ಕೇರಳ/ಮಧ್ಯಪ್ರದೇಶ: ಇಂದು ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮೂನ್ಸುಚನೆ ನೀಡಿರುವುದರಿಂದ ಮುಂಜಾಗೃತ ಕ್ರಮವಾಗಿ ಹಲವು ರೈಲು ಸೇವೆಗಳನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ.
ಹಲವು ಕಡೆ ಭೂಕುಸಿತ ಮತ್ತು ಗುಡ್ಡ ಕುಸಿತ ಉಂಟಾಗುವ ಅಪಾಯ ಇರುವುದರಿಂದ ರೈಲ್ವೇ ಇಲಾಖೆ ಈ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದೆ.
ದಕ್ಷಿಣ ರೈಲ್ವೇ ವಿಭಾಗದ ಡ್ಯೂರಾಂಟೊ ಎಕ್ಸ್ ಪ್ರೆಸ್ , ಟೆನ್ ಎಕ್ಸ್ ಪ್ರೆಸ್, ಟಿವಿಸಿ ನೇತ್ರಾವತಿ ಎಕ್ಸ್ ಪ್ರೆಸ್. ಈಆರ್ ಎಸ್ ಎಕ್ಸ್ ಪ್ರೆಸ್, ಪುಣೆ ಎಕ್ಸ್ ಪ್ರೆಸ್, ಲೊಕಮಾನ್ಯ ತಿಲಕ್ ಟರ್ಮಿನಸ್, ಮೊದಲಾದ ರೈಲು ಸೇವೆಯನ್ನು ಮುಂದಿನ ಐದು ದಿನಗಳ ಕಾಲ ರದ್ದು ಗೊಳಿಸುವ ಸಾಧ್ಯತೆಯಿದೆ.
ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಖಾಂಡ, ಮಹಾರಾಷ್ಟ್ರ ಮತ್ತು ಗೋವಾ, ವಿಧರ್ಭ, ಛತ್ತೀಸ್ಗಡ , ಒಡಿಶಾ, ಅಂಡಮಾನ್ ಮತ್ತು ನಿಕೋಬಾರ್, ತೆಲಂಗಾಣ , ಕರಾವಳಿ ಕರ್ನಾಟಕ, ಲಕ್ಷದ್ವೀಪ, ತಮಿಳುನಾಡು, ಕೇರಳ, ಮಾಹೆ ಯಲ್ಲೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಶನಿವಾರ ಮಧ್ಯಪ್ರದೇಶದ ರಾಜಧಾನಿ ಭೂಪಾಲ್ ನಲ್ಲಿ ಸುರಿದ ಮಳೆಯ ರಭಸಕ್ಕೆ ರಸ್ತೆಯ ಇಕ್ಕೆಲಗಳಲ್ಲೂ ನೀರು ಹರಿಯುತ್ತಿದ್ದು , ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಿಗೂ ನೀರು ನುಗ್ಗಿದ ಪರಿಣಾಮ ಪಾದಚಾರಿಗಳು, ಪ್ರಯಾಣಿಕರು ಸಂಕಷ್ಟಕ್ಕಿಡಾಗಿದ್ದು ಹಲವು ಪ್ರದೇಶಗಳು ಜಲಾವೃತಗೊಂಡಿವೆ.