ಹುಣಸೂರು: ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹನಗೋಡು ಹೋಬಳಿಯ ಭರತವಾಡಿಯಲ್ಲಿ ಮನೆ ಮೇಲ್ಚಾವಣಿ, ಗೋಡೆ ಕುಸಿದು ಬಿದ್ದಿದೆ.
ತಾಲೂಕಿನ ಹನಗೋಡು ಹೋಬಳಿಯ ಭರತವಾಡಿಯ ಆದಿವಾಸಿ ಕುಮಾರಿ ಎಂಬುವವರ ಮನೆ ಮೇಲ್ಚಾವಣಿ ಸಹಿತ ಗೋಡೆ ಕುಸಿದು ಬಿದ್ದಿದ್ದು, ಮೇಲ್ಛಾವಣಿ ಬೀಳುವ ವೇಳೆ ಜೋರು ಶಬ್ದ ಉಂಟಾಗಿದ್ದರಿಂದ ಮನೆ ಮಂದಿ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯಲ್ಲಿದ್ದ ದವಸ-ಧಾನ್ಯ, ಪಾತ್ರೆಗಳು ಮಣ್ಣಿನಡಿ ಸಿಲುಕಿ ಸಂಪೂರ್ಣ ಹಾಳಾಗಿದೆ.
ಇದನ್ನೂ ಓದಿ: ಸ್ವಿಗ್ಗಿ, ಝೊಮ್ಯಾಟೋದಲ್ಲಿ ಸಿಗಲಿದೆ ಬೀದಿಬದಿ ಆಹಾರ
ಸೂಕ್ತ ಪರಿಹಾರಕ್ಕೆ ಮನವಿ
Related Articles
ಮಳೆ ಹಾನಿಯಿಂದ ಮನೆ ಹಾನಿಗೊಳಗಾದ ಕುಟುಂಬಕ್ಕೆ ತಾಲೂಕು ಆಡಳಿತದ ವತಿಯಿಂದ ತಕ್ಷಣವೇ ಪರಿಹಾರ ಕೊಡಿಸಿ ಸಂಕಷ್ಟಕ್ಕೊಳಗಾದವರ ನೆರವಿಗೆ ಬರಬೇಕೆಂದು ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು. ಮನವಿ ಮಾಡಿದ್ದಾರೆ.