Advertisement
ಅರಶಿನವನ್ನು ಬಳಸಿಕೊಂಡು ಹಲವಾರು ಔಷಧಿಗಳನ್ನು ತಯಾರಿಸಲಾಗುತ್ತದೆ. ನಮ್ಮ ದಿನನಿತ್ಯದ ಆಹಾರ ಕ್ರಮಗಳಲ್ಲೂ ಇದನ್ನು ಬಳಸಬಹುದಾಗಿದೆ. ಇದನ್ನು ಬಳಸಿಕೊಂಡು ಅತ್ಯಂತ ಸುಲಭವಾಗಿ ತಯಾರಿಸಬಲ್ಲ ಅರಶಿನ- ಕಾಳುಮೆಣಸಿನ ಕಷಾಯದ ಸೇವನೆ ಶೀತ, ಗಂಟಲುನೋವು, ಹೃದಯ ಸಂಬಂಧಿ ಸಮಸ್ಯೆ,ಶ್ವಾಸಕೋಶದ ಸಮಸ್ಯೆಗಳನ್ನು ಒಳಗೊಂಡಂತೆ ಬಾಯಿಯ ದುರ್ಗಂಧವನ್ನು ನಿವಾರಿಸುವಲ್ಲಿ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.
Related Articles
Advertisement
ಮಾಡುವ ವಿಧಾನ
ಮೊದಲು 2 ಲೋಟ ನೀರಿಗೆ ಪುಡಿ ಮಾಡಿಕೊಂಡಿರುವ ಒಂದು ಚಮಚ ಅರಶಿನವನ್ನು ಹಾಕಿ. ನಂತರ ಇದಕ್ಕೆ ಕಾಳುಮೆಣಸನ್ನು ಪುಡಿಮಾಡಿ ಅರ್ಧ ಚಮಚದಷ್ಟು ಸೇರಿಸಿ. ಒಂದು ಲೋಟ ಕಷಾಯವಾಗುವಷ್ಟು ಚೆನ್ನಾಗಿ ಕುದಿಸಿ. ಆ ಬಳಿಕ ಅಗತ್ಯಕ್ಕೆ ತಕ್ಕಷ್ಟು ಬೆಲ್ಲ ಸೇರಿಸಿ. (ಮಧುಮೇಹಿಗಳು ಆದಷ್ಟು ಕಡಿಮೆ ಬೆಲ್ಲ ಸೇರಿಸುವುದು ಒಳ್ಳೆಯದು) ಹೀಗೆ ತಯಾರಿಸಲಾದ ಕಷಾಯಕ್ಕೆ ಕೊನೆಯಲ್ಲಿ ಸ್ವಲ್ಪ ಲಿಂಬೆಹಣ್ಣಿನ ರಸ ಸೇರಿಸಿ.
ಶಾಂತಿ ಕೊಡಚಾದ್ರಿ