Advertisement

Rain;ಚಿಕ್ಕಮಗಳೂರಿನ 6 ತಾಲೂಕುಗಳಲ್ಲಿ ಪ್ರೌಢ ಶಾಲೆಗಳವರೆಗೆ,ಕೊಡಗಿನಲ್ಲಿ ಪಿಯುಸಿವರೆಗೆ ರಜೆ

08:31 PM Jul 25, 2024 | Team Udayavani |

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಭಾರೀ ಗಾಳಿ-ಮಳೆ ಮುಂದುವರಿದಿದ್ದು ಜುಲೈ 26 ರಂದು (ಶುಕ್ರವಾರ) ಒಂದು ದಿನ ಮಾತ್ರ ಮಲೆನಾಡು ಭಾಗದ 6 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.

Advertisement

ಮಳೆ ಪ್ರಮಾಣ ಕಡಿಮೆ ಇದ್ದರು ಜಿಲ್ಲೆಯಾದ್ಯಂತ ಭಾರೀ ಗಾಳಿ ಬೀಸುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ನಾಳೆ ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್‌.ಪರ ತಾಲೂಕಿನ ಅಂಗನವಾಡಿ, ಪ್ರಾಥಮಿಕ-ಪ್ರೌಢ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸಲಹೆ ನೀಡಿದೆ.

ಜಿಲ್ಲಾದ್ಯಂತ ರಜೆ

ಕೊಡುಗು ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದ್ದು , ಜಿಲ್ಲಾದ್ಯಂತ ಅಂಗನವಾಡಿಯಿಂದ ಪಿಯುಸಿವರೆಗೆ ಜುಲೈ 26 ರಂದು (ಶುಕ್ರವಾರ) ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ಜಿಲ್ಲಾಧಿಕಾರಿ ವೆಂಕಟ್ ರಾಜ ಅವರು ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next