Advertisement

ಹೆಗ್ಗಡೆ ಸೇವಾ ಸಂಘ:ವಾರ್ಷಿಕ ಕ್ರೀಡೋತ್ಸವ ಸಮಾರೋಪ

03:50 PM Jan 17, 2018 | |

ನವಿ ಮುಂಬಯಿ: ಮನುಷ್ಯ ಜೀವನದಲ್ಲಿ ತನ್ನ ವ್ಯಕ್ತಿತ್ವವನ್ನು ವಿಕಸನಗೊಳಿಸಲು ಕ್ರೀಡೆ ಸಹಕಾರಿಯಾಗುತ್ತದೆ. ಸೋಲು-ಗೆಲುವಿನಿಂದ ಮನುಷ್ಯನ ಮನೋ ಬಲ ವಿಕಸನ ಸಾಧ್ಯ.    ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಸೋತವರನ್ನು ಓಲೈಸಿಕೊಂಡು ಮನುಷ್ಯ ತನ್ನ ಜೀವನದಲ್ಲಿ ದೊಡ್ಡ ವ್ಯಕ್ತಿಯಾಗಲು ಸಾದ್ಯವಾಗುತ್ತದೆ.  ಸೋತವರು ಇದು ತಮ್ಮ ಜೀವನದ ಸೋಲಲ್ಲ ಎಂದು ಬಾವಿಸಿ ಭವಿಷ್ಯದಲ್ಲಿ ಉನ್ನತಿಯನ್ನು ಪಡೆಯಿರಿ ಎಂದು ಭಾರತ ತಂಡದ  ಮಾಜಿ ಬಾಸ್ಕೆಟ್‌ ಬಾಲ್‌ ಆಟಗಾರ್ತಿ ಆಶಾ ಆರ್‌. ಹೆಗ್ಡೆ ನುಡಿದರು.

Advertisement

ಜ. 14 ರಂದು ಐರೋಲಿಯ ಸೆಕ್ಟರ್‌ 15 ರ ಎನ್‌ಎಂಎಂಸಿ ಮೈದಾ ನದಲ್ಲಿ ನಡೆದ  ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ವಾರ್ಷಿಕ ಕ್ರೀಡೋತ್ಸವದ ಸಮಾರೋಪ   ಸಮಾ ರಂ ಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಣೆಗೈದು ಮಾತನಾಡಿದ ಇವರು, ಇಂತಹ ಕ್ರೀಡೋತ್ಸವಗಳಿಂದ ಯುವ ಪ್ರತಿಭೆಗಳು ಬೆಳಕಿಗೆ ಬರಲು ಅನುಕೂ ಲವಾಗುತ್ತದೆ ಎಂದು ನುಡಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿಜಯ್‌ ಬಿ. ಹೆಗ್ಡೆ ಅವರು ಮಾತನಾಡಿ, ಸಂಸ್ಥೆಯ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸದಸ್ಯರು ತುಂಬು ಹೃದಯದ ಸಹಕಾರ ನೀಡುತ್ತಿದ್ದಾರೆ. ಹಾಗಾಗಿ ಕಾರ್ಯಕರ್ತರು ಬಹಳ ಉತ್ತಮ ರೀತಿಯಲ್ಲಿ ದುಡಿದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದಾರೆ ಭಾಗಿಯಾಗಿದ್ದಾರೆ ಎಂದು ಹೇಳಿದರು.

