Advertisement

ಕಲಬುರಗಿ ನಗರದಲ್ಲಿ ಬಿರುಸಿನ ಮಳೆ: ಹಾನಿ ಪ್ರದೇಶಕ್ಕೆ ಡಿ.ಸಿ. ಹಠಾತ್ ಭೇಟಿ

07:38 PM Aug 04, 2022 | Team Udayavani |

ಕಲಬುರಗಿ: ನಗರದಲ್ಲಿ ಗುರುವಾರ ಮಧ್ಯಾಹ್ನ ಬಿರುಸಿನ ಮಳೆಯಾದ ಕಾರಣ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಡಿ.ಸಿ. ಯಶವಂತ ವಿ. ಗುರುಕರ್ ಅವರು ನಗರದ ತಾರಪೈಲ್ ಪ್ರದೇಶಕ್ಕೆ ಹಠಾತ್ ಭೇಟಿ ನೀಡಿ ಹಾನಿ ಪ್ರದೇಶವನ್ನು ಪರಿಶೀಲಿಸಿದರು.

Advertisement

ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಸೇರಿದಂತೆ ಪಾಲಿಕೆ ವಲಯದ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮಳೆ ನೀರು ನುಗ್ಗಿರುವ ಮನೆಗಳನ್ನು ವೀಕ್ಷಿಸಿದರು.

ಪರಿಷ್ಕೃತ ಪರಿಹಾರ ಮಾರ್ಗಸೂಚಿಯಂತೆ ಮಳೆ ನೀರಿನಿಂದ ಬಟ್ಟೆ-ಪಾತ್ರೆ ಹಾನಿಯಾಗಿದ್ದನ್ನು ಸ್ಥಳ ಪರಿಶೀಲಿಸಿ, ಜಿಯೋ ಫೋಟೊ ಪಡೆದು ಎರಡು ದಿನದನಲ್ಲಿಯೇ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಯಶವಂತ ವಿ. ಗುರುಕರ್ ಸೂಚಿಸಿದರು.

ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತ ಆರ್.ಪಿ.ಜಾಧವ ಸೇರಿದಂತೆ ವಲಯದ ಆಯುಕ್ತರು, ಸಿಬಂದಿಗಳು ಈ ಸಂದರ್ಭದಲ್ಲಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next