Advertisement

ನೆರೆ ನೀರಿನಲ್ಲಿ ಮಕ್ಕಳಿಬ್ಬರನ್ನು ಹೊತ್ತು ಸಾಗಿದ ಜಡೇಜಾ!

08:31 AM Aug 12, 2019 | keerthan |

ಗುಜರಾತ್: ಭೀಕರ ಪ್ರವಾಹಕ್ಕೆ ತುತ್ತಾದ ಗ್ರಾಮವೊಂದರಿಂದ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಸಾಗಿದ ಪೋಲಿಸ್ ಪೇದೆಯ ಸಾಹಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ .

Advertisement

ಗುಜರಾತ್ ನ ಮೋರ್ಬಿ ಜಿಲ್ಲೆಯ ಕಲ್ಯಾಣಪುರ  ಗ್ರಾಮವು ಭಾರಿ ಮಳೆಯಿಂದ ನೆರೆಗೆ ಸಿಲುಕಿದ್ದು ಜನಜೀವನ ಅಸ್ತವ್ಯಸ್ತಗೊಂಡಿತ್ತು, ಈ ವೇಳೆ ನೆರೆ ಪೀಡಿತರ ರಕ್ಷಣೆಯ ಕರ್ತವ್ಯದ ತಂಡದಲ್ಲಿದ್ದ ಪೋಲಿಸ್ ಪೇದೆ ಪೃಥ್ವಿರಾಜ್  ಜಡೇಜಾ, ಸೊಂಟದವರೆಗೂ ನೀರು ಆವರಿಸಿದ್ದರೂ ಲೆಕ್ಕಿಸದೇ ಎರಡು ಮಕ್ಕಳನ್ನು 1.5  ಕಿಲೋಮೀಟರ್ ವರೆಗೂ ಹೆಗಲ ಮೇಲೆ ಹೊತ್ತುಕೊಂಡು ಸಾಗಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಪೇದೆಯ ಈ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next