Advertisement
ಈ ಮಧ್ಯೆ, ಆಗುಂಬೆ ಘಾಟಿಯ 7ನೇ ತಿರುವಿನಲ್ಲಿ ಭೂಕುಸಿತ ಉಂಟಾದ ಕಾರಣ ಶುಕ್ರವಾರವೂ ವಾಹನ ಸಂಚಾರ ನಿಷೇಧಿಸಲಾಗಿತ್ತು.
ಮೃತಪಟ್ಟಿದ್ದಾರೆ. ಮನೆ ಸಮೀಪದಲ್ಲಿರುವ ಜಟ್ಟಿಗೇಶ್ವರ ದೈವಸ್ಥಾನದಿಂದ ಕಾಲುದಾರಿಯಲ್ಲಿ ಮರಳುತ್ತಿದ್ದಾಗ ಆವರಣದ ಗೋಡೆ ಕುಸಿದು ಬಿತ್ತು. ಕೆಂಪು ಕಲ್ಲುಗಳ ಅಡಿ ಸಿಲುಕಿದ್ದ ಧನ್ಯಾ ಮೇಲೆ ಮಳೆ ನೀರು ಹರಿದ ಕಾರಣ ಉಸಿರುಕಟ್ಟಿ ಮೃತಪಟ್ಟಿದ್ದಾರೆ.
Related Articles
Advertisement
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆಯೂ ಸಾಧಾರಣ ಮಳೆಯಾಗಿದೆ. ಈ ಮಧ್ಯೆ, ಶೃಂಗೇರಿ ತಾಲೂಕು ನೆಮ್ಮಾರ್‌ನಲ್ಲಿ ಕಾಣೆಯಾಗಿದ್ದ ವ್ಯಕ್ತಿಯನ್ನು ಹುಡುಕಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದವರು ಆಗಮಿಸಿದ್ದು,ಶುಕ್ರವಾರ ಇಡೀ ದಿನ ಕಾರ್ಯಾಚರಣೆ ನಡೆಸಿದರು.ಆದರೆ, ಮೃತದೇಹ ಪತ್ತೆಯಾಗಲಿಲ್ಲ. ಗುರುವಾರ ಸಂಜೆ ಜಮೀನಿಗೆ ಹೋಗಿದ್ದ ನೆಮ್ಮಾರ್ ಗ್ರಾಮದ ಉಮೇಶ್ ನಾಪತ್ತೆಯಾಗಿದ್ದು, ತುಂಗಾ ನದಿಯಲ್ಲಿ ಕೊಚ್ಚಿ ಹೋಗಿರಬಹುದು ಎಂಬ ಶಂಕೆ ಮೂಡಿದೆ. ಆಗುಂಬೆ ಘಾಟಿಯ 7ನೇ ತಿರುವಿನಲ್ಲಿ ಉಂಟಾದ ಭೂಕುಸಿತದ ಪರಿಣಾಮ ಶುಕ್ರವಾರವೂ ಘನ ವಾಹನ ಹಾಗೂ ಬಸ್ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿತ್ತು. ತೀರ್ಥಹಳ್ಳಿ ಮಾರ್ಗವಾಗಿ ಉಡುಪಿ, ಮಂಗಳೂರಿಗೆ ತೆರಳುವ ಮಿನಿಬಸ್ ಸಂಚಾರ ನಿಷೇಧಿಸಲಾಗಿದೆ. ದುರಸ್ತಿ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಶನಿವಾರದಿಂದ ಬಸ್ ಸಂಚಾರಕ್ಕೆ
ಅವಕಾಶ ನೀಡಲಾಗುತ್ತದೆ. ಆದರೆ, ಇತರ ಘನ ವಾಹನಗಳಿಗೆ ಸಂಚಾರ ನಿರ್ಬಂಧವಿರಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಲವೆಡೆಯೂ ಮಳೆಯಾಗುತ್ತಿದ್ದು, ಹೊನ್ನಾವರ ತಾಲೂಕಿನ ಗುಂಡಬಾಳ ಹೊಳೆ ತುಂಬಿ ಹರಿಯುತ್ತಿದೆ. ಕಾರವಾರ ದಿಂದ ಭಟ್ಕಳ ಕಡಲತೀರದಲ್ಲಿ ಭಾರೀ ಗಾತ್ರದ ಅಲೆಗಳು ಏಳುತ್ತಿದ್ದು, ಸಾಂಪ್ರದಾಯಿಕ ಮೀನು ಗಾರರು ಕಡಲದಂಡೆ ಮೀನುಗಾರಿಕೆಗೆ ಇಳಿದಿಲ್ಲ. ಹಾಸನ ಜಿಲ್ಲೆಯ ಹಲವೆಡೆಯೂ ಮಳೆಯಾಗುತ್ತಿದ್ದು,
ಹೇಮಾವತಿ ಜಲಾಯಶಕ್ಕೆ ಒಳ ಹರಿವು ಮತ್ತೆ ಹೆಚ್ಚಾಗಿದೆ. ಶುಕ್ರವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 2907 ಅಡಿಗಳಿಗೆ ಏರಿದ್ದು, ಜಲಾಶಯ ಭರ್ತಿಯಾಗಲು ಇನ್ನು 16 ಅಡಿಗಳಷ್ಟೇ ಬಾಕಿ ಇದೆ. ಜಲಾಶಯಕ್ಕೆ ಶುಕ್ರವಾರ ಒಂದೇ ದಿನ 2 ಅಡಿಗಳಷ್ಟು ನೀರು ಹರಿದು ಬಂದಿದೆ. ಈ ಮಧ್ಯೆ, ಇನ್ನೆರಡು ದಿನ ಕರಾವಳಿಯ ಬಹುತೇಕ ಎಲ್ಲೆಡೆ, ಒಳನಾಡಿನ ಕೆಲವೆಡೆ ಉತ್ತಮ ಮಳೆಯಾಗಲಿದೆ. ಕರಾವಳಿಯ ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.