Advertisement

ಕೊಡಗು: ಕಾವೇರಿ ಮಟ್ಟ ಹೆಚ್ಚಳ, ಅಲ್ಲಲ್ಲಿ ರಸ್ತೆ ಬಿರುಕು

12:05 PM Jul 07, 2019 | keerthan |

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗಿದೆ. ಮಡಿಕೇರಿಯ ವಿವಿಧೆಡೆ ಬರೆ ಕುಸಿತ ಮತ್ತು ರಸ್ತೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.

Advertisement

ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಜೀವನದಿ ಕಾವೇರಿ ನದಿ ಪಾತ್ರದಲ್ಲಿ ಹರ್ಷ ಮೂಡಿದೆ. ಹೆಚ್ಚೇನೂ ಗಾಳಿ ಇಲ್ಲದಿದ್ದರೂ ಕೆಲವೆಡೆಗಳಲ್ಲಿ ಮರಗಳು ಧರೆಗುರುಳಿರುವ ಘಟನೆಗಳು ನಡೆದಿವೆ. ನದಿ, ಕಿರುತೊರೆ, ಹೊಳೆಗಳಲ್ಲಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ಇಳಿಯುವ ಮೆಟ್ಟಿಲುಗಳು ಜಲಾವೃತವಾಗಿದ್ದು, ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದಲ್ಲಿ ಎರಡು- ಮೂರು ದಿನಗಳಲ್ಲಿ ಪ್ರವಾಹವೇರ್ಪಡುವ ಸಾಧ್ಯತೆಗಳಿದೆ. ಕಾವೇರಿ ನದಿ ಪಾತ್ರದ ಮೂರ್ನಾಡು ಬಲಮುರಿ, ಸಿದ್ದಾಪುರ, ಕುಶಾಲನಗರ ವಿಭಾಗಗಳಲ್ಲೂ ಉತ್ತಮ ಮಳೆಯಾಗುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿಯ ಅವಧಿಯಲ್ಲಿ ಭಾರೀ ಮಳೆೆಯಾಗಿದ್ದು, ಹಗಲಿನ ವೇಳೆ ಸಾಧಾರಣ ಮಳೆಯಾಗಿದೆ.

ರಸ್ತೆಯಲ್ಲಿ ಬಿರುಕು
ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಂಗಳೂರು ರಸ್ತೆಯಲ್ಲಿ ಕಾಣಿಸಿಕೊಂಡಂತೆಯೇ ಸೋಮವಾರಪೇಟೆ ರಸ್ತೆಯ ಅಂಚಿನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಜನ ಆತಂಕಗೊಂಡಿದ್ದಾರೆ. ಮುಂಜಾಗ್ರತೆಯಾಗಿ ಜಿಲ್ಲಾಡಳಿತ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ರಸ್ತೆಯ ಒಂದು ಭಾಗದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next