Advertisement

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

08:40 AM Oct 25, 2021 | Team Udayavani |

ಮೈಸೂರು: ಮಳೆಯ ಆರ್ಭಟಕ್ಕೆ ಮೈಸೂರು ನಲುಗಿದೆ. ನೀರು ನೋಡುತ್ತಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ಮೋರಿಯಲ್ಲಿ ಕೊಚ್ಚಿಹೋದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

Advertisement

ಸಿದ್ಧಾರ್ಥ ನಗರದ ವಿನಯ ಮಾರ್ಗದ ನಿವಾಸಿ ಎಂ.ಚಂದ್ರೇಗೌಡ (60 ವ) ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ.

ಇದನ್ನೂ ಓದಿ:ಪರಮ ಪಾವನೆಯಾಗುವತ್ತ ಗಂಗಾಮಾತೆ

ಮನೆ ಪಕ್ಕದ ಮೋರಿಯಲ್ಲಿ ನಿಂತು ನೀರು ವೀಕ್ಷಣೆ ಮಾಡುತ್ತಿದ್ದ ಚಂದ್ರೇಗೌಡ ಕಾಲು ಜಾರಿ ಮೋರಿಗೆ ಬಿದ್ದರು. ಕುಟುಂಬಸ್ಥರ ಕಣ್ಣೆದುರೇ ನೀರುಪಾಲದರು. ಈ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕುಟುಂಬಸ್ಥರು ಮಾಹಿತಿ ನೀಡಿದರು. ಸುರಿಯುತ್ತಿದ್ದ ಮಳೆಯಲ್ಲೂ ಸಿಬ್ಬಂದಿ ಕಾರ್ಯಚರಣೆಗೆ ಮುಂದಾದರೂ ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ ಸುಳಿವು ಸಿಕ್ಕಿಲ್ಲ.

ಮೈಸೂರಿನ ಕಾರಂಜಿ ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಯಲ್ಲಿ ದುರ್ಘಟನೆ ನಡೆದಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next