ಚೆನ್ನೈ: ತಮಿಳುನಾಡಿನಕರಾವಳಿ ಭಾಗದಲ್ಲಿ ಕಳೆದ 3 ದಿನಗಳಿಂದ ವರುಣ ಆರ್ಭಟಿಸುತ್ತಿದ್ದು, ಶುಕ್ರವಾರ ಚೆನ್ನೈ ನಗರ ಮಳೆಯಿಂದಾಗಿ ತತ್ತರಿಸಿ ಹೋಗಿದ್ದು ಜನಜೀವನ ತೀವ್ರ ಅಸ್ತವ್ಯಸ್ತವಾಗಿದೆ.
ಮಳೆ ಹಿನ್ನಲೆಯಲ್ಲಿ ಚೆನ್ನೈ ಮತ್ತು ಕಂಚೀಪುರಂ ಜಿಲ್ಲೆಗಳ ಶಾಲಾ ಕಾಲೇಜುಗಳಗೆ ರಜೆ ಸಾರಲಾಗಿದೆ.
ಗುರುವಾರ ಚೆನ್ನೈ ನಗರದಲ್ಲಿ ದಾಖಲೆಯ 12 ಸೇ.ಮಿ ಮಳೆಯಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು.ರಸ್ತೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದು ವಾಹನ ಸವಾರರು ಪರದಾಡಬೇಕಾಗಿದೆ.
2015 ರಲ್ಲಿ ನೆರೆ ಪೀಡಿತವಾಗಿ ತತ್ತರಿಸಿ ಹೋಗಿದ್ದ ವರದರಾಜಪುರಂ, ಮುಡಿಚೂರ್ ಪ್ರದೇಶದ ನಿವಾಸಿಗಳು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.
ಶಾಲೆಗೆ ರಜೆ ಇದ್ದ ಕಾರಣ ಆಟವಾಡುತ್ತಿದ್ದ ಮಕ್ಕಳಿಬ್ಬರು ವಿದ್ಯುತ್ ಶಾಕ್‌ಗೀಡಾಗಿ ದಾರುಣವಾಗಿ ಸಾವನ್ನಪ್ಪಿದಅವಘಡ ಆರ್.ಆರ್.ನಗರದಲ್ಲಿ ನಡೆದಿರುವ ಬಗ್ಗೆ ವರದಿಆಯಗಿದೆ. ಘಟನೆಯಲ್ಲಿ ಇನ್ನೊಬ್ಬಳು ಬಾಲಕಿ ಪವಾಡಸದೃಶವಾಗಿ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.