Advertisement

ಟೋಲ್‌: ಪಡುಬಿದ್ರಿ ವಾಹನ ಸವಾರರಿಗೆ ಮುಕ್ತ

12:30 AM Jan 26, 2019 | Team Udayavani |

ಪಡುಬಿದ್ರಿ: ಕರ್ನಾಟಕ ರಕ್ಷಣಾ ವೇದಿಕೆಯು ಹೆಜಮಾಡಿ ಟೋಲ್‌ ಪ್ಲಾಝಾದಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ವಾಹನಗಳಿಗೆ ಸಂಪೂರ್ಣ ಸುಂಕ ವಿನಾಯಿತಿಯನ್ನು ಆಗ್ರಹಿಸಿ ಪಡುಬಿದ್ರಿಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು ಇಂದಿಗೆ 19ನೇ ದಿನಕ್ಕೆ ಕಾಲಿರಿಸಿದೆ. 

Advertisement

ಇದೇ ವೇಳೆ ಹೆಜಮಾಡಿ ಗ್ರಾಮದ ಸ್ಥಳೀಯರೊಂದಿಗೆ ಇಂದಿನಿಂದ ಪಡುಬಿದ್ರಿಯ ವಾಹನ ಸವಾರರಿಗೆ ಅವರ ವಾಹನದ ನೋಂದಣಿ ಪತ್ರವನ್ನು ತೋರಿಸಿದ್ದಲ್ಲಿ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಮುಕ್ತವಾಗಿ ಬಿಡಲಾರಂಭಿಸಿದ್ದಾರೆ. ಪ್ರತಿಭಟನೆ ತಾಣಕ್ಕೆ ಶಾಸಕ ಲಾಲಾಜಿ ಮೆಂಡನ್‌ ಭೇಟಿಯಿತ್ತು ಪ್ರತಿಭಟನಾ ನಿರತರಿಗೆ ಶುಕ್ರವಾರದಂದು  ತಮ್ಮ ಬೆಂಬಲ ಘೋಷಿಸಿದರು. 

ಪ್ರತಿಭಟನಕಾರರರಿಗೆ ಬೆಂಬಲ ಸೂಚಿಸಿ ಮಾತನಾಡಿದ ಲಾಲಾಜಿ ಮೆಂಡನ್‌, ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಕೇವಲ ಹೆಜಮಾಡಿಯ ವಾಹನಗಳನ್ನು ಬಿಡಲಾಗುತ್ತಿದೆ.  ಈ ಕುರಿತಾಗಿ ಪಡುಬಿದ್ರಿ, ಪಾದೆಬೆಟ್ಟು ಭಾಗದ ವಾಹನಗಳಿಗೂ ಮುಕ್ತವಾಗಿ, ಯಾವುದೇ ಷರತ್ತಿಲ್ಲದೆ  ಬಿಡಬೇಕೆಂಬುದನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದ್ದೇನೆ.
 
ಮೊನ್ನೆಯ ಸಭೆಯಲ್ಲೂ ಅಧಿಕಾರಿಗಳಿರದೇ ಸಭೆಯೇ ಅಪೂರ್ಣವಾಗಿತ್ತು. ಇದು ಕೇವಲ ಕರವೇ ಪ್ರತಿಭಟನೆಯಲ್ಲ. ಉದ್ದೇಶ ಸಾಧನೆಗೆ ಊರಿನ ಜನರೆಲ್ಲರೂ ಒಟ್ಟಾಗಿ ಈ ಹೋರಾಟಕ್ಕೆ ಬೆಂಬಲವನ್ನು ನೀಡಬೇಕಿದೆ. ಎಂದು  ಶಾಸಕ ಲಾಲಾಜಿ ಮೆಂಡನ್‌ ಹೇಳಿದರು.

“ಬೇಡಿಕೆ ಈಡೇರದಿದ್ದಲ್ಲಿ ಮುಂದಿನ 
ದಿನಗಳಲ್ಲಿ ಪಡುಬಿದ್ರಿ ಬಂದ್‌’ತಾವು ಸದ್ಯ ಮುಂದಿನವಾರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಗದೊಂದು ಸಭೆಯನ್ನು ಕರೆಯಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಅದರಲ್ಲಿಯೂ ತಮ್ಮ ಸಂಘಟಿತ ಹೋರಾಟಕ್ಕೆ ಸಕಾರಾತ್ಮಕ ಫಲಿತಾಂಶವು ಬಾರದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಡುಬಿದ್ರಿ ಬಂದ್‌ಗೂ ಕರೆ ನೀಡಲಾಗುವುದು ಎಂದೂ ಶಾಸಕರು ಈ ಸಂದರ್ಭದಲ್ಲಿ ಹೇಳಿದರು.

