Advertisement

ಗಾಳಿ ಮಳೆ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ

08:54 AM Aug 10, 2022 | |

ಮೂಡಿಗೆರೆ : ಮಲೆನಾಡಿನಾಡಿನಲ್ಲಿ ಗಾಳಿ ಮಳೆಯ ಅಬ್ಬರ ಜೋರಾಗಿರುವ ಪರಿಣಾಮ ಮೂಡಿಗೆರೆ ಕಳಸ ತಾಲೂಕಿನ ಶಾಲೆಗಳಿಗೆ ರಜೆ ಬುಧವಾರ ರಜೆ ಘೋಷಿಸಿ ಬಿಇಓ ಆದೇಶ ಹೊರಡಿಸಿದ್ದಾರೆ.

Advertisement

ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ವರುಣನ ಆರ್ಭಟ ಜೋರಾಗಿದೆ ಅಲ್ಲದೆ ಹಲವು ಕಡೆ ಗುಡ್ಡ ಕುಸಿತ, ಮನೆಗಳ ಮೇಲೆ ಮರ ಬಿದ್ದು ಸಾವು ನೋವು ಸಂಭವಿಸಿದೆ.

ಮಂಗಳವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಭಾರಿ ಪ್ರಮಾಣದಲ್ಲಿ ಗಾಳಿ ಬೀಸುತ್ತಿದ್ದು ಶಾಲಾ ಮಕ್ಕಳಿಗೆ ರಜೆ ನೀಡುವಂತೆ ಸ್ಥಳೀಯರಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬುಧವಾರ 1ರಿಂದ 10ನೇ ತರಗತಿಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅದರಂತೆ ಇಂದಿನ ಪರಿಸ್ಥಿತಿ ನೋಡಿಕೊಂಡು ನಾಳೆ ರಜೆ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ : ಫಾಝಿಲ್‌ ಹತ್ಯೆ ಆರೋಪಿಗಳನ್ನು ನಿಯಮ ಮೀರಿ ನಡೆಸಿಕೊಂಡಿಲ್ಲ : ಆಯುಕ್ತರ ಸ್ಪಷ್ಟನೆ

Advertisement

Udayavani is now on Telegram. Click here to join our channel and stay updated with the latest news.

Next