Advertisement
ಶಿರಾಡಿ-ಉದನೆ ಬಳಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತವಾಗಿದೆ. ಕೆಂಪುಹೊಳೆಯಲ್ಲಿ ನೀರಿನ ಪ್ರವಾಹ ಹೆಚ್ಚಾಗುತ್ತಿದ್ದು, ಉದನೆ ಪೇಟೆಯಲ್ಲಿ ಹೆದ್ದಾರಿಯ ಇಕ್ಕೆಲಗಳಲ್ಲಿ ನದಿ ನೀರು ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ಥವಾಗಿದೆ.
ಶಿಶಿಲದಲ್ಲಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಶಿಶಿಲ ದೇವಾಲಯವು ಅಕ್ಷರಶ ದ್ವೀಪವಾಗಿ ಪರಿಣಮಿಸಿದೆ. ದೇವಳಕ್ಕೆ ಹಾಗೂ ಆ ಭಾಗದ ಜನರಿಗೆ ಇರುವ ಒಂದು ಸಂಪರ್ಕ ರಸ್ತೆಯಲ್ಲೇ ರಭಸದಿಂದ ನೀರು ಉಕ್ಕಿ ಹರಿಯುತ್ತಿರುವುದರಿಂದ ಸಂಚಾರ ಕಷ್ಟ ಸಾಧ್ಯವಾಗಿದೆ. ತೂಗುಸೇತುವೆ ಇದ್ದರೂ ರಸ್ತೆಯೇ ಮುಳುಗಡೆಯಾದ ಹಿನ್ನೆಲೆಯಲ್ಲಿ ಸಂಪರ್ಕ ಬಂದ್ ಆಗಿದೆ. ಧರ್ಮಸ್ಥಳ: ಮುಳುಗಡೆಯಾದ ಸ್ನಾನಘಟ್ಟ
ಪವಿತ್ರ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಮುಳುಗಡೆಯಾಗಿದೆ. ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಧಾರಾಕಾರ ಮಳೆ ಬೀಳುತ್ತಿದ್ದು, ಮನೆ, ಕೃಷಿ ತೋಟಗಳು ಜಲಾವೃತವಾಗಿದೆ.
Related Articles
Advertisement