ನವಿ ಮುಂಬಯಿ ಹೋಟೆಲ್‌ ಓನರ್ಸ್‌ ಅಸೋಸಿಯೆಷನ್‌ ಇದರ ಉಪಾಧ್ಯಕ್ಷ, ಉದ್ಯಮಿ ಜಯಪ್ರಕಾಶ್‌ ಶೆಟ್ಟಿ ಅವರು ಮಾತನಾಡಿ, ಹೆಗ್ಗಡೆ ಸೇವಾ ಸಂಘ ಇದರ ಕಾರ್ಯಕರ್ತರು ಬಹಳ ಉತ್ತಮವಾದ ಕಾರ್ಯ ಕ್ರಮಗಳನ್ನು ಪ್ರತಿ ವರ್ಷ ಮಾಡುತ್ತಿದ್ದು, ಇತರ  ಸಂಸ್ಥೆಗಳಿಗೆ ಮಾದರಿ ಸಂಸ್ಥೆಯಾಗಿದೆ.  ಅವರ ಪ್ರತಿ ಕಾರ್ಯಕ್ರಮಕ್ಕೆ ಹೊಟೇಲ್‌ ಉದ್ಯ ಮಿಗಳ ತುಂಬು ಸಹಕಾರ ಸದಾಯಿದೆ ಎಂದು ಹೇಳಿದರು.ಗೌರವ ಕಾರ್ಯ ದರ್ಶಿ ಶಂಕರ್‌ ಹೆಗ್ಡೆ ಅವರು ಮಾತನಾಡಿ, ನಮ್ಮ ಪ್ರತಿಯೊಂದು ಕಾರ್ಯಕ್ರಮಕ್ಕೂ ನೀವೆಲ್ಲಾ  ಇಂತಹ ಸಹಕಾರ ನೀಡಿದರೆ ನಮಗೂ ಇನ್ನೂ ಉತ್ತಮವಾದ ಕೆಲಸಗಳನ್ನು ಸದಸ್ಯರಿಗಾಗಿ ಮಾಡಲು ಉತ್ಸಾಹ ಹೆಚ್ಚುತ್ತದೆ ಎಂದರು. 

 ಕ್ರೀಡಾಕೂಟದ ಕಾರ್ಯಾಧ್ಯಕ್ಷ ಶಶಿಧರ ಹೆಗ್ಡೆ ಅವರು ಮಾತನಾಡಿ, ಇಂದಿನ ಆಟೋಟ ಸ್ಪರ್ಧೆಯಲ್ಲಿ ಎಲ್ಲರೂ ಉತ್ತಮವಾದ ಪ್ರದರ್ಶನವನ್ನು ನೀಡಿದ್ದಾರೆ.  ಸೋಲು- ಗೆಲುವು ಇದ್ದದ್ದೇ.  ಅದರಲ್ಲಿ ಬೇಸರಮಾಡದೆ ಇನ್ನು ಮುಂ ದೆಯೂ ಉತ್ತಮ ರೀತಿಯಲ್ಲಿ ಸಹಕರಿಸಬೇಕು ಎಂದು  ಹೇಳಿ ದರು. ವೇದಿಕೆಯಲ್ಲಿ  ಕೋಶಾ ಧಿಕಾರಿ ರಮೇಶ್‌ ಹೆಗ್ಡೆ, ಉಪಾಧ್ಯಕ್ಷ  ಸುರೇಶ್‌ ಹೆಗ್ಡೆ,   ಗೌರವ  ಕಾರ್ಯಾಧ್ಯಕ್ಷ  ಸಂಜೀವ ಹೆಗ್ಡೆ ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಟ್ರೋಪಿ ಹಾಗೂ ಪದಕಗಳನ್ನು ವಿತರಿಸಿ ಶುಭಹಾರೈಸಿದರು. ಮಕ್ಕಳ ಹಾಗೂ ಸದಸ್ಯರ ವಯೋಮಿತಿಗೆ ಅನುಗುಣವಾಗಿ ಹಮ್ಮಿಕೊಂಡಿರುವ ವಿವಿಧ ಕ್ರೀಡೆಗಳಲ್ಲಿ ಸಮಾಜ ಭಾಂದವರು, ಮಕ್ಕಳು  ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡೋತ್ಸವಕ್ಕೆ ಮೆರುಗು ನೀಡಿದರು.  ಕ್ರೀಡಾ ಸ್ಪರ್ಧೆಯನ್ನು ಯುವ ವಿಬಾಗದ ಸದಸ್ಯರು ಹಾಗೂ ಸಮಿತಿ ಯ ಸದಸ್ಯರು ಮಹಿಳೆಯರು ನೆರವೇರಿಸಿಕೊಟ್ಟರು.  ಸಂಘದ ಹಿರಿಯ ಸದಸ್ಯರು, ತುಳು ಕೂಟ ಐರೊಲಿ ಇದರ ಸದಸ್ಯರು, ರಶ್ಮಿ ಕ್ಯಾಟರರ್ಸ್‌ ಇದರ ಸಿಬಂದಿ ವರ್ಗ, ಹೇಮಂತ್‌ ಸುತಾರ್‌  ಮತ್ತು ಬಳಗ,  ಉಪಸ್ಥಿತರಿದ್ದು ಸಹಕರಿಸಿದರು.

