Advertisement
ಶನಿವಾರದ ಮುಂಜಾನೆಯಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೃತಕ ನೆರೆ ನಿರ್ಮಾಣವಾಗಿದ್ದು, ರಸ್ತೆಗಳಲ್ಲಿ ನಿಂತ ನೀರಿನಿಂದಾಗಿ ವಾಹನ ಸಂಚಾರರಿಗೆ ತೊಂದರೆ ಸಿಲುಕಿಕೊಂಡರು.ಇನ್ನೊಂದೆಡೆ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ನಾಟಿ ಸೇರಿದಂತೆ ಇತರೆ ಕೆಲಸಗಳು ಭರದಿಂದ ಸಾಗುತ್ತಿದೆ. ಜೂ.13ರ ಬೆಳಗ್ಗೆ 8.30ರ ಹಿಂದಿನ 24 ಗಂಟೆಯಲ್ಲಿ ಉಡುಪಿ 30.2 ಮಿ.ಮೀ , ಕಾರ್ಕಳ 58.3 ಮಿ.ಮೀ., ಬ್ರಹ್ಮಾವರ 51.1 ಮಿ.ಮೀ., ಕಾಪು 36.9 ಮಿ.ಮೀ., ಕುಂದಾಪುರ 36.2ಮಿ.ಮೀ., ಬೈಂದೂರು 56.1ಮಿ.ಮೀ., ಹೆಬ್ರಿ 46.7 ಮಿ.ಮೀ. ಮಳೆಯಾಗಿದ್ದು ಜಿಲ್ಲೆಯಾದ್ಯಂತ ಒಟ್ಟು 83.3 ಮಿ.ಮೀ. ಮಳೆಯಾಗಿದೆ.
ಶನಿವಾರ ನಿರಂತರವಾದ ಗಾಳಿ ಮಳೆಯಿಂದಾಗಿ ಜಿಲ್ಲೆಯಲ್ಲಿ 107 ವಿದ್ಯುತ್ ಕಂಬ, 23 ಟ್ರಾನ್ಸ್‌ಫಾರ್ಮರ್, ವಿದ್ಯುತ್ ತಂತಿಗಳು ನೆಲಕ್ಕೆ ಉರುಳಿದೆ. ಏಕಕಾಲದಲ್ಲಿ ವಿವಿಧೆಡೆಯಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯದಲ್ಲಿ ವಿಳಂಬವಾಗಿದ್ದು, ಇದರಿಂದಾಗಿ ವಿವಿಧ ತಾಲೂಕಿನಲ್ಲಿ ರವಿವಾರ ಮುಂಜಾನೆಯಿಂದ ವಿದ್ಯುತ್ ವ್ಯತ್ಯಯವಾಗಿದೆ. ನಗರದಲ್ಲಿ ಶನಿವಾರ ಅಲಂಕಾರ ಚಿತ್ರಮಂದಿರ ಹಿಂಭಾಗದ ರಸ್ತೆಯಲ್ಲಿ ಸೇರಿದಂತೆ ವಿವಿಧೆಡೆಯಲ್ಲಿ ವಿದ್ಯುತ್ ತಂತಿ ಹಾಗೂ ಕಂಬಗಳು ಗಾಳಿ ಮಳೆಗೆ ಧರೆಗುರುಳಿವೆ. ಇದರಿಂದಾಗಿ ಈ ಭಾಗದಲ್ಲಿ ರವಿವಾರ ಮುಂಜಾನೆಯವರೆಗೆ ವಿದ್ಯುತ್ ವ್ಯತ್ಯಯವಾಗಿದೆ. ಜಿಲ್ಲೆಯಲ್ಲಿ ಶನಿವಾರ ಸುರಿದ ಮಳೆಗೆ ಒಟ್ಟು 36 ಲ.ರೂ. ಮೆಸ್ಕಾಂಗೆ ಹಾನಿಯಾಗಿದೆ. ಗಾಳಿ ಮಳೆ – ಆಸ್ತಿ ಹಾನಿ
ನಿರಂತರವಾಗಿ ಸುರಿಯುವ ಮಳೆಯೊಂದಿಗೆ ಗಾಳಿಯು ಬೀಸುತ್ತಿರುವುದರಿಂದ ಜಿಲ್ಲೆಯಾದ್ಯಂತ ವಿವಿಧ ಕಡೆಯಲ್ಲಿ ಆಸ್ತಿ ಹಾನಿಯಾಗಿದೆ. ವಿವಿಧ ಪ್ರದೇಶವನ್ನು ಸಂಪರ್ಕಿಸುವ ರಸ್ತೆಯಲ್ಲಿ ಮರ ಬಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ರವಿವಾರ ಬೆಳಗ್ಗೆ ಮರದ ತೆರವು ಕಾರ್ಯ ಪ್ರಾರಮಬಗೊಂಡಿತು. ಒಳಕಾಡುವಿನ ಮನೆಯೊಂದರ ಮೇಲೆ ಮರ ಬಿದ್ದು ಹಾನಿಯಾಗಿದೆ. ಇದೇ ಪ್ರದೇಶದಲ್ಲಿ ವಿದ್ಯುತ್ ಕಂಬವೊಂದು ಬಿದ್ದು, ತಂತಿಗಳು ರಸ್ತೆಯೂದ್ದಕ್ಕೂ ಆವರಿಸಿಕೊಂಡಿದೆ. ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಈ ಪ್ರದೇಶದಲ್ಲಿ ವಿದ್ಯುತ್ ಉಂಟಾಗಿದೆ.
Related Articles
Advertisement
ತಗ್ಗು ಪ್ರದೇಶ ಜಲಾವೃತಬೇಸಗೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಇಂದ್ರಾಣಿಯ ಎರಡು ಬದಿಯನ್ನು ತಡೆಗೋಡಿ ನಿರ್ಮಿಸಲಾಗಿದೆ. ಇದರಿಂದಾಗಿ ಇಂದ್ರಾಣಿಯಲ್ಲಿ ಮಳೆಯ ನೀರು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಹರಿಯುತ್ತಿದೆ. ನಗರದ ತಗ್ಗು ಪ್ರದೇಶದಲ್ಲಿ ಕೃತಕ ನೆರೆಯುಂಟಾಗಿದೆ. ಗೆದ್ದೆಯಲ್ಲಿ ನೀರು ನಿಂತು ಕೊಂಡ ದೃಶ್ಯಗಳ ಗ್ರಾಮೀಣಭಾಗದಲ್ಲಿ ಕಂಡು ಬಂತು. ನದಿಗಳು ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟವನ್ನು ತುಂಬಿಲ್ಲ.