Advertisement

ಗುಜರಾತ್‌, ತೆಲಂಗಾಣ,ಒಡಿಶಾದ ಹಲವು ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ ಭಾರೀ ಮಳೆ: ಐಎಂಡಿ

01:02 AM Jul 23, 2022 | Team Udayavani |

ಹೊಸದಿಲ್ಲಿ: ಗುಜರಾತ್‌, ತೆಲಂಗಾಣ, ಒಡಿಶಾದ ಹಲವು ಜಿಲ್ಲೆಗಳಲ್ಲಿ ಜು.22 ರಿಂದ ಜು.26ರವರೆಗೆ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಶುಕ್ರವಾರ ಎಚ್ಚರಿಸಿದೆ.

Advertisement

ಗುಜರಾತ್‌ನ ಕಚ್‌ ಜಿಲ್ಲೆಗೆ ಜು.25ಕ್ಕೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ದೇವಭೂಮಿ ದ್ವಾರಕ, ಜಾಮ್ನಗರ, ಮಹೇಸನ, ಮೊರ್ಬಿ, ಪಟಾಣ್‌, ಸಬರ್‌ ಕಾಂತಾ, ಸುರೇಂದ್ರನಗರ, ಅರವಳ್ಳಿ ಸೇರಿ ಅನೇಕ ಸ್ಥಳಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ತೆಲಂಗಾಣದ 15ಕ್ಕೂ ಹೆಚ್ಚು ಜಿಲ್ಲೆ ಗಳಿಗೆ ಜು.26ರವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಹಾಗೆಯೇ ಒಡಿಶಾದ ಕೆಲ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಮತ್ತು ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಫೋಷಿಸಲಾಗಿದೆ.

Advertisement

ಪಾಕ್‌ ಮಳೆಗೆ 282 ಸಾವು: ಪಾಕಿಸ್ಥಾನ ದಲ್ಲಿ ಗುರುವಾರ ಮತ್ತು ಶುಕ್ರವಾರ ಭಾರೀ ಪ್ರಮಾ ಣದಲ್ಲಿ ಮಳೆಯಾಗಿದೆ. ಸತತ 7 ತಾಸುಗಳ ಕಾಲ ಎಡೆಬಿಡದೆ ಮಳೆ ಸುರಿದಿದ್ದು, ಕಳೆದ 20 ವರ್ಷಗಳಲ್ಲೇ ಅತಿ ಹೆಚ್ಚು ಸುರಿದ ಮಳೆ ಎನ್ನುವ ದಾಖಲೆ ನಿರ್ಮಿಸಿದೆ. ಈ ಅವಧಿಯಲ್ಲಿ ಒಟ್ಟು 238ಮಿ.ಮೀ. ಮಳೆಯಾಗಿದೆ. ಜೂ.14 ರಿಂದೀಚೆಗೆ ದೇಶದಲ್ಲಿ ಕನಿಷ್ಠ 282 ಮಂದಿ ಮಳೆ ಸಂಬಂಧಿತ ಅನಾಹುತಗಳಿಗೆ ಸಾವನ್ನಪ್ಪಿದ್ದರೆ, 211 ಮಂದಿ ಗಾಯಾಳುಗ ಳಾಗಿದ್ದಾರೆ ಎಂದು ಪಾಕ್‌ ಆಡಳಿತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next