ಕೊಪ್ಪಳ: ತಾಲೂಕಿನ ಹಿರೇ ಸಿಂದೋಗಿ, ಹಣವಾಳ, ಹಂದ್ರಾಳ ಗ್ರಾಮ ಸೇರಿದಂತೆ ವಿವಿಧ ಹೋಬಳಿಯಲ್ಲಿ ತಡ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯ ವಿವಿಧ ಹೋಬಳಿಯಲ್ಲಿ ಮಳೆ ಆರ್ಭಟಿಸುತ್ತಿವೆ. ಕೆಲವೆಡೆ ಮಳೆ ಹಾಗೂ ಗಾಳಿಗೆ ಬಾಳೆ, ಪಪ್ಪಾಯಿ ಸೇರಿದಂತೆ ತೋಟಗಾರಿಕೆ ಬೆಳೆಯು ಹಾನಿಗೀಡಾಗಿದೆ. ಇದರಿಂದ ರೈತರು ತುಂಬ ನಷ್ಟ ಅನುಭವಿಸಿದ್ದಾರೆ.
ಇದನ್ನೂ ಓದಿ:ಕೆಎಸ್ ಆರ್ ಟಿಸಿ ಬಸ್ ಚಲಾಯಿಸಿದ ಶಾಸಕ ಯು.ಟಿ.ಖಾದರ್
ಬುಧವಾರ ಸಂಜೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ರಾತ್ರಿ ಮಳೆ ಸುರಿಯಲಾರಂಭಿಸಿದೆ. ತಡ ರಾತ್ರಿ ಸುರಿದ ಮಳೆಯಿಂದ ಹಲವೆಡೆ ಹಳ್ಳಗಳು ಭರ್ತಿಯಾಗಿ ಹರಿದಿವೆ. ಕೆಲವು ಗಂಟೆ ಗ್ರಾಮೀಣ ಪ್ರದೇಶದಲ್ಲಿ ಸಂಚಾರಕ್ಕೆ ವ್ಯತ್ಯಯವಾಯಿತು.