Advertisement

ಹೆಜಮಾಡಿ ಟೋಲ್‌ಗೇಟಲ್ಲಿ ದುಪ್ಪಟ್ಟು ಸುಂಕ ವಸೂಲಿ ಮಾಡಿದರೆ ಅಲ್ಲೂ ಹೋರಾಟ

12:34 AM Nov 29, 2022 | Team Udayavani |

ಕಾಪು: ಅನಧಿಕೃತ ಸುರತ್ಕಲ್‌ಟೋಲ್‌ ರದ್ದತಿಯ ಬಳಿಕ ಹೆಜಮಾಡಿಗೇಟ್‌ನಲ್ಲಿ ದುಪ್ಪಟ್ಟು ಸುಂಕ ವಸೂಲಿ ಪ್ರಾರಂಭಿಸಿದಲ್ಲಿ ಡಿ. 2ರಿಂದ ಸಂಘಟನಾತ್ಮವಾಗಿ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Advertisement

ಸಾಸ್ತಾನ ಟೋಲ್‌ನಲ್ಲಿ ಅಲ್ಲಿನ ಜಿ.ಪಂ. ವ್ಯಾಪ್ತಿಗೆ ಶುಲ್ಕ ವಿರಹಿತಗೊಳಿಸಿದಂತೆ ಹೆಜಮಾಡಿಯಲ್ಲಿ ಟೋಲ್‌ನ 5 ಕಿ.ಮೀ. ವ್ಯಾಪ್ತಿಯ ವಾಹನಗಳಿಗೆ ಟೋಲ್‌ ವಿರಹಿತಗೊಳಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.

ನಿರಂತರ ಹೋರಾಟದ ಫ‌ಲವಾಗಿ ಸುರತ್ಕಲ್‌ ಟೋಲ್‌ ಗೇಟ್‌ ರದ್ದಾಗುತ್ತಿದೆ. ಅದನ್ನು ಎನ್‌ಎಂಪಿಟಿಗೆ ಸ್ಥಳಾಂತರಿಸುವುದಾಗಿ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. ಆದರೆ ಇದೀಗ ಹೆಜಮಾಡಿ ಟೋಲ್‌ನಲ್ಲಿ ದುಪ್ಪಟ್ಟು ಟೋಲ್‌ ಸಂಗ್ರಹ ಮಾಡುವುದಾಗಿ ಘೋಷಿಸಿದೆ. ಇದು ಜನವಿರೋಧಿ ನೀತಿ ಎಂದು ತಿಳಿಸಿದರು.

ಜನತೆಗೆ ಮೋಸ
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಮಾತನಾಡಿ, ಸುರತ್ಕಲ್‌ ಅಕ್ರಮ ಟೋಲ್‌ ಎಂದು ಸಚಿವ ಗಡ್ಕರಿ ಯವರೇ ಸಂಸತ್‌ನಲ್ಲಿ ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆಯೇ ಸುರತ್ಕಲ್‌ ಟೋಲ್‌ ರದ್ದು ಮಾಡುವುದಾಗಿ ಹೇಳಿದ್ದರೂ ಈವರೆಗೂ ಮುಂದುವರಿಸಲಾಗಿದೆ. ಡಿ. 1ರಿಂದ ರದ್ದಾದರೂ ಅಲ್ಲಿನ ಸುಂಕವನ್ನು ಹೆಜಮಾಡಿಗೆ ವರ್ಗಾಯಿಸುತ್ತಿದ್ದಾರೆ. ಇದು ಡಬಲ್‌ ಎಂಜಿನ್‌ ಸರಕಾರ ಜನತೆಗೆ ಮಾಡುವ ಮೋಸವಾಗಿದೆ. ಉಭಯ ಜಿಲ್ಲೆಯಲ್ಲಿ ಇಬ್ಬರು ಸಂಸದರು, ಪ್ರಭಾವಿ ನಾಯಕರಿದ್ದರೂ ಎಲ್ಲರೂ ಈ ಹೊಣೆಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಕರ್ತವ್ಯ ಮರೆತ ಸಂಸದ, ಶಾಸಕರು
ಟೋಲ್‌ ವಿರೋಧಿ ಹೋರಾಟ ಸಮಿತಿಯ ಮುನೀರ್‌ ಕಾಟಿಪಳ್ಳ ಮಾತನಾಡಿ, ಸುರತ್ಕಲ್‌ ಅಕ್ರಮ ಟೋಲ್‌ ಆರಂಭವಾಗಿ 7 ವರ್ಷವಾ ಗುತ್ತಿದೆ. ಗುತ್ತಿಗೆದಾರರ ಬಾಕಿ ಮೊತ್ತ ಪಾವತಿ ನೆಪದಲ್ಲಿ ಅದನ್ನು ಹೆಜಮಾಡಿ ಯಲ್ಲಿ ಜನರಿಂದ ವಸೂಲಿ ಮಾಡು ವುದು ಸಮಂಜಸವಲ್ಲ. ಸಂಸದರು, ಶಾಸಕರು ಕರ್ತವ್ಯ ಮರೆತಿದ್ದಾರೆ. 1ರಿಂದ ಜಾರಿಗೆ ಬರುವ ಸುತ್ತೋಲೆಯನ್ನು ತಡೆಹಿಡಿಯು ವಲ್ಲಿ ಶಾಸಕರು, ಸಂಸದರು ಮುಂದಾಗ ಬೇಕು ಎಂದು ಆಗ್ರಹಿಸಿದರು.

Advertisement

ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಹೋರಾಟ ಸಮಿತಿ ಮುಖಂಡರಾದ ಶೇಖರ್‌ ಹೆಜಮಾಡಿ, ಜಿತೇಂದ್ರ ಫ‌ುರ್ಟಾಡೊ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next