Advertisement

ಕೇರಳ: ಭರ್ಜರಿ ಮಳೆಗೆ ಜನಜೀವನ ಅಸ್ತವ್ಯಸ್ತ

10:47 PM Aug 04, 2022 | Team Udayavani |

ತಿರುವನಂತಪುರ/ಚಂಡೀಗಢ: ಕೇರಳದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಹೀಗಾಗಿ, ಅಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹದಿಂದಾಗಿ ಹಲವು ಜಿಲ್ಲೆಗಳಲ್ಲಿ ರಸ್ತೆಗಳು ಕೊಚ್ಚಿ ಹೋಗಿರುವುದರಿಂದಾಗಿ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ, ಜನರಿಗೆ ಪರಿಹಾರ ಕೇಂದ್ರಗಳಿಗೆ ತೆರಳಲೂ ಅನಾನುಕೂಲ ಉಂಟಾಗಿದೆ.

Advertisement

ಮಳೆಯಿಂದಾಗಿ ಪತನಂತಿಟ್ಟ ಜಿಲ್ಲೆಯ ಪಂಪಾ, ಮನಿಮಾಲಾ ಮತ್ತು ಅಚನ್‌ಕೋವಿಲ್‌ ನದಿಗಳು ಉಕ್ಕಿ ಹರಿದಿವೆ. ಕೊನ್ನಿ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರದ ಚಾವಣಿ ಹಾರಿಹೋಗಿದೆ. ಇಡುಕ್ಕಿ ಜಿಲ್ಲೆಯಲ್ಲಿ ಇರುವ ಮಲಂಕರ ಅಣೆಕಟ್ಟಿನ ಆರು ಗೇಟುಗಳನ್ನು ತೆರೆಯ ಲಾಗಿದೆ. ಕೊಟ್ಟಾಯಂ, ತ್ರಿಶ್ಶೂರ್‌ ಮತ್ತು ಕಲ್ಲಿಕೋಟೆ ಜಿಲ್ಲೆಗಳಲ್ಲೂ ಧಾರಾಕಾರ ಮಳೆಯಾಗಿದೆ. ಕಲ್ಲಿಕೋಟೆ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಆಗಮಿಸಬೇಕಾಗಿದ್ದ ವಿಮಾನಗಳಿಗೆ ಲ್ಯಾಂಡ್‌ ಆಗಲು ಅಸಾಧ್ಯವಾಗಿದೆ. ಹೀಗಾಗಿ, ಅವುಗಳನ್ನು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಡಲಾಗಿತ್ತು.

ಹಳಿಯ ಮೇಲೆ ಕುಸಿದ ಮಣ್ಣು :

ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದೆ. ಇದರಿಂದಾಗಿ  ಶಿಮ್ಲಾ  ಕಲ್ಕಾ ರೈಲು ಮಾರ್ಗದ ಹಳಿಯ ಮೇಲೆ ಬಿದ್ದಿದೆ. ಸೋಲನ್‌ ಜಿಲ್ಲೆಯ ಪಟ್ಟಾ ಮೋರ್‌ ಎಂಬ ಲ್ಲಿಗೆ 50 ಮಂದಿ ಪ್ರಯಾಣಿಕರಿರುವ ರೈಲು ಆಗಮಿ ಸುತ್ತಿ ದ್ದಂತೆಯೇ ಭೂಕುಸಿತ ಸಂಭವಿಸಿದೆ. ಈ ಬಗ್ಗೆ ಮುನ್ಸೂ ಚನೆ ದೊರೆ ಯುತ್ತಿದ್ದಂತೆಯೇ ಚಾಲಕ ರೈಲನ್ನು ನಿಧಾನಗೊಳಿಸಿದ್ದ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next