udayavani |

ಕೋಲಾರ: ಜಿಲ್ಲಾದ್ಯಂತ ಜೂ.1ರಿಂದ ದ್ವಿಚಕ್ರ ವಾಹನ ಸವಾರ ಮತ್ತು ಹಿಂಬದಿ ಸವಾರರು ಕೂಡ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಇದನ್ನು ಪೊಲೀಸ್‌ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೂಡಲೇ ಸಾರ್ವಜನಿಕರಿಗೆ ಅರಿವು ಮೂಡಿಸಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

Advertisement

ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಾಹನ ಸವಾರರು ನಿಯಮ ಬಾಹಿರವಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ನ್ಯಾಷನಲ್‌ ಹೈವೇಗಳಲ್ಲಿ ದಿನನಿತ್ಯ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಾ ಇದ್ದು, ಅಪಘಾತಗಳನ್ನು ತಡೆಗಟ್ಟಲು ಬ್ಯಾರಿಕೇಡ್‌, ಲೈಟಿಂಗ್‌ ಸೂಚನಾ ಫಲಕಗಳನ್ನು ಹಾಕಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮ ಸದ್ಬಳಕೆಯಾಗಲಿ: ರಾಷ್ಟ್ರೀಯ ಹೆದ್ದಾರಿಯ ಟಮಕ, ಪವನ್‌ ಕಾಲೇಜು, ಜಿಲ್ಲಾಧಿಕಾರಿ ಕಚೇರಿ ಮುಂಭಾಗ, ವಡಗೂರು ಗೇಟ್‌, ತಂಬಳ್ಳಿ ಅಂತಹ ಸ್ಥಳದಲ್ಲಿ ಪಾದಚಾರಿಗಳಿಗೆ ಹೈವೇ ದಾಟಲು ಮೇಲು ಸೇತುವೆ ಸರ್ವಿಸ್‌ ರಸ್ತೆ ಆದಷ್ಟು ಬೇಗ ಕೆಲಸ ಪ್ರಾರಂಭಿಸಬೇಕು. ಹೆದ್ದಾರಿಯಲ್ಲಿ ಅಪಘಾತ ವಲಯಗಳನ್ನು ಗುರುತಿಸಿ ಆ ಬಗ್ಗೆ ಸವಾರರ ಗಮನ ಸೆಳೆಯಲು ಫಲಕಗಳನ್ನು ಅಳವಡಿಸಲು ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಹೊಂಡಾ ಕಂಪನಿಯು ಅನೇಕ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಅಪಘಾತವಾದ ಸಂದರ್ಭದಲ್ಲಿ ಸಾರ್ವಜನಿಕರು ಅವರನ್ನು ಆಸ್ಪತ್ರೆಗೆ ಸಾಗಿಸಬೇಕಾದರೆ ಪೋಲಿಸ್‌ ಇಲಾಖೆಯ ದೂರಗಳಲ್ಲಿ ಭಾಗಿಯಾಗಬೇಕು ಎನ್ನುವ ತಪ್ಪು ಮಾಹಿತಿಯನ್ನು ಜನರ ಭಾವನೆಗಳಲ್ಲಿ ಇರುವುದರಿಂದ ಅದನ್ನು ದೂರಮಾಡಲು ಎಲ್ಲಾ ಆಸ್ಪತ್ರೆಯ ನಾಮಫಲಕಗಳಲ್ಲಿ ಕಡ್ಡಾಯವಾಗಿ ಹಾಕಬೇಕು ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್‌ ವರಿಷ್ಟಾಧಿಕಾರಿ ಡಾ.ರೋಹಿಣಿ ಕಟೋಚ್‌ ಸೆಪೆಟ್‌. ಪ್ರಾದೇಶಿಕ ಸಾರಿಗೆ ಅಧಿಕಾರಿ ನೇಪಾನಂದ್‌,ನ್ಯಾಷನಲ್‌ ಹೆ„ವೇ ಪ್ರಾಧಿಕಾರದ ಸೋಮಶೇಖರ್‌ ಹೊಂಡಾ ಕಂಪನಿಯ ವಿನೋದ್‌ ವೆಂಕಟ್‌ ಕಾರ್ಮಿಕ ಮುಖಂಡ ಕೆ.ವಿ. ಸುರೇಶ್‌ ಕುಮಾರ್‌ ಮುಂತಾದವರು ಇದ್ದರು.

