ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ನದಿಗಳೆಲ್ಲವೂ ಉಕ್ಕಿ ಹರಿಯುತ್ತಿದೆ. ಮಳೆಯ ಅವಾಂತರದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ನದಿಗಳು ಉಕ್ಕಿ ಹರಿಯುತ್ತಿದೆ. ಭದ್ರಾ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಬಾಳೆಹೊನ್ನೂರಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಇದನ್ನೂ ಓದಿ: ಜೀವನದ ಕೊನೆಯ ಟ್ರಿಪ್ ಆದ ದಿನದ ಕೊನೆಯ ಟ್ರಿಪ್ : ಹೊಂಡಕ್ಕೆ ಟಿಪ್ಪರ್ ಬಿದ್ದು ಇಬ್ಬರು ಸಾವು
ಭಾರಿ ಮಳೆಯಿಂದಾಗಿ ಕಳಸ ಸಮೀಪದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಕಳೆದ ಮೂರು ದಿನಗಳಿದ ಸೇತುವೆ ಮುಳಗಡೆ ಸ್ಥಿತಿಯಲ್ಲಿದೆ. ಇದರಿಂದಾಗಿ ಮೂರು ದಿನದಿಂದ ಕಳಸ ಹೊರನಾಡು ಸಂಪರ್ಕ ಕಡಿತವಾಗಿದೆ. ಸೇತುವೆ ಮೇಲೆ ಆರು ಅಡಿಗಳಷ್ಟು ನೀರು ನಿಂತಿದ್ದು, ಹೆಬ್ಬಾಳೆ ಸೇತುವೆ ಪಕ್ಕದಲ್ಲಿದ್ದ ಅಂಗಡಿಯೂ ಜಲಾವೃತವಾಗಿದೆ. ರಸ್ತೆ ಸಂಪರ್ಕವಿಲ್ಲದೆ ಜನರು ಪರದಾಟ ಪಡುತ್ತಿದ್ದಾರೆ.
ಇದನ್ನೂ ಓದಿ: ಮಳೆಯ ಅಬ್ಬರ: ದಿಡುಪೆಯಲ್ಲಿ ಕೃಷಿ ಭೂಮಿಗೆ ನುಗ್ಗಿದ ನೀರು,ಅಪಾಯಮಟ್ಟ ಮೀರುತ್ತಿರುವ ನೇತ್ರಾವತಿ