ಕೀಳಂದಾಜಿಸಿದ್ದಲ್ಲಿ ಅಮರಣಾಂತ ಉಪವಾಸ, ಮುಖ್ಯಮಂತ್ರಿಗೆ ಕರಿಪತಾಕೆ ನಮಗೆ ನ್ಯಾಯ ಬೇಕು. ಜಿಲ್ಲಾಧಿಕಾರಿ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಮತ್ತಷ್ಟು ನಾವು ಕಾಯಲು ಸಿದ್ಧರಿಲ್ಲ. ಸಾರ್ವಜಿನಕ ಉದ್ದೇಶಕ್ಕಾಗಿ ಪ್ರತಿಭಟನಾನಿರತರಾಗಿರುವ ತಮ್ಮನ್ನು ಕೀಳಂದಾಜಿಸಬೇಡಿರಿ. ವಾರಾಂತ್ಯಕ್ಕೆ ತಮಗೆ ಉತ್ತರವು ಬಾರದಿದ್ದಲ್ಲಿ ಮುಂದಿನ ರವಿವಾರದಿಂದ ಮಗದೊಮ್ಮೆ ಆಮರಣಾಂತ ಉಪವಾಸವನ್ನು ಕೈಗೊಳ್ಳುವುದಾಗಿಯೂ, ಫೆ. 3ರಂದು ಜಿಲ್ಲೆಗೆ ಆಗಮಿಸಲಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಕಪ್ಪು ಬಾವುಟವನ್ನೂ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ ಶೆಟ್ಟಿ ಬಣ)ಯು ಪ್ರದರ್ಶಿಸಲಿದೆ ಎಂದು ಕರವೇ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್‌ ಅಹಮ್ಮದ್‌ ಹೇಳಿದರು. ಶಾಸಕರೊಂದಿಗೆ ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ತಾ. ಪಂ. ಸದಸ್ಯೆ ನೀತಾ ಗುರುರಾಜ್‌, ಮಿಥುನ್‌ ಆರ್‌. ಹೆಗ್ಡೆ, ಪಡುಬಿದ್ರಿ ನಾಗರಿಕ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ರಾಜ್ಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಅಜೀಜ್‌ ಹೆಜಮಾಡಿ, ದಸಂಸ ನಾಯಕ ಲೋಕೇಶ್‌ ಕಂಚಿನಡ್ಕ, ಕರವೇ ಕಾಪು ಘಟಕಾಧ್ಯಕ್ಷ ಸೆಯ್ಯದ್‌ ನಿಝಾಮ್‌ ಭಾಗವಹಿಸಿದ್ದರು. 

Advertisement

ಪಡುಬಿದ್ರಿ ವಾಹನಗಳ ನೋಂದಣಿ ಕಾರ್ಡ್‌ ತೋರಿಸಿದರೆ ಮುಕ್ತ ಸಂಚಾರ ಈ‌ ನಡುವೆ ಪೊಲೀಸ್‌ ಮಾಹಿತಿಯೊಂದು ಪಡುಬಿದ್ರಿಯ ಖಾಸಗಿ ವಾಹನಗಳಿಗೆ ಅದರ ನೋಂದಣಿ ದಾಖಲೆಯನ್ನು ಟೋಲ್‌ಗೇಟ್‌ನಲ್ಲಿ ತೋರಿಸಿದ್ದಲ್ಲಿ ಮುಕ್ತವಾಗಿ ಬಿಡಲಾಗುತ್ತಿದೆ ಎಂಬ ಸುದ್ದಿಯನ್ನು ಪ್ರತಿಭಟನಕಾರರಿಗೆ ತಲುಪಿಸಿತ್ತು. ಇದನ್ನು ಪತ್ರಕರ್ತರು ತಮ್ಮ ವಾಹನವನ್ನು ತೆಗೆದುಕೊಂಡು ಹೋಗಿ ಪರಿಶೀಲನೆಯನ್ನೂ ನಡೆಸಿದ್ದಾರೆ. ಇಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್‌ನ ನಡಾÕಲು ಗ್ರಾಮದ ವಾಹನಗಳಿಗಷ್ಟೇ ಸುಂಕ ವಿನಾಯಿತಿಯನ್ನು ನವಯುಗ ಕಂಪೆನಿಯು ಇದೀಗ ನೀಡುತ್ತಿದ್ದು ಪಡುಬಿದ್ರಿ ಗ್ರಾ. ಪಂ. ವ್ಯಾಪ್ತಿಯ ಪಾದೆಬೆಟ್ಟು ಗ್ರಾಮದ ವಾಹನಗಳಿಗೆ ಈ ವಿನಾಯಿತಿಯು ಸದ್ಯ ಲಭ್ಯವಿಲ್ಲ. ಈ ಕುರಿತಾಗಿ ನವಯುಗ ಟೋಲ್‌ ಪ್ಲಾಝಾದ ಪ್ರಬಂಧಕರೂ ಪ್ರತಿಕ್ರಿಯೆಗೆ ಲಭ್ಯರಿರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next