Advertisement

ಕಾಳ್ಗಿಚ್ಚು ಆರಿಸಲು ಕಾಪ್ಟರ್‌ ಬಳಕೆ

12:30 AM Feb 26, 2019 | |

ಗುಂಡ್ಲುಪೇಟೆ/ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಸೇರಿದಂತೆ ರಾಜ್ಯದ ವಿವಿಧ ಅರಣ್ಯಗಳಲ್ಲಿ ಕಾಣಿಸಿಕೊಂಡಿರುವ ಕಾಳ್ಗಿಚ್ಚಿನ ಪ್ರತಾಪ ಮುಂದುವರಿದಿದ್ದು, ಬಂಡೀಪುರದಲ್ಲಿ ಬೆಂಕಿ ನಂದಿಸಲು ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದರ ಜತೆಯಲ್ಲೇಹಿಮವದ್‌ ಗೋಪಾಲಸ್ವಾಮಿ ಬೆಟ್ಟದಿಂದ ಮದ್ದೂರು ಅರಣ್ಯ ವಲಯಕ್ಕೂ ಬೆಂಕಿ ಆವರಿಸಿದೆ. 

Advertisement

ರಾಜ್ಯ ಸರ್ಕಾರದ ಮನವಿಯ ಅನ್ವಯ ವಾಯುಪಡೆಯ ಎಂಐ17-ವಿ5 ಎರಡು ಸಮರ ಹೆಲಿಕಾಪ್ಟರ್‌ಗಳು ಬಂಡೀಪುರಕ್ಕೆ ಆಗಮಿಸಿ, ಬೆಂಕಿ ಆರಿಸುವಲ್ಲಿ ನಿರತವಾದವು. ಸೋಮವಾರ ಮಧ್ಯಾಹ್ನವೇ 2 ಹೆಲಿಕಾಪ್ಟರ್‌ ಬಂದರೂ, ಇಳಿಯಲು ಸೂಕ್ತ ಸ್ಥಳಾವಕಾಶ ಇಲ್ಲದೇ ಮೈಸೂರಿಗೆ ವಾಪಸ್‌ ಹೋಗಿದ್ದವು. ಸಂಜೆ 4ರ ವೇಳೆಗೆ ಮತ್ತೆ ಬಂದು, ಕರಡುಕಲ್‌ ಬೆಟ್ಟದಲ್ಲಿ ಒಂದು, ಮತ್ತೂಂದು ಚಮ್ಮನಹಳ್ಳದಲ್ಲಿ ಕಾರ್ಯಾಚರಣೆ ನಡೆಸಿದವು. ಒಟ್ಟು 30 ಸಾವಿರ ಲೀ. ನೀರನ್ನು ಬೆಂಕಿ ಆರಿಸಲು ಸಿಂಪಡಿಸಲಾಗಿದೆ. 

8 ಸಾವಿರ ಎಕರೆ ಆಹುತಿ
ಬಂಡೀಪುರ ಕಾಡಿನಲ್ಲೇ ಇದುವರೆಗೆ 8 ಸಾವಿರ ಎಕರೆ ಅರಣ್ಯ ಅಗ್ನಿಗೆ ಆಹುತಿಯಾಗಿದೆ. ಈ ಬಗ್ಗೆ ಸ್ವತಃ ಅರಣ್ಯ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.

ಸಚಿವರಿಂದ ಪರಿಶೀಲನೆ: ಬೆಂಕಿ ಬಿದ್ದ ಅರಣ್ಯ ಪ್ರದೇಶಗಳಲ್ಲಿ ಸೋಮವಾರ ವೀಕ್ಷಣೆ ನಡೆಸಿದ ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಬೆಂಕಿಯಿಂದ ತೀವ್ರವಾಗಿ ಹಾನಿಗೊಳಗಾಗಿರುವ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.  

ಇನ್ನೂ ಹಲವೆಡೆ ಬೆಂಕಿ
– ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲು
– ಸಾಗರ ತಾಲೂಕಿನ ಆವಿನಹಳ್ಳಿ ಹೋಬಳಿ ಭಾಗದ ಅರಣ್ಯ
– ಬೆಂಗಳೂರು ಬಳಿಯ ನೆಲಮಂಗಲದ ನೀಲಗಿರಿ ತೋಪು

Advertisement
Advertisement

Udayavani is now on Telegram. Click here to join our channel and stay updated with the latest news.

Next