Advertisement
ರಾಜಾರಾಮ ಪ್ರಭು ಅವರ ಒಡೆತನದ ಕುಮಾಧಾರಾ ನದಿ ತಟದಲ್ಲಿರುವ ಅಶ್ವಿನಿ ಫಾರ್ಮ್ ಭಾಗದಲ್ಲಿ ಹಠಾತ್ತನೆ ಗಾಳಿ ಬೀಸಿದ್ದು, ಫಲಭರಿತ ನೂರಾರು ಅಡಿಕೆ ಗಿಡಗಳು ಧರೆಗೆ ಉರುಳಿವೆ. ಗಾಳಿ ಆರ್ಭಟಕ್ಕೆ ಏಳು ತೆಂಗಿನ ಮರಗಳು ಮುರಿದು ಬಿದ್ದಿವೆ. ಇತರ ಗಿಡ-ಮರಗಳೂ ಮುರಿದಿದ್ದು ಗಾಳಿಯ ತೀವ್ರತೆಯನ್ನು ಸಾರಿ ಹೇಳುತ್ತಿತ್ತು. ಅಕ್ಕಪಕ್ಕದ ತೋಟಗಳಲ್ಲಿ ಗಾಳಿಯ ಹಾವಳಿ ಇಲ್ಲದಿರುವುದು ಸ್ಥಳೀಯರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಎಂಟು ವರ್ಷಗಳ ಹಿಂದೆಯೂ ಈ ರೀತಿ ಗಾಳಿ ಬೀಸಿ, 400 ಅಡಿಕೆ ಗಿಡಗಳು ನಾಶವಾಗಿದ್ದವು ಎಂದು ರಾಜಾರಾಮ ಪ್ರಭು ನೆನಪಿಸಿಕೊಂಡಿದ್ದಾರೆ.ರವಿವಾರ ಬೀಸಿದ ಗಾಳಿಯಿಂದಾಗಿ ಲಕ್ಷಾಂತಾರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. Advertisement
ಇಡ್ಯಾಡಿಯಲ್ಲಿ ಭಾರೀ ಗಾಳಿ: ವ್ಯಾಪಕ ಕೃಷಿ ಹಾನಿ
02:22 PM Sep 09, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.