Advertisement

ಭಾರಿ ಮಳೆಗೆ ಸಿಲುಕಿದ ಕರಾವಳಿ: ಅಪಾರ ಹಾನಿ, ಸಂಚಾರ ಅಸ್ತವ್ಯಸ್ತ

10:00 AM Aug 09, 2019 | keerthan |

ಮಣಿಪಾಲ: ಕಳೆದ ಕೆಲವು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ಹಲವೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಹಲವು ಕಡೆಗಳಲ್ಲಿ ನೆರೆ ನೀರು ರಸ್ತೆಗೆ ನುಗ್ಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

Advertisement

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಕೊಡಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕೂಡ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕಾಪು: ಪುರಸಭೆ ವ್ಯಾಪ್ತಿಯ ಮಲ್ಲಾರು ಜನಾರ್ದನ ದೇವಸ್ಥಾನ ಬಳಿಯ ಮನೆಯ ಮೇಲೆ ಮರ ಬಿದ್ದು, ಅಪಾರ ಸೊತ್ತು ಹಾನಿ ಉಂಟಾಗಿದೆ. ರಾತ್ರಿ ಬೀಸಿದ ಗಾಳಿ ಮಳೆಯಿಂದಾಗಿ ಲಲಿತಾ ಎಂಬವರ ಮನೆಯ ಮೇಲೆ ತೆಂಗಿನ‌ಮರ ತುಂಡಾಗಿ ಬಿದ್ದಿದ್ದು ಮನೆ ಸಂಪೂರ್ಣ ಹಾನಿಗೀಡಾಗಿದೆ. ಎಲ್ಲರೂ ಮನೆಯೊಳಗೆ ಮಲಗಿರುವಾಗಲೇ ಘಟನೆ ಸಂಭವಿಸಿದ್ದು, ಲಲಿತ ಮತ್ತು ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

Advertisement

ಸುಳ್ಯ: ತಾಲೂಕಿನ ಕಲ್ಮಕಾರು ಗ್ರಾಮದ ಗುಳಿಕ್ಕಾನದ 11 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಕಲ್ಮಕಾರು ಸ.ಹಿ ಪ್ರಾಥಮಿಕ ಶಾಲಾ ಕೇಂದ್ರದ ರಂಗಮಂದಿರದಲ್ಲಿ ತಾತ್ಕಾಲಿಕ ಗಂಜಿ ಕೇಂದ್ರ ತೆರೆದು ಆಶ್ರಯ ನೀಡಲಾಗಿದೆ. ಕಳೆದ ಅಗಸ್ಟ್ ನಲ್ಲಿ ಭಾರಿ ಭೂಕುಸಿತ ನಡೆದ ಸ್ಥಳದ ತಳ ಭಾಗದಲ್ಲಿ ವಾಸಿಸುತಿದ್ದ ಕುಟುಂಬಗಳು ಮತ್ತೆ ತೀವ್ರ ಮಳೆಗೆ ಗುಡ್ಡ ಕುಸಿಯುವ ಭೀತಿಯಲ್ಲಿವೆ . ಗಂಜಿ ಕೇಂದ್ರದ ಸಂತ್ರಸ್ಥರಿಗೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದಿಂದ ಊಟೋಪಚಾರ ಸರಬರಾಜು ಮಾಡಲಾಗುತ್ತಿದೆ.

 

ಉದನೆ ಹೆದ್ದಾರಿ ಜಲಾವೃತ. ವಾಹನ ಸಂಚಾರ ಬಂದ್
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ರಸ್ತೆಗೆ ಕೆಂಪುಹೊಳೆ (ಅಡ್ಡಹೊಳೆಯ) ನೆರೆ ನೀರು ಬಂದಿದ್ದು ವಾಹನಗಳ ಸಂಚಾರಕ್ಕೆ ತಡೆಯುಂಟಾಗಿದೆ. ಪೆರಿಯಶಾಂತಿ -ಮರ್ದಾಳ -ಸುಬ್ರಮಣ್ಯ – ಕೈಕಂಬ- ಗುಂಡ್ಯ ರಸ್ತೆಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next