Advertisement

ಸ್ಪರ್ದಾಳುಗಳಿಗೆ ಸಮವಸ್ತ್ರ ಟಿ ಶರ್ಟ್‌ ಇದರ ವ್ಯವಸ್ಥೆಯನ್ನು ಸದಾಶಿವ ಹೆಗ್ಡೆ ಐರೋಲಿ ಇವರ ನೆರವಿನಿಂದ ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಉಚಿತವಾಗಿ ಪ್ರಾಯೋಜಿಸಿತ್ತು. ಮಕ್ಕಳ ಸಮವಸ್ತ್ರವನ್ನು ಕೌಸಲ್ಯಾ ಹೆಗ್ಡೆ ಹಾಗೂ ತಂಪುಪಾನೀಯ ಜಯಕರ ಹೆಗ್ಡೆ ಡೊಂಬಿವಲಿ ಇವರು ಪ್ರಾಯೋಜಿಸಿದರು,  ಸಮಾರೋಪ ಸಮಾರಂಭವನ್ನು  ರವಿ ಹೆಗ್ಡೆ ಹೆರ್ಮು ಂಡೆ ನಡೆಸಿಕೊಟ್ಟರು. ಸಂಘದ ಆಡಳಿತ ಮಂಡಳಿ, ಯುವ ವಿಭಾಗ, ಮಹಿಳಾ ವಿಭಾಗದ ಸದಸ್ಯರು ಸಹಕರಿಸಿದರು. ಊಟ, ಚಾಹ-ತಿಂಡಿಯ ವ್ಯವ ಸ್ಥೆಯನ್ನು ರಶ್ಮಿ ಕ್ಯಾಟರರ್ಸ್‌ನ  ಜಗದೀಶ್‌ ಶೆಟ್ಟಿ ಮೂಲ್ಕಿ ಅವರು ಆಯೋಜಿಸಿದ್ದರು. 

ಲಯನ್‌ ಕೃಷ್ಣಯ್ಯ ಹೆಗ್ಡೆ ವಿರಾರ್‌ ಇವರ ಪ್ರಾಯೋಜಕತ್ವದಲ್ಲಿ ನಡೆದ ದಿ| ಇಸರಮಾರು ಅಚ್ಚಣ್ಣ ಹೆಗ್ಡೆ ಅಡಂದಾಲು  ಸ್ಮರಣಾರ್ಥ ಕ್ರಿಕೆಟ್‌ ಪಂದ್ಯಾವಳಿಯಲ್ಲಿ   ಫೋರ್ಟ್‌ ಇಲೆವೆನ್‌ ತಂಡ ಥಾಣೆಯ ಫ್ರೆಂಡ್ಸ್‌ ತಂಡವನ್ನು ಬಗ್ಗುಬಡಿದು ಟ್ರೋಫಿ ಮತ್ತು ಗೌರವ  ಧನವನ್ನು ತನ್ನದಾಗಿಸಿಕೊಂಡಿತು.  ದಿ| ಅಡಂದಾಲು ಚೆನ್ನಕ್ಕ ಹೆಗ್ಗಡ್ತಿ ಸ್ಮರಣಾರ್ಥ ಜರಗಿದ ತ್ರೋಬಾಲ್‌ ಪಂದ್ಯದಲ್ಲಿ ಸುಜಯಾ ಶಂಕರ್‌ ಹೆಗ್ಡೆ ತಂಡ ಜಯಗಳಿಸಿ ಭಾರತಿ ಎಂ. ಹೆಗ್ಡೆ ತಂಡ  ರನ್ನರ್‌ ಆಫ್‌ ಪ್ರಶಸ್ತಿಯನ್ನು ಪಡೆದುಕೊಂಡಿತು.  ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯದಲ್ಲಿ ಹರ್ಷಲಾ ಹೆಗ್ಡೆ ತಂಡ ಪ್ರಥಮ,  ಪುಷ್ಪಾ ವಿಶ್ವನಾಥ್‌ ಹೆಗ್ಡೆ ತಂಡ ದ್ವಿತೀಯ, ಪುರುಷರ ಹಗ್ಗ ಜಗ್ಗಾಟದಲ್ಲಿ ಗೋಪಾಲ್‌ ಹೆಗ್ಡೆ ನೇತೃತ್ವದ ಡೊಂಬಿವಲಿ ಇಲೆವೆನ್‌ ತಂಡ  ಪ್ರಥಮ ಹಾಗೂ ಫೋರ್ಟ್‌ ಇಲೆವೆನ್‌ ತಂಡ  ದ್ವಿತೀಯ ಪ್ರಶಸ್ತಿ ಯನ್ನು ಪಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next