Advertisement
ಅವರು ರವಿವಾರ ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಸಿಬಂದಿಗೆ ನಡೆದ ಚುನಾವಣಾ ತರಬೇತಿಯಲ್ಲಿ ಮಾತನಾಡಿದರು.ಅಂಚೆ ಮತ ಸೌಲಭ್ಯ ಬಳಸಿಕೊಳ್ಳಿ. ಚುನಾವಣ ಕರ್ತವ್ಯವನ್ನು ಪಾರ ದರ್ಶಕವಾಗಿ, ಪ್ರಾಮಾಣಿಕವಾಗಿ, ವಿಶ್ವಾಸಾರ್ಹವಾಗಿ ನಡೆಸಿ ಎಂದರು.
ಯಂತೆ ಸಿಬಂದಿಗೆ ಆರೋಗ್ಯ ಇಲಾಖೆ ವತಿಯಿಂದ ಪ್ರಥಮ ಚಿಕಿತ್ಸೆ ತರಬೇತಿಯನ್ನು ಕೂಡ ನೀಡಲಾಯಿತು. ಇದಕಾಗಿ ಆರೋಗ್ಯ ಇಲಾಖೆ ಯಿಂದ ವಿವಿಧ ಆಸ್ಪತ್ರೆಗಳ ವೈದ್ಯರನ್ನು ನಿಯೋಜಿಸಲಾಗಿತ್ತು. ತರಬೇತಿ ನೋಡಲ್ ಅಧಿಕಾರಿ ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ರಾಜ್, ತಹಶೀಲ್ದಾರ್ ವಿಜಯೇಂದ್ರ ಭಾಡ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ, ಚುನಾವಣ ಉಪತಹಶೀಲ್ದಾರ್ ಎನ್.ಕೆ. ರಾಮಣ್ಣ ನಾಡಿಗ್ ಮೊದಲಾದವರಿದ್ದರು. 13 ಮಂದಿ ತರಬೇತಿ ನೀಡಿದರು.