Advertisement
ಮಂಗಳೂರು ಸೇರಿದಂತೆ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಸುಳ್ಯ, ಸುಬ್ರಹ್ಮಣ್ಯ, ಎಣ್ಮೂರು, ಕಲ್ಮಡ್ಕದಲ್ಲಿ ಬೆಳಗ್ಗೆ ಬಿರುಸಿ ನಿಂದ ಕೂಡಿದ ಗಾಳಿ-ಮಳೆಯಾಗಿದ್ದು, ಬಳಿಕ ಬಿಟ್ಟು ಬಿಟ್ಟು ಮಳೆ ಸುರಿದಿದೆ. ಉಡುಪಿ ಸಹಿತ ಕುಂದಾಪುರ, ಕಾರ್ಕಳ ದಲ್ಲಿಯೂ ಬೆಳಗ್ಗೆ, ಸಂಜೆ ಗಾಳಿ ಮಳೆಯಾಗಿದೆ. ಕಾಸರ ಗೋಡು, ಅಡ್ಯನಡ್ಕದಲ್ಲಿ ಸುಂಟರಗಾಳಿ ಬೀಸಿದೆ. ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮುಂದಿನ ಕೆಲ ದಿನ ಮಳೆಯ ಬಿರುಸು ತುಸು ಕಡಿಮೆ ಇರಲಿದೆ. ಜು.24ರ ಬೆಳಗ್ಗೆವರೆಗೆ ಆರೆಂಜ್ ಅಲರ್ಟ್ ಇದೆ.
ರಾತ್ರಿ 9.30ರ ಸುಮಾರಿಗೆ ಬೀಸಿದ ಭಾರಿ ಸುಂಟರಗಾಳಿಗೆ ಕಾವೂರು ಜಂಕ್ಷನ್‌ನಲ್ಲಿರುವ ಕಟ್ಟಡ ಒಂದರ ತಗಡು-ಶೀಟು ಹಾಕಲಾದ ಮೇಲ್ಛಾವಣಿ ಗಾಳಿಗೆ ಹಾರಿ ಬಿದ್ದಿದ್ದು ಕಾರು, ಆಟೋರಿಕ್ಷಾ ಬೈಕ್ ಸೇರಿದಂತೆ ಹಲವು ವಾಹನಗಳು ಹಾನಿ ಗೊಂಡವು. ಬಂಟ್ವಾಳ: ಸಂಚಾರಕ್ಕೆ ತೊಂದರೆ
ಬಂಟ್ವಾಳ: ಬಿ.ಸಿ.ರೋಡಿನ ಸರ್ಕಲ್ ಬಳಿ ಮಂಗಳವಾರ ರಾತ್ರಿ ಹೆದ್ದಾರಿಗೆ ವಿದ್ಯುತ್ ಕಂಬವೊಂದು ತುಂಡಾಗಿ ಬಿದ್ದು, ಕೆಲಹೊತ್ತು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈ ವೇಳೆ ವಾಹನಗಳನ್ನು ಪರ್ಯಾಯ ರಸ್ತೆಯ ಮೂಲಕ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಯಿತು.
Related Articles
ಮೂಡುಬಿದಿರೆ, ಜು. 23: ಸೋಮವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕಡಂದಲೆ ಗ್ರಾಮ ವ್ಯಾಪ್ತಿಯ ಜೋಡಿಕಟ್ಟೆ ಬಡಗಬೆಟ್ಟುನಲ್ಲಿರುವ ಕೆ. ಬಿ. ಕೃಷ್ಣ ಮೂರ್ತಿ ಭಟ್ ಅವರ ಮನೆಯ ದೈವಸ್ಥಾನದ ಮೇಲೆ ಮರ ಬಿದ್ದು ಹಾನಿ ಆಗಿದೆ. ಎರಡು ವಿದ್ಯುತ್ ಕಂಬಗಳು ತುಂಡಾಗಿ ರಸ್ತೆ ಮೇಲೆ ಬಿದ್ದಿವೆ.
Advertisement
ಜೋಡಿಕಟ್ಟೆ ಮುದಲಗಡಿ ಜೋನ್ ಫೆರ್ನಾಂಡಿಸ್ ಅವರ ಮನೆ ಮೇಲೆ ಮರ ಬಿದ್ದು ಅಪಾರ ಹಾನಿ ಆಗಿದೆ.ಘಟನೆ ನಡೆದ ಸ್ಥಳಕ್ಕೆ ಪಿಡಿಒ ರಕ್ಷಿತಾ ಡಿ., ಗ್ರಾಮ ಲೆಕ್ಕಿಗ ಅನಿಲ್ ಕುಮಾರ್, ಸಿಬಂದಿ ರಿತೇಶ್, ಗ್ರಾಮ ಪಂ. ಸದಸ್ಯ ಜಗದೀಶ್ ಕೋಟ್ಯಾನ್, ಮಾಜಿ ಗ್ರಾ. ಪಂ. ಅಧ್ಯಕ್ಷ ಜಗದೀಶ್ ಕಲ್ಲೋಟ್ಟು ಭೇಟಿ ನೀಡಿ ಪರಿಶೀಲನೆ ನಡೆಸಿದರು.