Advertisement

ಕುಂದಾಪುರದಲ್ಲಿ ಭಾರೀ ಗಾಳಿ-ಮಳೆ; ಹಾನಿ

12:07 PM May 31, 2017 | Team Udayavani |

ಕುಂದಾಪುರ: ಕುಂದಾಪುರದ ಪರಿಸರದಲ್ಲಿ ಮಂಗಳವಾರ ಸಂಜೆ ಭಾರೀ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಕೆಲವಡೆ ಮರಗಳು ಉರುಳಿವೆ. ನಗರದ ಹೊರ ವಲಯದ ಸಂಗಮ ಪರಿಸದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಬೃಹತ್‌ ಮರವೊಂದು ಉರುಳಿ ಸುಮಾರು 6 ಲಕ್ಷ ರೂ. ಹಾನಿ ಸಂಭವಿಸಿದೆ. 

Advertisement

ಸಂಜೆ ಶಾಲೆ ಬಿಟ್ಟು ಹತ್ತು ನಿಮಿಷಗಳ ಅನಂತರ ಮರ ಉರುಳಿದ್ದರಿಂದ ಸಂಭಾವ್ಯ ಭಾರೀ ದುರಂತ ತಪ್ಪಿದೆ. ಸ್ಥಳಕ್ಕೆ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷರು, ಸ್ಥಳೀಯ ಸಂಗಮ್‌ ಫ್ರೆಂಡ್ಸ್‌ ಸದಸ್ಯರು ಭೇಟಿ ನೀಡಿದರು. ಮರದ ತೆರವು ಕಾರ್ಯ ಬುಧವಾರ ನಡೆಸಲಾಗುತ್ತದೆ.

ಬಸೂÅರು ಗ್ರಾಮದ ಮಾರ್ಗೋಳಿ ಕಿಶನ್‌ ಎಂಟರ್‌ಪ್ರೈಸಸ್‌ನಲ್ಲಿ ಸಂಜೆ ಬೀಸಿದ ಗಾಳಿಗೆ ಮಾಡಿನ ತಗಡು ಹಾಗೂ ಟ್ರಸ್‌ ಹಾರಿಹೋಗಿ 2 ಲ.ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ.ದೋಣಿ, ಬಲೆ ನೀರುಪಾಲುಭಾರೀ ಗಾಳಿಯಿಂದಾಗಿ ಪಂಚ ಗಂಗಾವಳಿ ತೀರದಲ್ಲಿ ಲಂಗರು ಹಾಕಿದ್ದ ಅನೇಕ ಪಾತಿ ದೋಣಿಗಳು ನದಿಯಲ್ಲಿ ತೇಲಿಹೋದವು. ತಟದಲ್ಲಿದ್ದ ದೋಣಿಗಳಲ್ಲಿ ಇರಿಸಿದ್ದ ಬಲೆಗಳು ನೀರುಪಾಲಾದರೂ ತತ್‌ಕ್ಷಣ ಜಾಗೃತರಾದ ಮೀನುಗಾರರು ಅವುಗಳನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾದರು.

ಖಾರ್ವಿಕೇರಿ ಪರಿಸರದಲ್ಲಿ ಚಂದ್ರ ಖಾರ್ವಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ರಂಗ ಖಾರ್ವಿ ಅವರ ಮನೆಯ ಹೆಂಚುಗಳು ಹಾರಿಹೋಗಿವೆ.

Advertisement

Udayavani is now on Telegram. Click here to join our channel and stay updated with the latest news.

Next