Advertisement

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

05:25 PM Oct 05, 2024 | Team Udayavani |

ದಾಂಡೇಲಿ : ನಗರದಲ್ಲಿ ವ್ಯಾಪಕವಾಗಿ ಮಳೆಯಾಗಿ ಪಟೇಲ್ ವೃತ್ತದ ಹತ್ತಿರ ಎರಡು ಅಂಗಡಿ ಸೇರಿದಂತೆ ಸ್ಥಳೀಯ ಮನೆಗಳಿಗೆ ನೀರು ನುಗ್ಗಿರುವ ಘಟನೆ ಇಂದು ಶನಿವಾರ(ಅ.05) ನಡೆದಿದೆ.

Advertisement

ನಗರದ ಪಟೇಲ್ ವೃತ್ತದ ಹತ್ತಿರ ಕಳೆದೆರಡು ತಿಂಗಳ ಹಿಂದೆ ಮುರಿದು ಬಿದ್ದಿದ್ದ ಬಿದಿರನ್ನು ತುಂಡರಿಸಿ ಅಲ್ಲಿ ರಾಶಿ ಹಾಕಿದ ಹಿನ್ನೆಲೆಯಲ್ಲಿ ಮಳೆಯ ನೀರು ಗಟಾರದಲ್ಲಿ ಸರಾಗವಾಗಿ ಹರಿಯದೆ ಇರುವುದರಿಂದ ಮಳೆಯ ನೀರು ಹಾಗು ತ್ಯಾಜ್ಯ ನೀರು ತುಂಬಿ ರಸ್ತೆ ಹಾಗೂ ಪಕ್ಕದಲ್ಲಿರುವ ಎರಡು ಅಂಗಡಿಗಳಿಗೆ ಮತ್ತು ಹತ್ತಿರದ ಮನೆಗಳಿಗೆ ನುಗ್ಗಿದೆ. ಅಂಗಡಿಗೆ ಮಳೆ ನೀರು ನುಗ್ಗಿರುವುದರಿಂದ ಅಂಗಡಿಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ.

ಗಟಾರದ ಮೇಲೆ ರಾಶಿ ಹಾಕಿಟ್ಟಿರುವ ಬಿದಿರು ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಕೂಡಲೇ ವಿಲೇವಾರಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

Advertisement

Udayavani is now on Telegram. Click here to join our channel and stay updated with the latest news.

Next