Advertisement

ಭಾರಿ ಮಳೆಗೆ ಮುಳುಗಿದ ಮುಂಬೈ ಮಹಾನಗರಿ

01:00 AM Aug 04, 2019 | mahesh |

ಮುಂಬೈ/ಠಾಣೆ: ಮಹಾರಾಷ್ಟ್ರ ರಾಜಧಾನಿ ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಧಾರಾಕಾರ ಮಳೆಯಾಗಿದೆ. ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಪ್ರಕಾರ, ಭಾನುವಾರ ಕೂಡ ಭಾರೀ ಮಳೆಯಾಗಲಿದೆ.

Advertisement

ಶನಿವಾರ ಮುಂಬೈನಾದ್ಯಂತ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು. ಠಾಣೆ ಮತ್ತು ಪಾಲ್ಗಾರ್‌ ಜಿಲ್ಲೆಗಳಲ್ಲಿಯೂ ಮಳೆಯಿಂದಾಗಿ ಜನ ಜೀವನಕ್ಕೆ ತೊಂದರೆ ಉಂಟಾಗಿದೆ. ನವಿ ಮುಂಬೈನಲ್ಲಿ ಪಾಂಡವಕಡಾ ಎಂಬಲ್ಲಿಗೆ ಹೋಗಿದ್ದ ಆರು ಮಂದಿ ವಿದ್ಯಾರ್ಥಿಗಳ ಪೈಕಿ ಇಬ್ಬರು ನೀರು ಪಾಲಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಠಾಣೆಯಲ್ಲಿ ವಿದ್ಯುದಾಘಾತದಿಂದ ವ್ಯಕ್ತಿ ಅಸುನೀಗಿದರೆ, ಮುಂಬ್ರಾ ಎಂಬಲ್ಲಿ ಬೇಕರಿಯ ಛಾವಣಿ ಕುಸಿದು ವ್ಯಕ್ತಿ ಗಾಯಗೊಂಡಿದ್ದಾನೆ. ಹವಾಮಾನ ಇಲಾಖೆ ಭಾರೀ ಮಳೆ ಮುನ್ಸೂಚನೆ ನೀಡಿದ್ದರಿಂದ ಬೃಹನ್ಮುಂಬೈ ಮಹಾನಗರ ಪಾಲಿಕೆಯು, ಮನೆಯಿಂದ ಹೊರಗೆ ಬರದಂತೆ ಮತ್ತು ಸಮುದ್ರ ತೀರಕ್ಕೆ ಹೋಗದಂತೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಿದೆ. ಜತೆಗೆ ಜಲಾವೃತಗೊಂಡ ಪ್ರದೇಶಗಳತ್ತ ತೆರಳಬಾರದು ಎಂದೂ ಹೇಳಿದೆ.

ಮುಳುಗಿದ ಪ್ರದೇಶಗಳು: ಶುಕ್ರವಾರ ರಾತ್ರಿಯಿಂದ ಈಚೆಗೆ ಮುಂಬೈ ಮತ್ತು ಅದರ ಉಪ ನಗರಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಸ್ತೆಗಳಿಗೆ ನೀರು ನುಗ್ಗಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕುರ್ಲಾ- ಸಿಯಾನ್‌ ನಡುವಿನ ಸ್ಥಳೀಯ ರೈಲು ಸಂಚಾರ ರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next