Advertisement

Heavy Rain: ಮೂಡುಬಿದಿರೆ ತಾಲೂಕಿನ ವಿವಿಧೆಡೆ ಹಾನಿ; ಓರ್ವ ಮಹಿಳೆ ಸಾವು

01:23 PM Aug 01, 2024 | Team Udayavani |

ಮೂಡುಬಿದಿರೆ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಲೂಕಿನ ಹಲವೆಡೆ ಮನೆ, ಕಟ್ಟಡ, ತಡೆಗೋಡೆ, ಅವರಣ ಗೋಡೆ, ಸೇತುವೆ ಕುಸಿತ, ರಸ್ತೆಗಳು ಕೊಚ್ಚಿಹೋದ ಪ್ರಕರಣಗಳು ವರದಿಯಾಗಿವೆ.

Advertisement

ನೆಲ್ಲಿಕಾರು ಗ್ರಾಮದಲ್ಲಿ ಗೋಪಿ ಎಂಬವರ ಮನೆ ಮಳೆಯಿಂದಾಗಿ ಜು.31ರ ಬುಧವಾರ ರಾತ್ರಿ ಸುಮಾರು 10 ಗಂಟೆಗೆ  ಕುಸಿದು ಬಿದ್ದಿದೆ.

ಮಕ್ಕಳು, ಮೊಮ್ಮಕ್ಕಳ ಸಹಿತ 5 ಮಂದಿಯೊಂದಿಗೆ ವಾಸವಾಗಿರುವ ಗೋಪಿ (56) ಅವರಿಗೆ ತೀವ್ರ ಏಟು ತಗಲಿದ್ದು, ತಕ್ಷಣ ಹೊಸ್ಮಾರು ಆಸ್ಪತ್ರೆಗೆ ಬಳಿಕ ಕಾರ್ಕಳ ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗದೆ ತಡರಾತ್ರಿ ಮೃತಪಟ್ಟರು.

ಮಳೆಯಿಂದಾಗಿ ತಾಲೂಕಿನಲ್ಲಿ ಈ ಮಳೆಗಾಲದಲ್ಲಿ ಜೀವಹಾನಿ ಸಂಭವಿಸಿರುವ ಮೊದಲ ಪ್ರಕರಣ ಇದಾಗಿದೆ.

ಮುರಕಲ್ಲಿನ ಗೋಡೆ ಕುಸಿದು ಗೋಪಿ ಅವರ ಮೇಲೆಯೇ ಬಿತ್ತೆಂದೂ ಮಕ್ಕಳಾದ ಗಣೇಶ, ರಾಜೇಶ, ಸತೀಶ ಹೊರಗೆ ಓಡಿ ಹೋದ ಕಾರಣ ಪ್ರಾಣಾಪಾಯದಿಂದ ಪಾರಾದರೆಂದೂ ಹೇಳಲಾಗಿದೆ. ಮಕ್ಕಳೆಲ್ಲರೂ ಕೂಲಿ ಕಾರ್ಮಿಕರು.

Advertisement

ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ತಹಶೀಲ್ದಾರ್ ಪ್ರದೀಪ್ ವಿ. ಕುರ್ಡೇಕರ್, ಆರ್ ಐ. ಮಂಜುನಾಥ್, ನೆಲ್ಲಿಕಾರು ಪಂ. ಅಧ್ಯಕ್ಷ ಉದಯ ಪೂಜಾರಿ,‌ ಪಿಡಿಓ ಪ್ರಶಾಂತ ಶೆಟ್ಟಿ, ಕಾರ್ಯದರ್ಶಿ ದಾಮೋದರ, ಸಿಬಂದಿ ಪ್ರಶಾಂತ್ ಜೈನ್, ಲಕ್ಷ್ಮಣ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next