Advertisement
ಬೆಳ್ತಂಗಡಿ ತಾ|ನಲ್ಲಿ ಬಿರುಸಿನ ಮಳೆಯಾಗಿದ್ದು, ಚಾರ್ಮಾಡಿ ಘಾಟಿ ಬಳಿ ಭೂ ಕುಸಿತವಾಗಿದೆ. ಉಜಿರೆಯ ಮುಖ್ಯ ರಸ್ತೆ ಜಲಾವೃತಗೊಂಡಿದ್ದು, ಕೃತಕ ನೆರೆ ಆವರಿಸಿದೆ. ಲಾೖಲ ಸಮೀಪ ವಿದ್ಯುತ್ ಪರಿವರ್ತಕದ ಮೇಲೆ ಮರ ಬಿದ್ದು, 7 ವಿದ್ಯುತ್ ಕಂಬಗಳಿಗೆ ಹಾನಿ ಸಂಭವಿಸಿದೆ. ಕಾಶಿಬೆಟ್ಟು ಸಮೀಪ ಮೋರಿ ಕುಸಿತ
Related Articles
Advertisement
ಉಪ್ಪಿನಂಗಡಿ: ಗುರುವಾರ ಉಪ್ಪಿನಂಗಡಿ ಪರಿಸರದಲ್ಲಿ ಭಾರೀ ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಹಾನಿ ಸಂಭವಿಸಿದೆ.
ಉಪ್ಪಿನಂಗಡಿ ಪೇಟೆಯ ಹಲವೆಡೆ ಕಟ್ಟಡಗಳ ಮೇಲ್ಛಾವಣಿ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಹಾನಿಗೀಡಾದರೆ, ಪೇಟೆಯ ಪೀಟೋಪಕರಣ ಮಳಿಗೆಯ ಗಾಜುಗಳು ಗಾಳಿಯ ರಭಸಕ್ಕೆ ಒಡೆದು ಹೋಗಿವೆೆ. ಪೆರ್ನೆ ಬಳಿ ಮರವೊಂದು ಹೆದ್ದಾರಿಗಡ್ಡವಾಗಿ ಬಿದ್ದು, ವಿದ್ಯುತ್ ಕಂಬಗಳು ಹಾನಿಗೀಡಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗಿತ್ತು. ಹೆದ್ದಾರಿ ಸಂಚಾರಕ್ಕೆ ಕೆಲ ಸಮಯ ಅಡೆ ತಡೆಯುಂಟಾಗಿದೆ. ಬಿರುಗಾಳಿಯ ಹೊಡೆತಕ್ಕೆ ಉಪ್ಪಿನಂಗಡಿಯ ಮಠ, ಪೆರಿಯಡ್ಕ, ಸುಬ್ರಹ್ಮಣ್ಯ ಕ್ರಾಸ್ ಪರಿಸರದಲ್ಲಿ ಮರ ಬಿದ್ದು, ಛಾವಣಿಗೆ ಹಾಕಲಾದ ಶೀಟುಗಳು ಹಾರಿ ಹೋಗಿ ಹಾನಿಯುಂಟಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಹೆದ್ದಾರಿ ಬದಿಯ ಬೃಹತ್ ಮರವೊಂದು ಗಾಳಿ ಮಳೆಗೆ ಕಾಂಕ್ರಿಟ್ ರಸ್ತೆಯ ಮೇಲೆ ಬಿದ್ದಿದೆ. ಇಲ್ಲಿ ಹೆದ್ದಾರಿ ಕಾಮಗಾರಿ ವೇಳೆ ಮರದ ಬುಡದ ಮಣ್ಣು ತೆಗೆಯಲಾಗಿದ್ದು ಇದರಿಂದಾಗಿ ಮರಬಿದ್ದಿದೆ. ಹೆದ್ದಾರಿಯ ಎರಡು ಬದಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಉಡುಪಿ ಜಿಲ್ಲೆ: ಉತ್ತಮ ಮಳೆ :
ಉಡುಪಿ: ಉಡುಪಿ, ಕಾರ್ಕಳ ಮತ್ತು ಕುಂದಾಪುರ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ರಭಸವಾಗಿ ಗಾಳಿ ಕೂಡ ಬೀಸಿದ್ದು, ಮನೆಗಳ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಬೆಳ್ಮಣ್ ಗ್ರಾಮದ ಪಡು ಬೆಳ್ಮಣ್ ಮಹಾಲಿಂಗೇಶ್ವರ ದೇಗುಲದ ಮೇಲ್ಛಾವಣಿ ಗಾಳಿಗೆ ಹಾರಿ ಬಿದ್ದಿದೆ.
ಮಳೆ ಹಾನಿ: ಮೂಡುಬಿದಿರೆ ವೀರಭದ್ರ ದೇಗುಲಕ್ಕೆ ಹಾನಿ :
ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169 ಹಾದುಹೋಗುವ, ಮೂಡು ಬಿದಿರೆಯ ಕಲ್ಸಂಕ ಬಳಿ ಇರುವ ಪುರಾತನ ಶ್ರೀ ವೀರಭದ್ರ ದೇವಸ್ಥಾನದ ಉತ್ತರ ಭಾಗದ ಮಣ್ಣಿನ ಗೋಡೆ ಕುಸಿದುಬಿದ್ದಿದೆ.