Advertisement

ಚೆಕ್‌ಪೋಸ್ಟ್‌ಗಳಿಗೆ ಭೇಟಿ: ಕೋಲಾರ ಜಿಲ್ಲೆಯು ಭೌಗೋಳಿಕವಾಗಿ ಗಡಿ ರಾಜ್ಯಗಳಿಂದ ಕೂಡಿದ್ದು, ಲೋಕಸಭಾ ಚುನಾವಣೆಯಲ್ಲಿ ಯಾವುದೇ ರೀತಿಯಲ್ಲಿ ಅವ್ಯವಹಾರ ನಡೆಯಬಾರದು ಎನ್ನುವ ಉದ್ದೇಶದಿಂದ ಜಿಲ್ಲಾಡಳಿತ ವತಿಯಿಂದ ಎಲ್ಲಾ ಚೆಕ್‌ ಪೋಸ್ಟ್‌ಗಳಲ್ಲಿ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಅಗತ್ಯ ಸೌಲಭ್ಯ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

ಸಿಬ್ಬಂದಿಗೆ ಮೂಲ ಸೌಕರ್ಯಗಳನ್ನು ಹೊಂದಗಿಸುವುದು ನಮ್ಮ ಜವಾಬ್ದಾರಿ. ಅ ನಿಟ್ಟಿನಲ್ಲಿ ಎಲ್ಲಾ ಚೆಕ್‌ ಪೋಸ್ಟ್‌ಗಳಲ್ಲಿ ಕುಡಿಯುವ ನೀರಿನಿಂದ ಹಿಡಿದು ಸೂಕ್ತ ರೀತಿಯಲ್ಲಿ ಸೌಲಭ್ಯಗಳನ್ನು ನೀಡಲಾಗುವುದು ವಾಹನಗಳ ತಪಾಸಣೆ ಅನುಗುಣವಾಗಿ ಸಿಬ್ಬಂದಿಯನ್ನು ನೀಡಲಾಗುವುದು ಎಂದರು.

ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ: ಜಿಲ್ಲೆಯಲ್ಲಿ ಬರ ದೊಡ್ಡ ಸವಾಲಾಗಿದ್ದು ಬಿಸಿಲು ಜಾಸ್ತಿಯಾಗಿ ನೀರಿನ ಮೂಲ ದಿನನಿತ್ಯ ಕಡಿಮೆಯಾಗುತ್ತಾ ಇದ್ದು ಇದನ್ನು ನಿಭಾಯಿಸಲು ಸರಕಾರದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿ ಸಮಸ್ಯೆ ನಿಭಾಯಿಸಲಾಗುತ್ತಾ ಇದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 48 ಗ್ರಾಮಗಳು ನಗರ ಪ್ರದೇಶದ 46 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದ್ದು ತಕ್ಷಣವೇ ನಮ್ಮಲ್ಲಿ ಇರುವ ಹಣವನ್ನು ಬಳಸಿ ಸಮಸ್ಯೆ ಪರಿಹಾರದ ಕಾರ್ಯ ನಡೆಯುತ್ತಾ ಇದೆ ಎಂದು ಹೇಳಿದರು. ಸಿಆರ್‌ಎಫ್‌ ಅನುದಾನಲ್ಲಿ 10 ಕೋಟಿ ರೂ. ಇದ್ದು, ಖಾಸಗಿ ಕೊಳವೆ ಬಾವಿಯಿಂದ ಅಥವಾ ಖಾಸಗಿ ಟ್ಯಾಂಕರ್‌ ಮೂಲಕ ನೀರು ಕೊಟ್ಟು ಹೊಸ ಕೊಳವೆ ಬಾವಿ ಕೊರೆಯಲು ಈಗಾಗಲೇ ಹಳ್ಳಿಗಳಲ್ಲಿ ನಡೆಯುತ್ತಾ ಇದೆ.

ಇದಕ್ಕೆ ಯಾವುದೇ ಚುನಾವಣಾ ನೀತಿ ಸಂಹಿತೆ ಜಾರಿ ಇಲ್ಲ ಎಂದರು. ಜಾನುವಾರುಗಳಿಗೆ ಮೇವು ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಹೊರರಾಜ್ಯಗಳಿಂದ 49 ಟನ್‌ ಒಣ ಮೇವು ಸಂಗ್ರಹಿಸಲಾಗಿದ್ದು, ಪ್ರತಿ ತಾಲೂಕಿನಲ್ಲಿ ಒಂದು ಮೇವು ಬ್ಯಾಂಕ್‌ ತೆಗೆಯಲಾಗುವುದು. ಜೊತೆಗೆ ಕೆಎಂ ಎಫ್‌ಕಡೆಯಿಂದ ಸುಮಾರು 26 ಲಕ್ಷ ರೂ. ಸಿಆರ್‌ಎಫ್‌ ಅನುದಾನ ಬಳಸಿ ಖಾಸಗಿಯವರ ಹತ್ತಿರ ಹಸಿ ಮೇವು  ಬೆಳೆಸಲಾಗುತ್ತಾ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next