Advertisement

ಕುರುಗೋಡು, ಮಳೆ ಅವಾಂತರ: ಮೇವು ಇಲ್ಲದೆ ಗದ್ದೆ ಬಿಟ್ಟು ಬಾರದ ಮೇಕೆಗಳು

01:54 PM Nov 21, 2021 | Team Udayavani |

ಕುರುಗೋಡು: ನಿರಂತರ ಮಳೆಯಿಂದ ಆಗುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಮನುಷ್ಯರ ಪಾಡು ಕೇಳತೀರದ್ದಾಗಿದೆ. ಇನ್ನು ಮೂಕ ಪ್ರಾಣಿಗಳ ಅಳಲು ಕೇಳೋರ್ಯಾರು ಎಂಬಂತಾಗಿದೆ. ಸರಿಯಾದ ಮೇವು ಸಿಗದೆ ರೋಧಿಸುವುದು ಒಂದು ಕಡೆಯಾದರೆ, ಮಳೆಗೆ ಸಿಲುಕಿ ಅವುಗಳ ಗೋಳು ನೋಡ ತೀರಾದಾಗಿದೆ.

Advertisement

ಕುರುಗೋಡು ತಾಲೂಕಿನ ಸುತ್ತಮುತ್ತ ಗ್ರಾಮಗಳ ನಡುಗದ್ದೆಯಲ್ಲಿ ಮೇಕೆಗಳು ಮತ್ತು ಗೋವುಗಳು ಸಿಲುಕಿವೆ. ನೀರಿನ‌ ಪ್ರಮಾಣ ಹೆಚ್ಚಾದ ಹಿನ್ನೆಲೆ ಮೇಕೆಗಳು ನಡುಗದ್ದೆಯಿಂದ ಹೊರಗೆ ಬರಲು ಆಗುತ್ತಿಲ್ಲ. ಮೇವು ಸಿಗುತ್ತಿರುವುದು ಅಷ್ಟಕಷ್ಟೇ. ಈಗಾಗಲೇ ಮೆಳೆ ಚಳಿಗೆ ಕೆಲ ಮೇಕೆಗಳು ಸಾಯುವ ಪರಿಸ್ಥಿತಿಗೆ ಬಂದೋಗಿವೆ ಎನ್ನಲಾಗಿದೆ. ಮೇವು ಇಲ್ಲದೆ ಮೇಕೆಗಳು ಮತ್ತು ಗೋವುಗಳು ನಿತ್ರಾಣಗೊಂಡಿವೆ.

ಮಾಲೀಕರ ಬದುಕು ಅತಂತ್ರ

ಕುರುಗೋಡು, ಕಂಪ್ಲಿ, ಸಿರುಗುಪ್ಪ, ಸೇರಿದಂತೆ ನದಿ ಪಾತ್ರದ ಗ್ರಾಮಗಳಲ್ಲಿ ಈಗಾಗಲೇ ಹಲವು ರೈತರು ಬೆಳೆದ ಭತ್ತದ ಬೆಳೆಗಳು ಕಟಾವು ಮಾಡುತ್ತಿದ್ದು, ಇದರಿಂದ ಮೇಕೆಗಳಿಗೆ ಮತ್ತು ಗೋವುಗಳಿಗೆ ಉತ್ತಮ ಮೇವು ಸಿಗುತ್ತದೆ ಎಂದು ದೂರದ ರಾಯಭಾಗ, ಬೆಳಗಾವಿ, ಮಂಡ್ಯ, ಧಾರವಾಡ ಸೇರಿದಂತೆ ಇತರೆ ಜಿಲ್ಲೆಗಳಿಂದ ಕುರುಬರು ವಲಸೆ ಬಂದು ಗದ್ದೆಗಳಲ್ಲಿ ಮೇಕೆಗಳ ಜೊತೆಗೆ ಬದುಕು ಸಾಗಿಸುತಿದ್ದ ಇವರು, ಸದ್ಯ ಸುರಿಯುತ್ತಿರುವ ಮಳೆಯಿಂದ ಇವರಿಗೆ ಸರಿಯಾದ ವ್ಯವಸ್ಥೆ ಇಲ್ಲದೆ ಗಾಳಿ, ಮಳೆ, ಚಳಿ ಜೊತೆಗೆ ಬದುಕು ಸಾಗಿಸುವ ಅನಿವಾರ್ಯ ಪರಿಸ್ಥಿತಿ ಇವರದ್ದಾಗಿದೆ. ಮಳೆ ಬಂದರೆ ಇವರು ಬದುಕು ಹೇಳತಿರಾದಾಗಿದೆ.

ಇದನ್ನೂ ಓದಿ:ಕಾಫಿನಾಡಲ್ಲಿ ನಿಲ್ಲದ ಮಳೆ ಅಬ್ಬರ

Advertisement

25 ಮೇಕೆಗಳು ಸಾವು

ದಿನ ವಿಡಿ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತ ಗೊಂಡಿದ್ದಲ್ಲದೆ ಮೂಕ ಪ್ರಾಣಿಗಳ ಗೋಳು ತೀವ್ರ ಸಂಕಷ್ಟಕ್ಕೆ ಹಿಡಾಗಿದೆ. ಮಳೆ ಬಂದ ಹಿನ್ನಲೆ ಚಳಿಗೆ ರಾಯಭಾಗ ಮೂಲದ ಸಚ್ಚಿ ಹೊಡೆಯರ್ ಎಂಬ ಕುರುಬ ರೈತನ ಸುಮಾರು 25 ಕುರಿಗಳು ಸಾವನ್ನಪ್ಪಿವೆ. ಆದ್ದರಿಂದ ಕುರಿಗಾಹಿಗಳು ಇನ್ನುಳಿದ ಕುರಿಗಳನ್ನು ಉಳಿಸಿಕೊಳ್ಳಲು ಸುರಿಕ್ಷಿತ ಸ್ಥಳಕ್ಕೆ ಗಂಟು ಮೂಟೆ ಕಟ್ಟಿಕೊಂಡು ಊರು ಊರು ಅಲೆದಾಡುತ್ತಿದ್ದಾರೆ.

ಮಳೆಯಿಂದಾಗಿ ಸೃಷ್ಟಿಯಾಗಿರುವ ಅವಾಂತರ ಅಷ್ಟಿಷ್ಟಲ್ಲ. ಬೆಳೆ ಹಾನಿಯಾಗಿದೆ. ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಮನೆಯಿಂದ ಜನ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ. ಸದ್ಯಕ್ಕೆ ಮಳೆ ನಿಂತರೆ ಸಾಕು ಎಂಬ ಸ್ಥಿತಿಯಲ್ಲಿ ಜನರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next