Advertisement

Manipal: ರಾಜಸ್ಥಾನದ ಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮ

10:09 AM Aug 22, 2024 | Team Udayavani |

ಮಣಿಪಾಲ: ಹೆಬ್ಬಾರ್ ಗ್ಯಾಲರಿ ಮತ್ತು ಆರ್ಟ್ಸ್ ಸೆಂಟರ್ (ಎಚ್‌ಜಿಎಸಿ) ಜೋಧಪುರದ ಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದು ಅದರಂತೆ ಆಗಸ್ಟ್ 23ರ (ಶುಕ್ರವಾರ) ಸಂಜೆ 6 ಗಂಟೆಗೆ ಮಣಿಪಾಲ ಸೆಂಟರ್ ಫಾರ್ ಹ್ಯುಮಾನಿಟೀಸ್‌ ಕಟ್ಟಡದಲ್ಲಿರುವ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಲಿದೆ.

Advertisement

ಈ ಸಂಗೀತ ಕಾರ್ಯಕ್ರಮದಲ್ಲಿ ಸಿಂಧಿ ಸಾರಂಗಿ, ಧೋಲಕ್, ಮೋರ್ಚಾಂಗ್ ಮತ್ತು ಖರ್ತಾಲ್ ಸೇರಿದಂತೆ ರಾಜಸ್ಥಾನ ಮತ್ತು ಉತ್ತರಪ್ರದೇಶದ ನಾಲ್ಕು ಸಂಗೀತ ಪರಿಕರಗಳನ್ನು ಬಳಸಿ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.

ಉಚಿತ ಪ್ರವೇಶ ಮೊದಲು ಬಂದವರಿಗೆ ಆಧ್ಯತೆ:
ಈ ಸಂಗೀತ ಕಾರ್ಯಕ್ರಮ ಉಚಿತವಾಗಿದ್ದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.