ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ, ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಸೋಮಂತಡ್ಕ, ನಿಡಿಗಲ್, ಕಾಯತೊìಡಿ, ಮೊದಲಾದ ಕಡೆಗಳಲ್ಲಿ ಸಂಜೆ ಅರ್ಧ ಗಂಟೆ ಮಳೆಯಾಯಿತು. ಮಂಗಳೂರು ನಗರದಲ್ಲಿ ಬೆಳಗ್ಗೆಯಿಂದ ಸೆಕೆ ಮತ್ತು ಬಿಸಿಲು ಮೋಡಕವಿದ ವಾತಾವರಣ ಇತ್ತು. ಉಡುಪಿ, ಕೋಟ, ಕಾರ್ಕಳದಲ್ಲಿ ಗುಡುಗು ಸಹಿತ ಲಘು ಮಳೆಯಾಗಿದೆ. ಕಾಪು, ಕುಂದಾಪುರದಲ್ಲಿ ಸಂಜೆಯ ವೇಳೆಗೆ ಗುಡುಗು ಮೋಡ ಕವಿದ ವಾತಾವರಣವಿತ್ತು.
Advertisement
ಮನೆಗಳಿಗೆ ನುಗ್ಗಿದ ನೀರುಪರ್ಕಳ ಶಾಲೆ ಬಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಮಳೆ ನೀರು ಹರಿದುಹೋಗಲು ಅವಕಾಶವಿಲ್ಲ ದ್ದರಿಂದ ಹಲವಾರು ಮನೆಗಳೊಳಗೆ ನೀರು ನುಗ್ಗಿ ನಿವಾಸಿಗಳೆಲ್ಲರೂ ತೊಂದರೆ ಅನುಭವಿಸಿದರು.
ಮಲ್ಪೆ ಸಮೀಪ ಸಮುದ್ರದಲ್ಲಿ ಶುಕ್ರವಾರ ಸಂಜೆ ಸುಂಟರಗಾಳಿ ಯಂತೆ ಬಲವಾದ ಗಾಳಿ ಬೀಸಿದೆ. ಸಂಜೆ 6 ಗಂಟೆಯ ವೇಳೆ ಮೋಡ ಕವಿದ ವಾತಾವರಣವಿದ್ದು ಈ ವೇಳೆ ಬಲವಾದ ಗಾಳಿ ಎದ್ದು ಅಲೆಗಳಲ್ಲಿ ತುಸು ವ್ಯತ್ಯಾಸ ಉಂಟಾಗಿತ್ತು. “ಯಲ್ಲೋ ಅಲರ್ಟ್’
ಬಂಗಾಲ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಮತ್ತು ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡದ ಪರಿಣಾಮ ಕರಾವಳಿಯಲ್ಲಿ ಎರಡು ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, “ಯಲ್ಲೋ ಅಲರ್ಟ್’ ಘೋಷಿಸಲಾಗಿದೆ.