Advertisement

ಬೆಂಗಳೂರಿನಲ್ಲಿ ಭಾರಿ ಮಳೆ: ಶಿವಮೊಗ್ಗದ ಇಂಜಿನಿಯರ್‌ ನೀರು ಪಾಲು

09:36 PM Jun 18, 2022 | Team Udayavani |

ಕೆ.ಆರ್.ಪುರ: ನಗರದಲ್ಲಿ ತಡರಾತ್ರಿ ಸುರಿದ ಭಾರಿ‌ ಮಳೆಗೆ ಯುವಕನೊರ್ವ ನೀರು ಪಾಲಾದ ಘಟನೆ ಕೆ ಆರ್ ಪುರದ ಗಾಯತ್ರಿ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ.

Advertisement

ಶಿವಮೊಗ್ಗದ ಸಾಗರದ ಮೂಲದ  ಸಿವಿಲ್ ಎಂಜಿನಿಯರ್ ಮಿಥುನ್ (24) ನೀರುಪಾಲಾದ ವ್ಯಕ್ತಿ.

ಸೀಗೆಹಳ್ಳಿ ಕೆರೆ ಸಂಪರ್ಕ ಕಲ್ಪಿಸುವ ಗಾಯತ್ರಿ ಬಡವಾಣೆಯ ರಾಜಕಾಲುವೆಯಲ್ಲಿ  ತಡರಾತ್ರಿ ಸುಮಾರು 12 ಗಂಟೆಗೆ ನೀರು ಸಂಪೂರ್ಣವಾಗಿ ಅವರಿಸಿಕೊಂಡಿತ್ತು. ಈ ವೇಳೆ ಯುವಕ ವಾಸವಿದ್ದ ಕಟ್ಟಡದ ಬಳಿ ಕಾಂಪೌಂಡ್ ಕುಸಿದು ಬಿದ್ದಿದ್ದು, ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ಯುವಕನ ಬೈಕ್ ಕೊಚ್ಚಿಕೊಂಡು ಹೋಗಲು ಆರಂಭವಾಗಿದೆ. ಈ ವೇಳೆ ಯುವಕ ಬೈಕ್ ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಬೈಕ್ ಜೊತೆಗೆ   ನೀರಿನಲ್ಲಿ ಯುವಕ ಕೊಚ್ಚಿಹೋಗಿದ್ದಾನೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂಎಸ್.ಡಿ.ಆರ್.ಎಫ್ ಸಿಬ್ಬಂದಿ ಆಗಮಿಸಿದ್ದು, ಮಿಥುನ್ ಪತ್ತೆ ಕಾರ್ಯ ಆರಂಭವಾಗಿದೆ. ಘಟನೆ ಸ್ಥಳಕ್ಕೆ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಪಂಚಾಯತ್‌ ಪ್ರತಿನಿಧಿಗಳಿಂದ ಕಿರಿಕುಳ: ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ

Advertisement

ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿ ಜಲಾವೃತ

ಕೆ.ಆರ್.ಪುರಂ ದಕ್ಷಿಣ ವಲಯ 4ರ ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿ ನೀರಿನಿಂದ ಆವೃತವಾಗಿದ್ದು ಮೂರರಿಂದ ನಾಲ್ಕು ಅಡಿ ನೀರು ನಿಂತು ಕಚೇರಿಯ ಹಲವು ಮಹತ್ವದ  ದಾಖಲೆ ಪತ್ರಗಳು ಹಾಗೂ ಪೀಠೋಪಕರಣ ಗಳು, 16ಕ್ಕೂ ಹೆಚ್ಚು ಕಂಪ್ಯೂಟರ್ ಇನ್ನಿತರ ಲಕ್ಷಾಂತರ ಮೌಲ್ಯದ  ವಸ್ತುಗಳು ಸಂಪೂರ್ಣ ಜಲಾವೃತವಾಗಿದೆ.

ಬಿಇ ಓ ಕಚೇರಿ ಸ್ವಂತ ಕಟ್ಟಡವಿಲ್ಲದೆ ತ್ರೀವೇಣಿನಗರ ಪ್ರಾಥಮಿಕ ಹಿರಿಯ ಶಾಲೆಯ ಕಟ್ಟಡದದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಆವರಣದಲ್ಲಿ ನೀರು ನಿಂತಿದೆ. ಸಿಬ್ಬಂದಿಗಳು ದಾಖಲೆಗಳನ್ನು ಸಂಗ್ರಹಿಸಲು ಪರದಾಡಿದ ಪ್ರಸಂಗ ನಡೆದಿದೆ. ಪ್ರತಿ ಸಲ ಮಳೆ ಬಂದಾಗ ಈ ರೀತಿಯ ಸಮಸ್ಯೆ ಉಂಟಾಗುತ್ತಿದೆ  ಪ್ರತಿ ಸಲ ದಾಖಲೆಗಳು ಸಂಗ್ರಹಿಸಲು ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮೃತ ದೇಹ ಶೋಧ ಕಾರ‍್ಯ: ಈ ಕುರಿತು ಮಾಹಿತಿ ನೀಡಿದ ಕೆಳದಿ ಗ್ರಾಪಂ ಪಿಡಿಒ ಅಶ್ಪಾಕ್ ಅಹಮ್ಮದ್ ಮಾತನಾಡಿ, ಮಿಥುನ್ ಆಕಸ್ಮಿಕ ಮರಣ ಬೇಸರದ ವಿಷಯ. ಕುಟುಂಬದವರನ್ನು ಭೇಟಿ ಮಾಡಿದ್ದೇನೆ. ಅಲ್ಲದೆ ಬೆಂಗಳೂರಿನ ಅಧಿಕಾರಿಗಳ ಜತೆ ಸಹ ಸಂಪರ್ಕದಲ್ಲಿ ಮೃತದೇಹ ಶೋಧ ಕಾರ‍್ಯ ನಡೆಯುತ್ತಿದ್ದು, ಎನ್‌ಟಿಆರ್‌ಎಫ್ ತಂಡ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ‍್ಯಾಚರಣೆ ನಡೆಸಿದ್ದಾರೆ. ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಶಾಸಕ ಎಚ್.ಹಾಲಪ್ಪ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next